ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ: ರೋಹಿಣಿ ಪಾಟೀಲ
I am forever grateful for your admiration: Rohini Patil
ನೇಸರಗಿ 19: ನಾನು ಅತೀ ಉತ್ಸಾಹದಿಂದ 48 ನೇ ವಯಸಿನಲ್ಲಿ ಕಿತ್ತೂರು ಮತಕ್ಷೇತ್ರದ ಕಾರ್ಯ ಮಾಡಲು ತಾವುಗಳು ನನ್ನ ಮೇಲೆ ಇಟ್ಟಿರುವ ವಾತ್ಸಲ್ಯ, ಅಭಿಮಾನಕ್ಕೆ ನಾನು ಚಿರಋಣಿ ಅಗಿದ್ದು.ಮುಂದಿನ ದಿನಮಾನಗಳಲ್ಲಿ ಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡಲು ಪ್ರೇರಣೆ ಆಗಿದೆ ಎಂದು ಕೆ ಪಿ ಸಿ ಸಿ ಸದಸ್ಯ, ಪಂಚಮಸಾಲಿ ಲಿಂಗಾಯತ ಸಂಘಟನೆಯ ರಾಜ್ಯ ಮಹಿಳಾ ಉಪಾಧ್ಯಕ್ಷರು, ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಧರ್ಮಪತ್ನಿ ರೋಹಿಣಿ ಪಾಟೀಲ ಹೇಳಿದರು.
ಅವರು ನೇಗಿನಹಾಳ ಗ್ರಾಮದಲ್ಲಿ ಅಭಿಮಾನಿಗಳು ಆಯೋಜಿಸಿದ್ದ 48 ನೇ ಜನ್ಮದಿನದ ಪ್ರಯುಕ್ತ ಉಚಿತ ಕಣ್ಣು ತಪಾಸಣೆ ಮತ್ತು ಅರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿ ನಿಮ್ಮೆಲ್ಲರ ಆಶೀರ್ವಾದದ ಪಲವಾಗಿ ನಮ್ಮ ಧಣಿ ಬಾಬಾಸಾಹೇಬ ಪಾಟೀಲ ಅವರು ಶಾಸಕರಾಗಿ ಉನ್ನತ ಮಟ್ಟದ ಕಾರ್ಯ ಮಾಡುತ್ತಿದ್ದು, ಹಾಗೂ ಅವರ ಸಹೋದರ ನಾನಾಸಾಹೇಬ ಪಾಟೀಲ ಅವರು ಬಿಡಿಸಿಸಿ ಬ್ಯಾಂಕ ನಿರ್ದೇಶಕರಾಗಿದ್ದು, ನಾನು ಕೂಡ ತಮ್ಮ ಬೆಂಬಲದಿಂದ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಹೆಮ್ಮೆ ಅನಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಅನೇಕ ನಾಯಕರು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ನೇಗಿನಹಾಳ ಗ್ರಾಮಕ್ಕೆ ಆಗಮಿಸಿ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಅವರಿಗೆ 48 ನೇ ಹುಟ್ಟುಹಬ್ಬದ ಶುಭ ಕೋರಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 