ನಾನು ಮಹಮ್ಮದ್ ಮುಕ್ತಿಯರ್ ಗೆ ಮೋಸ ಮಾಡಿಲ್ಲ : ರಾಜಭಕ್ಷಿ ಸ್ಪಷ್ಟನೆ
I have not cheated Mohammed Muktiyar: Rajabakshi clarifies
ಬಳ್ಳಾರಿ.ಸೆ. 01 : ಮೊಹಮ್ಮದ್ ಮುಕ್ತಿಯಾರ್ ಎನ್ನುವವರು ಮೊನ್ನೆ ಸುದ್ದಿಗೋಷ್ಠಿಯನ್ನು ನಡೆಸಿ ನನ್ನ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡಿದ್ದಾರೆ, ನಾನು ಮುಕ್ತಿಯರಿಗೆ ಯಾವುದೇ ಮೋಸ ಮಾಡಿಲ್ಲ ಕಾನೂನಾತ್ಮಕವಾಗಿ ನಿವೇಶನವನ್ನು ಮಾರಾಟ ಮಾಡಿ ನೋಂದಣಿ ಮಾಡಿಸಿಕೊಟ್ಟಿದ್ದೇನೆ ಎಂದು ರಾಜಭಕ್ಷಿ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಇದೇ ನಿವೇಶನವನ್ನು 2020ರಲ್ಲಿ ನಗರದ ವೆಂಕಟೇಶ್ವರ ನಗರದಲ್ಲಿರುವ ತಾವು ಖರೀದಿಸಿದ್ದ ಜಾಗಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ನಾರಾಯಣ ಎಂಬುವವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು ಈ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜಯಗಳಿಸಿದ ಬಳಿಕ, ಜಾಗಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರೀಶೀಲಿಸಿ ಪಕ್ಕಾ ದಾಖಲೆಗಳೊಂದಿಗೆ ಮೊಹಮ್ಮದ್ ಮುಕ್ತಿಯಾರ್ ಅವರಿಗೆ 54 ಲಕ್ಷ 80 ಸಾವಿರ ರೂಪಾಯಿಗೆ ಜಾಗವನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದರು.
ನಂತರ ಮೊಹಮ್ಮದ್ ಮುಕ್ತಿಯಾರ್ ಅವರು ಇದೇ ಜಾಗದ ಆಧಾರದ ಮೇಲೆ ಬ್ಯಾಂಕ್‌ನಲ್ಲಿ ಸಾಲವನ್ನೂ ಪಡೆದಿದ್ದಾರೆ. ಅಲ್ಲದೆ, ಪ್ರಕಾಶ್ ಎಂಬುವವರಿಂದ 13 ಲಕ್ಷ ರೂಪಾಯಿ ಮುಂಗಡ ಹಣ ಪಡೆದು ಸೈಟ್ ಮಾರಾಟದ ವ್ಯವಹಾರವನ್ನೂ ನಡೆಸಿದ್ದಾರೆ ಎಂದು ರಾಜಭಕ್ಷಿ ಆರೋಪಿಸಿದರು.ಆರ್ಥಿಕವಾಗಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ನಿವೇಶನ ಮರು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಬಂದ ಮೊಹಮ್ಮದ್ ಮುಕ್ತಿಯಾರ್ ಅವರು ಹೆಚ್ಚಿನ ಬೆಲೆಗೆ ಜಾಗವನ್ನು ಖರೀದಿಸುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಅದಕ್ಕೆ ತಾವು ಒಪ್ಪದ ಕಾರಣ ತಮ್ಮ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಮಾನಹಾನಿಗೆ ಯತ್ನಿಸಿರುವ ಹಿನ್ನೆಲೆಯಲ್ಲಿ ಮೊಹಮ್ಮದ್ ಮುಕ್ತಿಯಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜಭಕ್ಷಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಶೇಕ್ಷವಲಿ, ಖಲೀಮ್, ಪ್ರಕಾಶ್, ಧನುಜಯ್, ಅಕ್ಬರ್, ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 