ಯಲ್ಲಮ್ಮನಗುಡ್ಡದಲ್ಲಿ ಹುಂಡಿ ಎಣಿಕೆ ಕಾರ್ಯ: 1.99 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹ
Hundi counting exercise in Yellammanagar: Donations worth Rs. 1.99 crore collected
ಉಗರಗೋಳ 23: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, 1,72,65,507 ರೂಪಾಯಿ ನಗದು, 15.10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 11.51 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸೇರಿ 1.99 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ಹುಂಡಿಯಲ್ಲಿ ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹಾಕಿ ಭಕ್ತಿ ಸಮರ್ಿಸುವರು. ಈ ಹುಂಡಿಗಳಲ್ಲಿ ಭಕ್ತರು ಹಾಕಿದ್ದ ಕಾಣಿಕೆಯನ್ನು ಜ.19, 21 ಮತ್ತು 22ರಂದು ಮೂರು ಹಂತಗಳಲ್ಲಿ ಎಣಿಕೆ ಮಾಡಲಾಯಿತು.
ಇದರಲ್ಲಿ ಹಣದ ಜತೆಗೆ, ವಿದೇಶಿ ಕರೆನ್ಸಿಗಳೂ ಸಿಕ್ಕಿರುವುದು ವಿಶೇಷ.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಎನ್ ಎಮ್ ಮುದಗೌಡ್ರ, ಶೀತಲ ಕಡಟ್ಟಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಚಾಣಾಕ್ಷ ನವಲಕರ, ಮಲ್ಲಪ್ಪ ದರೂರ,ಸಿ ಎನ್ ಕುಲಕರ್ಣಿ, ಮಂಜುನಾಥ ಆಡಕರ, ಅಲ್ಲಮಪ್ರಭು ಪ್ರಭುನವರ, ಶಿದ್ದನಗೌಡ ಪಾಟೀಲ, ಪ್ರಕಾಶ ಪ್ರಭುನವರ, ಆರ್.ಎಚ್.ಸವದತ್ತಿ, ಪ್ರಭು ಹಂಜಗಿ, ವಿ.ಆರ್.ನೀಲಗುಂದ, ಮುತ್ತುರಾಜ ಅಮಾತನವರ, ಫಕ್ಕೀರ್ಪ ದೊಡಮನಿ, ಸಚಿನ ರಾಮನ್ನವರ, ಇತರರಿದ್ದರು.
ಅಭಿವೃದ್ಧಿ ಕೆಲಸಕ್ಕೇ ಬಳಕೆ: ಡಿ.ಸಿ
ಗುಡ್ಡಕ್ಕೆ ಬರುವ ಭಕ್ತರು ಹಾಕುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಹಣವನ್ನು ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಮತ್ತು ಅಭಿವೃದ್ಧಿ ಕೆಲಸಕ್ಕಾಗಿಯೇ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ಬದಲಾವಣೆ ತಂದ ಪರಿಣಾಮ
ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಆಡಳಿತದಲ್ಲಿ ಬಹಳಷ್ಟು ಬದಲಾವಣೆ ತಂದು, ಭಕ್ತರಿಗೆ ಒದಗಿಸುವ ಮೂಲಸೌಕರ್ಯ ಪ್ರಮಾಣ ಹೆಚ್ಚಿಸಿದ್ದಾರೆ. ಇದರಿಂದಾಗಿ ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿ, ಕಾಣಿಕೆ ರೂಪದಲ್ಲಿ ಬರುವ ಆದಾಯ ಪ್ರಮಾಣವೂ ಹೆಚ್ಚಳವಾಗಿದೆ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ‌್ಯದರ್ಶಿ ಡಾ, ಸಿದ್ದು ಹುಲ್ಲೋಳಿ ಪ್ರತಿಕ್ರಿಯಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 