ಟೋಕಿಯೊ, ಅ. 16: ಜಪಾನ್ ನಲ್ಲಿ ಬೀಸಿದ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ 74ಕ್ಕೆ ಏರಿಕೆ ಆಗಿದೆ. ಅಲ್ಲದೆ 212 ಮಂದಿ ಗಾಯಕ್ಕೆ ತುತ್ತಾಗಿದ್ದು, 15 ಜನ ಕಣ್ಮರೆಯಾಗಿದ್ದಾರೆ.
ಸ್ಥಳೀಯ ಮಾಧ್ಯಮ ಬುಧವಾರ ಈ ಮಾಹಿತಿ ನೀಡಿದೆ. ಹಗಿಬಿಸ್ ಚಂಡಮಾರುತ ಜಪಾನ್ ನ ಜನರ ನಿದ್ದೆ ಗೆಡಿಸಿದೆ. ಇದರಿಂದ ಸಾವನ್ನಪ್ಪಿದ್ದವರ ಸಂಖ್ಯೆಯಲ್ಲಿ ಇನ್ನು ಏರಿಕೆ ಆಗುವು ಸಾಧ್ಯತೆ ಇದೆ.
ಹೆಗೆಬಿಸ್ನಿಂದಾಗಿ ಜಪಾನ್ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದ 100 ಕ್ಕೂ ಹೆಚ್ಚು ಭೂಕುಸಿತ ಸಂಭವಿಸಿದೆ. ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿದ್ದು ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ.
ಧಾರಾಕಾರ ಮಳೆ ಮತ್ತು ಬಲವಾದ ಗಾಳಿ ಮತ್ತು ತೀವ್ರವಾದ ಬಿರುಗಾಳಿಗಳಿಯಿಂದ ಹಾನಿಗೊಳಗಾಗುತ್ತವೆ. ದೇಶಾದ್ಯಂತ ನದಿಗಳು ತುಂಬಿದ್ದು, ಚಿಬಾ ಪ್ರಾಂತ್ಯದಲ್ಲಿ ಜನ ಸುಂಟರಗಾಳಿಯಿಂದ ನಲುಗಿದ್ದಾರೆ.
ಜಪಾನಿನ 16 ಪ್ರಾಂತ್ಯಗಳಲ್ಲಿ 161 ನದಿಗಳ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿವೆ. ಜಪಾನ್ನ ಫುಕುಶಿಮಾ, ಮಿಯಾಗಿ, ಕನಗಾವಾ, ತೋಚಿಗಿ, ಸೈತಮಾ, ನಾಗಾನೊ ಮತ್ತು ಶಿಜುವಾಕಾ ಕೌಂಟಿಗಳು ಚಂಡಮಾರುತದಿಂದ ಹೆಚ್ಚು ಪ್ರಭಾವಿತವಾಗಿವೆ.
ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಾರ, 13 ಪ್ರಾಂತ್ಯಗಳಲ್ಲಿ ಹಾನಿಯಾಗಿದೆ. 34,000 ಮನೆಗಳಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ, ಇದರಿಂದಾಗಿ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ.