ದಾದಾಗೌಡರ ಪುತ್ಥಳಿ ನಿರ್ಮಾಣಾ ಮಾಡುತ್ತೆನೆ: ರವಿಕಾಂತ ಪಾಟೀಲ
I will build a statue of Dadagouda: Ravikant Patil
ಲೋಕದರ್ಶನ ವರದಿ
ಇಂಡಿ 17 : ದಿ. ದಾದಾಗೌಡ ಪಾಟೀಲರ ಪುಥ್ಥಳಿಯನ್ನು ಇನ್ನೆರಡು ತಿಂಗಳಲ್ಲಿ ದಿ. ದಾದಾಗೌಡ ಪಾಟೀಲರ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆ ಪುಥ್ಥಳಿಗೆ ಅವಶ್ಯವಿರುವ ಹಣವನ್ನು ನಾನೇ ನೀಡುತ್ತೇನೆ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳೀದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಕಾರ್ಯಕರ್ತರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾದಾಗೌಡರು ನನ್ನ ರಾಜಕೀಯ ಗುರುಗಳಾಗಿದ್ದರು. ನನ್ನನ್ನು ಮೊದಲನೇ ಬಾರಿಗೆ ಇಂಡಿ ನಗರಕ್ಕೆ ಕರೆತಂದು ಶಾಸಕನಾಗಿ ಮಾಡಿದ ಕೀರ್ತಿ ದಾದಾಗೌಡರಿಗೆ ಸಲ್ಲುತ್ತದೆ. ಹೀಗಾಗಿ ಅವರ ಮೂರ್ತಿ ನಿರ್ಮಾಣದ ವೆಚ್ಚ ನಾನೇ ಸ್ವತಃ ನೀಡುತ್ತೇನೆ ಎಂದರು. ಶಾಸಕ ಯಶವಂತ್ರಾಯಗೌಡ ಪಾಟೀಲರು ಇಂಡಿಯನ್ನು ಜಿಲ್ಲಾ ಮಾಡಿಯೇ 2028 ರ ಚುನಾವಣೆ ಎದುರಿಸುತ್ತೇನೆ ಎಂದು ಘೋಷಣೆ ಮಾಡಿದ್ದು ಜಿಲ್ಲಾ ಕೂಗು ಮಂಕಾಗಿ ಸಚಿವ ಸ್ಥಾನದ ಕೂಗು ಹೆಚ್ಚಿಸಿದ್ದಾರೆ. ಜನರನ್ನು ಮರಳು ಮಾಡಲು ಹೇಳಿಕೆ ಕೊಡುವುದನ್ನು ಬಿಟ್ಟು ಕ್ಷೇತ್ರದಲ್ಲಿನ ಹಾಳಾದ ರಸ್ತೆಗಳ ರಿಪೇರಿ ಮಾಡುವತ್ತ ಗಮನ ಹರಿಸಬೇಕು.
ಕೇವಲ ಸಚಿ ಸ್ಥಾನದ ಲಾಬಿ ನಡೆಯುತ್ತಿದ್ದು ಕ್ಷೇತ್ರದಲ್ಲಿ ಅಭಿವೃಧ್ಧಿ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.ನಾನು ಸಹ ಬರುವ 2028 ರಲ್ಲಿ ಕೊನೆಯ ಬಾರಿಗೆ ಸ್ಪರ್ಧೇ ಮಾಡಲಿದ್ದೇನೆ. ಗೆಲುವು-ಸೋಲು ಯಾವುದೇ ಆದರೂ ಮುಂದೆ ರಾಜಕೀಯ ನಿವೃತ್ತಿ ಹೊಂದಲಿದ್ದೇನೆ ಎಂದು ಘೋಷಿಸಿದರು. ಯಶವಂತರಾಯಗೌಡ ಪಾಟೀಲರು ರಾಜಕಾರಣಕ್ಕಾಗಿ ಜಾತಿ-ಜಾತಿಗಳ ಮಧ್ಯ ಕಲಹ ಸೃಷ್ಠಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ. ನಾನು ಶಾಸಕನಾದಾಗಿನಿಂದ ಇಲ್ಲಿಯವರೆಗೂ ಜಾತೀಯತೆ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು.ಈ ಸಂದರ್ಭದಲ್ಲಿ ಅಣ್ಣುಗೌಡ ಪಾಟೀಲ, ವಿ.ಹೆಚ್.ಬಿರಾದಾರ, ಶಂಕರಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಸಿಕಂದರ್ ಬೋರಾಮಣಿ, ಜಗನ್ನಾಥ ಇಂಡಿ, ಶಂಕರ ಬೋರಾಮಣಿ, ಮಲ್ಲು ಕಾಮಾ, ಮಲ್ಲಿಕಾರ್ಜುನ ಶಿವಪೂರ, ಈರಣ್ಣ ಡೆಂಗಿ, ಸಾಯಬಣ್ಣ ಹೊಟಗಿ, ಸುಭಾಸ ಕ್ಷತ್ರಿ, ಬಾಪುಗೌಡ ಪಾಟೀಲ, ಬುಡ್ಡೇಸಾಬ ಮುಲ್ಲಾ, ಕಲ್ಲಪ್ಪ ಘಂಟಿ ಸೇರಿದಂತೆ ಇನ್ನಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 