ಕರ್ನಾಟಕ ಸರ್ಕಾರ ಸಾವಿರ ದಿನ ಪೂರೈಸಿ ವಿಶೇಷ ಸಾಧನೆ ಮಾಡಿದ ಸಂತೃಪ್ತಿ ನನಗಿದೆ: ಎನ್‌.ಹೆಚ್‌. ಕೋನರಡ್ಡಿ

ಕರ್ನಾಟಕ ಸರ್ಕಾರ ಸಾವಿರ ದಿನ ಪೂರೈಸಿ ವಿಶೇಷ ಸಾಧನೆ ಮಾಡಿದ ಸಂತೃಪ್ತಿ ನನಗಿದೆ: ಎನ್‌.ಹೆಚ್‌. ಕೋನರಡ್ಡಿ  I am satisfied that the Karnataka government has achieved a special achievement by completing a thou

ಲೋಕದರ್ಶನ ವರದಿ 

ಹುಬ್ಬಳ್ಳಿ 15 :ಡಾ: ಬಿ.ಆರ್‌. ಅಂಬೇಡ್ಕರ ಅವರ ಸಂವಿಧಾನದಲ್ಲಿ ಸ್ಥಾಪಿತವಾದ ಕರ್ನಾಟಕ ಸರ್ಕಾರ ಸ್ಥಾಪನೆಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಕರ್ನಾಟಕ ಸರ್ಕಾರ ಸಾವಿರ ದಿನ ಪೂರೈಸಿ ಪಂಚಗ್ಯಾರೆಂಟಿ ಜೊತೆಗೆ ಅಭಿವೃದ್ಧಿ ಮಾಡುತ್ತಿರುವ ವಿಶೇಷ ಸಾಧನೆ ಎಂದು ನವಲಗುಂದ ವಿಧಾನ ಸಭಾಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು.  

ಪತ್ರಿಕಾ ಪ್ರಕಟಣೆ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ಬಜೆಟ್ ಮಂಡಿಸಿ ಜನಪರ ಆಡಳಿತನೀಡಿದ ಅವರು ರಾಜ್ಯದಲ್ಲಿ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪಂಚಗ್ಯಾರೆಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಗೃಹಲಕ್ಷ್ಮೀಯೋಜನೆಗಳನ್ನು ಜಾರಿಮಾಡುವ ಮೂಲಕ ನುಡಿದಂತೆ ನಡೆದ ಗ್ಯಾರೆಂಟಿ ಸರ್ಕಾರ ನಮ್ಮದು. ಅದರೊಂದಿಗೆ 6ನೇ ಗ್ಯಾರೆಂಟಿಯಾಗಿ ರಾಜ್ಯದಲ್ಲಿ ಸರ್ಕಾರಿ ಅಥವಾ ಖಾಸಗಿಜಾಗೆಯಲ್ಲಿ ಮನೆಕಟ್ಟಿಕೊಂಡ ಫಲಾನುಭವಿಗಳಿಗೆ ಭೂಗ್ಯಾರೆಂಟಿ ಮೂಲಕ 2 ಲಕ್ಷಕ್ಕೂ ಹೆಚ್ಚುಹಕ್ಕು ಪತ್ರಗಳನ್ನು ವಿತರಿಸುವದು ಇತಿಹಾಸವಾದರೆ 7ನೇ ಗ್ಯಾರೆಂಟಿಯಾಗಿ ಉಪಮುಖ್ಯಮಂತ್ರಿಗಳು ಘೋಷಿಸಿದಂತೆ ರಾಜ್ಯಕ್ಕೆ ನೀರಿನ ಗ್ಯಾರೆಂಟಿ ಕೊಡುವದು ನಿರ್ಧರಿಸಿರುವುದರಿಂದ ಕೃಷ್ಣಹಾಗೂ ಕಾವೇರಿ ಕಣಿವೆಯ ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು ಯೋಜನೆಜಾರಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಪಡೆದು ರಾಜ್ಯಸರ್ಕಾರ ಮುಂದಾಗಿರುವದು ಸಂತಸದ ವಿಷಯ.

ವಿಜಯನಗರ ಜಿಲ್ಲೆಯಲ್ಲಿ ಮೊದಲು ಹಕ್ಕು ಪತ್ರನೀಡಿದ ಕಾರ್ಯಕ್ರಮ, ಹುಬ್ಬಳ್ಳಿಯಲ್ಲಿ 42 ಸಾವಿರ ಜನರಿಗೆ ಮನೆಗಳ ವಿತರಣೆ, ಧಾರವಾಡ ಜಿಲ್ಲೆಯ ನವಲಗುಂದ ವಿದಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದ ಬೆಣ್ಣೆಹಳ್ಳ ಪ್ರವಾಹ ತಡೆಯುವ ಕಾರ್ಯಕ್ರಮಗಳು ಅಭೂತ ಪೂರ್ವಜನ ಸೇರುವ ಮೂಲಕ ರಾಜ್ಯದ ಗಮನ ಸೆಳೆಯಲಾಗಿದೆ. ಇದರೊಂದಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ನಮ್ಮ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಸಾವಿರದಿನ ಪೂರೈಸಿ ವಿಶೇಷ ಸಾಧನೆ ಮಾಡಿದ ಸಂತೃಪ್ತಿ ನನಗಿದೆ ಎಂದು ಕೋನರಡ್ಡಿ ಹೇಳಿದರು.