ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಟಿಕೆಟ್ ದೊರೆಯಬೇಕೆನ್ನುವ ವಿಶ್ವಾಸ ತಮ್ಮದಾಗಿದೆ : ವೆಂಕಟೇಗೌಡ ಗೋವಿಂದ ಗೌಡ್ರ

ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಟಿಕೆಟ್ ದೊರೆಯಬೇಕೆನ್ನುವ ವಿಶ್ವಾಸ ತಮ್ಮದಾಗಿದೆ : ವೆಂಕಟೇಗೌಡ ಗೋವಿಂದ ಗೌಡ್ರ I am confident of getting a ticket to contest as an alliance candidate: Venkate Gowda Govinda Gowdra

ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಟಿಕೆಟ್ ದೊರೆಯಬೇಕೆನ್ನುವ ವಿಶ್ವಾಸ ತಮ್ಮದಾಗಿದೆ : ವೆಂಕಟೇಗೌಡ ಗೋವಿಂದ ಗೌಡ್ರ 

ರಾಣೇಬೆನ್ನೂರು 20 :  ಪಶ್ಚಿಮ ಪದವೀಧರ ಕ್ಷೇತ್ರವು ಇದುವರೆಗೂ ಗದಗ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಸೀಮಿತವಾಗಿ ಸಾಗಿ ಬಂದಿದೆ. ಈ ಬಾರಿಯೂ ಸಹ, ಗದಗ್ ಕ್ಷೇತ್ರದ ಆಕಾಂಕ್ಷಿ  ಅಭ್ಯರ್ಥಿಯಾದ ತಮಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಟಿಕೆಟ್ ದೊರೆಯಬೇಕೆನ್ನುವ ವಿಶ್ವಾಸ ತಮ್ಮದಾಗಿದೆ ಎಂದು, ಪಶ್ಚಿಮ ಪದವೀಧರ ಕ್ಷೇತ್ರದ ಆಕಾಂಕ್ಷಿ ಅಬ್ಯರ್ಥಿ ವೆಂಕಟೇಗೌಡ ಗೋವಿಂದ ಗೌಡ್ರ ಹೇಳಿದರು. ಭಾನುವಾರ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಹೇ ಕುರಿತು ಮಾತನಾಡಿದರು.  ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಟಿಕೆಟ್ ಆಕಾಂಕ್ಷಿಯಾಗಿ ನಿರಂತರ ಪ್ರಯತ್ನದಲ್ಲಿ ತಾವಿದ್ದೇವೆ. ಈ ಬಾರಿ ಟಿಕೆಟ್ ದೊರೆಯುವ ವಿಶ್ವಾಸ ತಮಗಿದೆ ಎಂದರು .       

ಸರಕಾರ ಉದ್ಯೋಗ ಮೇಳ ಆಯೋಜಿಸುವ ಬದಲು ನೇರವಾಗಿ ಸ್ವಯಂ ಉದ್ಯೋಗ ಆಕಾಂಕ್ಷಿಗಳಿಗಾಗಿ ಉದ್ಯೋಗವನ್ನು ಸೃಷ್ಟಿಗೆ  ಮುಂದಾಗಬೇಕು ಎಂದು ವಿವರಿಸಿದ ಉದ್ಯೋಗ ಮೇಳ ಕೇವಲ ಬಾಲಿಸ್ ಮೇಳ ವಾಗುತ್ತಲ್ಲಿದೆ. ಕೂಡಲೇ ಸರ್ಕಾರ ಉದ್ಯೋಗ ಮೇಳ ಕೈ ಬಿಟ್ಟು ಉದ್ಯೋಗ ಸೃಷ್ಟಿಗೆ ಮುಂದಾಗಲಿ ಎಂದು ಆಗ್ರಹಿಸಿದರು.  ಸರ್ಕಾರ ಹಳೆ ಪಿಂಚಣಿ ಯೋಜನೆ ಸ್ಥಗಿತಗೊಳಿಸಿದೆ. ಇದರಿಂದ ನೌಕರರಿಗೆ ತುಂಬಾ ಅನ್ಯಾಯವಾಗಲಿದೆ. ಅದರ ಮರು ಜಾರಿಗಾಗಿ  ತಾವು ನಿರಂತರ ಸರ್ಕಾರದೊಂದಿಗೆ ಹೋರಾಟ ಮಾಡುತ್ತಾ ಬಂದಿದ್ದೇನೆ. ಇಂದಿಲ್ಲ ನಾಳೆ, ಜಾರಿಯಾಗುವ ಪ್ರಯತ್ನಕ್ಕೆ ಮುಂದಾಗಿದ್ದೇನೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕರಣಕ್ಕೆ ಹೆಚ್ಚು ಓತ್ತು ನೀಡಬೇಕಾಗಿದೆ. ಇದುವರೆಗೂ ಈ ವಿಚಾರವಾಗಿ ಯಾರು ಮಾತನಾಡಿಲ್ಲ, ಮಾತನಾಡಲೂ ಸಹಾ  ಮುಂದಾಗಿಲ್ಲ ಇದು ನಮ್ಮ ಜನರ ದುರಾದೃಷ್ಟ ಎಂದು ತಮ್ಮ ಖೇದ ವ್ಯಕ್ತಪಡಿಸಿದರು. ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣ ವಾಗುತ್ತಲ್ಲಿದೆ. ಗದಗ್ ಹಾವೇರಿ ಜಿಲ್ಲೆಗಳಲ್ಲಿ ಕೈಗಾರಿಕಗಳು ಪ್ರಾರಂಭವಾಗಬೇಕು. ಇಲ್ಲದೆ ಹೋದರೆ  ಯುವ ಜನಾಂಗ ಖಿನ್ನತೆಗೆ ಒಳಪಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ವಿದ್ಯಾವಂತ ನಿರುದ್ಯೋಗಿಗಳು  ಅಧಿಕ ಸಂಖ್ಯೆಯಲ್ಲಿದ್ದಾರೆ. ರಾಜಕಾರಣಿಗಳು ಇತ್ತ ಕಡೆ ಗಮನ ಹರಿಸಬೇಕು ನಿರುದ್ಯೋಗದಿಂದ ಬಳಲುತ್ತಿರುವ ಯುವ ಜನಾಂಗ ಬಂಡಾಯ ವೆಳುವ ಕಾಲ ದೂರವಿಲ್ಲ ಎಂದರು.        

ಪದವೀಧರ  ಶಿಕ್ಷಕರ ಕ್ಷೇತ್ರದ ಮಾದರಿಯಲ್ಲಿ, ವಕೀಲರ ಕ್ಷೇತ್ರವು ಸಹ ಒಂದಾಗಬೇಕಾಗಿದೆ. ಇದಕ್ಕಾಗಿ ತಾವು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ ಅವರು, ಕನಿಷ್ಠ ಬದುಕು ನಡೆಸುವುದು ಸಹ ವಕೀಲ ಸಮುದಾಯಕ್ಕೆ ಕಷ್ಟಕರ ಸಂಗತಿಯಾಗಿದೆ. ಕೂಡಲೇ ಎಲ್ಲ ರೀತಿಯ ಸವಲತ್ತುಗಳನ್ನು ಅವರಿಗೂ ಸಹ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.      ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಯುವ ನಾಯಕ ಮಂಜುನಾಥ ಗೌಡಶಿವಣ್ಣನವರ, ಅವರು ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ತತ್ವ ಮತ್ತು ಸಿದ್ದಾಂತವಿದೆ. ಇತಿಹಾಸ ಹೊಂದಿರುವ ಪಕ್ಷವು ಪುನಃ ಅಧಿಕಾರಕ್ಕೆ ಬಂದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿದೆ ಎಂದರು. ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅನೇಕ ಯೋಜನೆಗಳನ್ನು ವಿಶೇಷವಾಗಿ ರೈತಪರ ಯೋಜನೆಗಳನ್ನು ಜಾರಿಗೆ ತಂದು ರೈತರ ಆರ್ಥಿಕ ಚೈತನ್ಯಕ್ಕೆ ಕಾರಣವಂತರಾಗಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮನ್ನಾಳುವ ಯಾವುದೇ ಪಕ್ಷಗಳು ರೈತರ ಪರ ಯಾವುದೇ ಯೋಜನೆಗಳು ಜಾರಿಗೆ ತಂದಿಲ್ಲ ಎಂದು ಕಿಡಿಕಾರಿದರು. ಮಾಧ್ಯಮಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ್, ನಗರಾಧ್ಯಕ್ಷ ಲಿಂಗರಾಜ ಹೊನ್ನಾಳಿ, ಜೆಡಿಎಸ್ ಮುಖಂಡರಾದ ಸಿದ್ದಣ್ಣ ಗುಡಿಮುಂದ್ಲರ, ಚನ್ನವೀರ​‍್ಪ ಬಡಿಗೇರ್, ರಮೇಶ್ ಮಾಕನೂರ, ಕುಬೇರ​‍್ಪ ಹೂಲಿಹಳ್ಳಿ, ಈರಣ್ಣ ಬೇತೂರ, ಚೇತನ್ ಕದರಮಂಡಲಗಿ, ಲಕ್ಷ್ಮಿ ಕದರಮಂಡಲಗಿ, ಮಹೇಶ್ ಕಂಬಳಿ, ಸೇರಿದಂತೆ  ಮತ್ತಿತರ ಕಾರ್ಯಕರ್ತರು. ಉಪಸ್ಥಿತರಿದ್ದರು.