ಮಳೆಯಲ್ಲೇ ರಥ ಎಳೆದು ಭಕ್ತಿ ಮೆರೆದು ನೂರಾರು ಭಕ್ತರು !.

ಮಳೆಯಲ್ಲೇ ರಥ ಎಳೆದು ಭಕ್ತಿ ಮೆರೆದು ನೂರಾರು ಭಕ್ತರು !. Hundreds of devotees pull chariots in the rain and show their devotion!

ಲೋಕದರ್ಶನ ವರದಿ 

ಹೂವಿನಹಡಗಲಿ  03-    ತಾಲ್ಲೂಕಿನ ಬಾವಿಹಳ್ಳಿ ಗ್ರಾಮದಲ್ಲಿ  ಗುರುವಾರ ಸಂಜೆ 5.30ಕ್ಕೆ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನ ಧಿಂದ  ಭವ್ಯ ಮೆರವಣಿಗೆ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ಫಲಪುಷ್ಪಗಳಿಂದ ಸರ್ವಾಲಂಕೃತಗೊಂಡಿದ್ದ ರಥಕ್ಕೆ ಪೂಜೆ, ಮಹಾ ಮಂಗಳಾರತಿ ಸಲ್ಲಿಸಿ, ಸ್ವಾಮಿಯ ನಿಶಾನೆ  ನಡೆಸಲಾಯಿತು.

ನಂತರ ಜಯಘೋಷ, ಹರ್ಷೋದ್ಗಾರಗಳೊಂದಿಗೆ ರಥೋತ್ಸವಕ್ಕೆ  ಚಾಲನೆ ನೀಡಲಾಯಿತು. ನಾನಾ ವಾದ್ಯಗಳು, ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ರಥೋತ್ಸವ ಎಳೆಯುವಾಗ ದಿಢೀರ್  ಮಳೆಗೆ ಜನರು ಚದರಿದರು. ಕೆಲ ಸಮಯ ರಥೋತ್ಸವ ಕ್ಕೆ ಮಳೆ ಅಡ್ಡಿಯಾಯಿತು.ಭಕ್ತನ ಭಕ್ತಿಗೆ ಭಗವಂತ ಒಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ  ಬಾವಿಹಳ್ಳಿ ಭಕ್ತರ ಭಕ್ತಿ ಕಂಡು ಸಾಕ್ಷಾತ್ ವರುಣದೇವನೇ ಧರೆಗಿಳಿದು ಬಂದಂತಿದೆ.ಕರಿಬಸವೇಶ್ವರ ರಥೋತ್ಸವಕ್ಕೆ ಗುಡುಗು ಸಿಡಿಲು ನಿರಂತರ ಮಳೆ ಅಡ್ಡಿಯಾದರೂ, ಭಕ್ತರು ಮಾತ್ರ ರಥ ಎಳೆಯುವುದನ್ನು ಬಿಡಲಿಲ್ಲ. ಮಳೆಯಲ್ಲಿ ಮಿಂದೆದ್ದೇ ಸ್ವಾಮಿಗೆ ಜೈಕಾರ ಹಾಕಿದ ಆ ಭಕ್ತಿ ಭಾವದ ದೃಶ್ಯಗಳು ಇಲ್ಲಿವೆ.

..ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಸಾಮಾನ್ಯವಾಗಿ ಮಳೆ ಬಂದರೆ ಜನ ಸುರಕ್ಷಿತ ಸ್ಥಳಕ್ಕೆ ಓಡುತ್ತಾರೆ. ಆದರೆ ಇಲ್ಲಿ ಮಾತ್ರ ದೃಶ್ಯವೇ ಬೇರೆಯಾಗಿತ್ತು. ಸುರಿಯುವ ಮಳೆಯನ್ನು ಲೆಕ್ಕಿಸದ ಭಕ್ತರು, ಜಯಘೋಷ ಹಾಕುತ್ತಾ ರಥವನ್ನು ಎಳೆಯಲಾರಂಭಿಸಿದರು. ರಥದ ಗಾಲಿಗಳು ಉರುಳುತ್ತಿದ್ದಂತೆ ಮಳೆಯ ತೀವ್ರತೆ ಹೆಚ್ಚಾದರೂ, ಭಕ್ತರ ಉತ್ಸಾಹ ಮಾತ್ರ ಕುಗ್ಗಲಿಲ್ಲ. ನೂರಾರು ಭಕ್ತರು ಮಳೆಯಲ್ಲಿ ಸಂಪೂರ್ಣ ನೆನೆಯುತ್ತಲೇ ರಥೋತ್ಸವವನ್ನು ಯಶಸ್ವಿಗೊಳಿಸಿದರು.ರಥೋತ್ಸವ ಮುಗಿಯುವವರೆಗೂ ಮಳೆ ಸುರಿಯುತ್ತಿದ್ದರೂ, ಭಕ್ತರು ಮಳೆಯಲ್ಲೇ ಮಿಂದೆದ್ದು ತಮ್ಮ ಭಕ್ತಿ ಸಮರ​‍್ಿಸಿದರು.

ಹಬ್ಬದ ದಿನವೇ ವರುಣದೇವ ಪ್ರತ್ಯಕ್ಷನಾಗಿ ದೇವರಿಗೆ ಅಭಿಷೇಕ ಮಾಡಿದಂತೆ ಭಾಸವಾಗುತ್ತಿತ್ತು ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಸ್ವಾಮಿಯ ನಿಶಾನೆ ನಿವೃತ್ತಿ ಶಿಕ್ಷಕ ವೀರಣ್ಣ  ? 88101 ಪಡೆದರು.  ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ. ಸ್ವಾಮಿ, ನಂದಿಪುರ ಚರಂತಯ್ಯ ಸ್ವಾಮಿ. ದೇಗುಲದ ಅದ್ಯಕ್ಷರು. ಪದಾಧಿಕಾರಿಗಳು, ಹೊಳಗುಂದಿ. ಬಾವಿಹಳ್ಳಿ ಸಾವಿರಾರು ಜನರು ಭಾಗವಹಿಸಿದ್ದರು.