ಹೆಂಡತಿ ಮೇಲೆ ಸಂಶಯ ಪಟ್ಟು. ಜೀವ ಬೆದರಿಕೆಯನ್ನು ಹಾಕಿದ ಭೂಪ ಪತಿರಾಯ ಬಂಧನ
Husband arrested for threatening wife, raising suspicions
ಲೋಕದರ್ಶನ ವರದಿ
ಹೆಂಡತಿ ಮೇಲೆ ಸಂಶಯ ಪಟ್ಟು. ಜೀವ ಬೆದರಿಕೆಯನ್ನು ಹಾಕಿದ ಭೂಪ ಪತಿರಾಯ ಬಂಧನ
ಕ್ರೈಂ,
ಜಮಖಂಡಿ 5 : ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ಹೆಂಡತಿ ಮೇಲೆ ಸಂಶಯ ಪಟ್ಟು. ಜೀವ ಬೆದರಿಕೆಯನ್ನು ಹಾಕಿದ ಪತಿರಾಯ. ಪತ್ನಿಯ ತೆಲೆ ಬೊಳಿಸಿದ ಭೂಪ ಪತಿರಾಯ ಬಂಧನವಾಗಿರುವ ಘಟನೆ ನಡೆದಿದೆ.
ತೊದಲಬಾಗಿ ಗ್ರಾಮದ ಉಮೇಶ ಕಾಳಿಂಗ ಕೊಟ್ಟಲಗಿ ತನ್ನ ಪತ್ನಿ ಅಶ್ವಿನಿ ಅವಳ ಮೇಲೆ ಸಂಶಯ ಪಟ್ಟು ಅವಳ ತಲೆಯನ್ನು ಬೋಳಿಸಿದ್ದಾನೆ. ಮನೆಯಲ್ಲಿ ಅಶ್ವಿನಿ ಅವಳ ಕತ್ತಿಗೆ ಕಬ್ಬು ಕಡಿಯುವ ಮಾರಕಸ್ತ್ರವಾದ ಕೊಯಿತಾ ಹಿಡಿದು ಜೀವ ಬೆದರಿಕೆಯನ್ನು ಹಾಕಿ. ಜಾರ್ಜರ್ ಸಲೂನ್ ಮಷೀನ್‌ದಿಂದ ಹೆಂಡತಿಯ ತಲೆಯನ್ನು ಬೋಳಿಸಿದ ಭೂಪ ಪತಿರಾಯ ಉಮೇಶ ಕೊಟ್ಟಲಗಿ. ಕೆಲವು ದಿನಗಳ ಕಾಲ ಹೆಂಡತಿ ಅಶ್ವಿನಿ ಅವಳ ಮೇಲೆ ಸಂಶಯ ಪಡುತ್ತಿದ್ದು. ಪ್ರತಿಬಾರಿಯು ಕಿರಿಕಿರಿ ಮಾಡುತ್ತಿದ್ದನಂತೆ. ಈ ಕುರಿತು ಹಲವಾರು ಬಾರಿ ಹಿರಿಯರು ಸೇರಿ ಸಂಧಾನ ಮಾಡಿದರು ಎನ್ನಲಾಗಿದೆ.
ಕಬ್ಬು ಕಡಿಯುವ ಮಾಲಿಕ ಊಟಕ್ಕೆ ಡಬ್ಬಿಯನ್ನು (ಬುತ್ತಿ) ತೆಗೆದುಕೊಂಡು ಬಂದಿದ್ದು. ಬುತ್ತಿ ಕೊಡುವುದನ್ನು ತಡ ಮಾಡಿದಕ್ಕೆ ಸಂಶಯ ಪಟ್ಟು ತಲೆಯನ್ನು ಬೋಲಿಸಿದ್ದಾನೆ ಎಂದು ಮಾಹಿತಿ ತಿಳಿದು ಬರುತ್ತದೆ.
ಈ ಕುರಿತು ಸಾವಳಗಿ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಉಮೇಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‌ಐ ಅಪ್ಪಣ್ಣ ಐಗಳಿ ತಿಳಿಸಿದ್ದಾರೆ.
ಪೋಟೋ : ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ಹೆಂಡತಿ ಮೇಲೆ ಸಂಶಯ ಪಟ್ಟು. ಜೀವ ಬೆದರಿಕೆಯನ್ನು ಹಾಕಿದ ಪತಿರಾಯ. ಪತ್ನಿಯ ತೆಲೆ ಬೊಳಿಸಿದ ಭೂಪ ಪತಿರಾಯ ಬಂಧನವಾಗಿರುವ ಘಟನೆ ನಡೆದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 