ಹುಣಶ್ಯಾಳ ಪಿಜಿ: ಶ್ರೀ ಸಿದ್ಧಲಿಂಗ ಅಪ್ಪನ ಜಾತ್ರೆ ಮತ್ತು 27ನೇ ಸತ್ಸಂಗ ಸಮ್ಮೇಳನ
ಲೋಕದರ್ಶನ ವರದಿ
ಘಟಪ್ರಭಾ 25: ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ ಮತ್ತು 27 ನೇ ಸತ್ಸಂಗ ಸಮ್ಮೇಳನವು 2026 ಜನೇವರಿ 1 ರಿಂದ 3ರವರೆಗೆ ಅತೀ ವಿಜೃಂಭನೆಯಿಂದ ಜರುಗಲಿದೆ.
ಅಥಣಿಯ ನಡೆದಾಡುವ ದೇವರು ಶ್ರೀ ಮುರುಘರಾಜೇಂದ್ರ ಸ್ವಾಮೀಜಿಯವರ ನಂದೇಶ್ವರ ಗ್ರಾಮದ ಶರಣ ದಂಪತಿಗಳಾದ ಮಲ್ಲಿಕಾರ್ಜುನ ಮತ್ತು ಗಂಗಮ್ಮನವರ ಪುಣ್ಯಗರ್ಭದಲ್ಲಿ ಸನ್ 1961 ರ ನವ್ಹೆಂಬರ ತಿಂಗಳ 18 ರಂದು ಜನಿಸಿದ ಶ್ರೀಗಳಿಗೆ ತಾಯಿಯ ಪರಮಧೈವವಾಗಿದ್ದ ಮದುರಖಂಡಿ ಶಿವಾವತಾರಿ ಸಿದ್ಧಲಿಂಗೇಶ್ವರರ ಕೃಪಾಶೀರ್ವಾದದ ಫಲ ಕಿರಿಯ ವಯಸ್ಸಿನಿಂದ ಆಧ್ಯಾತ್ಮಿಕತೆಯತ್ತ ಒಲವು ಹೊಂದಿದವರು ಶ್ರೀ ನಿಜಗುಣ ದೇವ ಮಹಾಸ್ವಾಮಿಗಳು. ಬೈಲಹೊಂಗಲದ ಮಹಾದೇವಾನಂದ ಸರಸ್ವತಿ ಸ್ವಾಮೀಜಿಯವರಆಶ್ರಯದಲ್ಲಿ ಸಂಸ್ಕೃತ ಶಾಸ್ತ್ರಅಧ್ಯಯನ ಮಾಡಿದರು.ಇಂಚಲದಜಗದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಅವರ ಮಾರ್ಗದರ್ಶನದಲ್ಲಿಆತ್ಮ ಮಂಥನ,ತತ್ವಚಿಂತನ,ಸತ್ಯ ಶೋಧನ,ನಿತ್ಯ ಬೋಧನೆಯನ್ನು ರೂಢಿಸಿಕೊಂಡು ಸಂಗೀತ ಸಾಹಿತ್ಯದಜೊತೆಗೆ ಪ್ರವಚನ ಪಟುವಾದರು.ಕಿರಿಯ ವಯಸ್ಸಿನಲ್ಲಿಯೇ ಪ್ರವಚನದ ಮೂಲಕ ಅಪಾರ ಭಕ್ತರ ಮನಗೆದ್ದು ನಿಜಗುಣದೇವ ಮಹಾಸ್ವಾಮಿಗಳು ಸನ್ 1995 ರಲ್ಲಿ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮಕ್ಕೆ ಪ್ರವಚನಕ್ಕಾಗಮಿಸಿದ ಸಂದರ್ಭದಲ್ಲಿಅಲ್ಲಿಯ ಭಕ್ತರಅಪೇಕ್ಷೆ ಹಾಗೂ ಒತ್ತಾಸೆ ಮೇರೆಗೆ ಸಣ್ಣಕುಟೀರಕಟ್ಟಿಕೊಂಡುಆಧ್ಯಾತ್ಮಿಕ ಬದುಕು ಪ್ರಾರಂಭಿಸಿದರು.
ಅರಭಾಂವಿ ಕ್ಷೇತ್ರದ ಶಾಸಕ,ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಬೈಲಹೊಂಗಲದ ಮಾಜಿ ಸಚಿವ ಶಿವಾನಂದ ಕೌಜಲಗಿ ಸೇರಿದಂತೆ ನಾಡಿನ ಗಣ್ಯರ ಮಾನ್ಯರ ಸಹಕಾರ ಮತ್ತು ನೆರವಿನಿಂದ ರಂಗಮಂದಿರ,ಯಾತ್ರಾ ನಿವಾಸ,ಆಧ್ಯಾತ್ಮಿಕಚಿಂತನೆ ಸಲುವಾಗಿ ಸಮುದಾಯ ಭವನ, ಮತ್ತು ಶಾಲೆ ಪ್ರಾರಂಭಿಸಿದ್ದಾರೆ. ಪ್ರಸ್ತುತಹುಣಶ್ಯಾಳ ಪಿ.ಜಿ ಭೂ ಲೋಕದ ಆಧ್ಯಾತ್ಮಿಕ ಕೇಂದ್ರವೆಂದು ಹೆಸರಾಗಿದೆ. ಶೂನ್ಯದಿಂದ ಪ್ರಾರಂಭಿಸಿ ಅಪಾರ ಭಕ್ತ ಸಮೂಹದೊಂದಿಗೆ ಪ್ರತಿವರ್ಷ ವಿಶೇಷ ಆಧ್ಯಾತ್ಮಿಕ ಸಮಾರಂಭಗಳ ಮೂಲಕ ಜಿಲ್ಲೆಯಲ್ಲಿ ಹೆಸರಾಗಿದ್ದಾರೆ.
ನಿಜಗುಣದೇವ ಮಹಾಸ್ವಾಮಿಗಳು ಜಾತ್ಯಾತೀತವಾಗಿ ಸರ್ವಧರ್ಮೀಯರು ಪ್ರೀತಿಸುವ ಮನೋಭಾವದವರು, ಪಂಚಪೀಠ, ವಿರಕ್ತ, ಸಿದ್ದಾರೂಢ, ದ್ವೈತ, ಅದ್ವೈತ ಸಂಪ್ರದಾಯವೆನ್ನದೇ ಎಲ್ಲರನ್ನು ಗೌರವಿಸುವ ವಿಚಾರವಂತರು.
ನಿಜಗುಣದೇವ ಮಹಾಸ್ವಾಮಿಗಳವರಿಂದ ರಚಿತವಾಗಿರುವ ಸಾಹಿತ್ಯ ಸಂಗೀತ ಕುಸುಮಗಳು:ಖ್ಯಾತ ಪ್ರವಚನಕಾರರೆಂದು ಗುರುತಿಸಿಕೊಂಡ ಶ್ರೀಗಳು ಹಾಡಿರುವ ಹಲವಾರು ದ್ವನಿಸುರುಳಿಗಳ ಸಿ.ಡಿ ಉತ್ತರಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರ ಮನೆಯಲ್ಲಿ ಪ್ರತಿನಿತ್ಯಆಧ್ಯಾತ್ಮಿಕ ಬೆಳಗಿನ ಗಾಯನವಾಗಿವೆ.ಸಾವಿರ ಹಾಡುಗಳ ಸರದಾರವೆಂಬ ಗೀತ ಸಾಹಿತ್ಯ ಪ್ರಸಿದ್ಧಿ ಹೊಂದಿರುವ ನಿಜಗುಣದೇವ ಮಹಾಸ್ವಾಮಿಗಳು ರಚಿಸಿದ ಕೈವಲ್ಯಕಿರಣ,ಗೀತ ಕುಸುಮ,ಭಾರತಕ್ಕೊಬ್ಬ ಭಾರತೀಶ,ಶಿವಾವತಾರಿ ಸಿದ್ದಲಿಂಗ,ಕೈವಲ್ಯ ಕನ್ನಡಿ ಪ್ರವಚನ ಕೃತಿಗಳು ಸೇರಿದಂತೆ ಅನೇಕ ಕೃತಿಗಳು ರಚಿಸಿದ ಸಾಹಿತಿಗಳು,
ಶ್ರೀಗಳನ್ನರಿಸಿ ಬಂದ ಪ್ರಶಸ್ತಿಗಳು:ಪಂಚಪೀಠದಕೇದಾರ ಜಗದ್ಗುರುಗಳಿಂದ ದೊರಕಿದ ಪ್ರವಚನ ಪ್ರಾಜ್ಞ,ಹುಕ್ಕೇರಿ ಹಿರೇಮಠದಖ್ಯಾತದಸರಾಪ್ರಶಸ್ತಿ “ರೇಣುಕ ಶ್ರೀ”,ಕರ್ನಾಟಕ ಭೂಷಣ,ಸಾಹಿತ್ಯ ಸುಧಾಕರ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.
ನಿಜಗುಣದೇವ ಮಹಾಸ್ವಾಮಿಗಳ ನುಡಿಮುತ್ತು:
ನಾನು ನನ್ನದು ಎಂಬುದು ಎನಿಲ್ಲ,ಆ ದೇವ ಆಡಿಸಿದಂತೆ ಆಡುವಕಾಯಕ ನಮ್ಮದು. “ಎಲ್ಲರನ್ನೂ ಪ್ರೀತಿಸು. ಪ್ರೀತಿಯೇ ದೇವರು” ಎಂದು ಹೇಳುವ ನಿಜಗುಣದೇವ ಮಹಾಸ್ವಾಮಿಗಳು ಸುಕ್ಷೇತ್ರದ ಬೆಳಕಿಗೆ ಕಲಿಯುಗದಕರ್ಣಶಾಸಕ,ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತು ಮಾಜಿ ಸಚಿವ,ಕೆ.ಎಲ್.ಇಅಧ್ಯಕ್ಷ ಶಿವಾನಂದ ಕೌಜಲಗಿಯವರ ಸಹಕಾರವೇಕಾರಣ.ಆದ್ದರಿಂದಅವರುಕ್ಷೇತ್ರದಏರಡು ಕಣ್ಣುಗಳಿದ್ದಂತೆ,ಇವರ ಜೊತೆಗೆಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಸಹೋದರರ ಸಹಾಯ ಸಹಕಾರಅನನ್ಯವಾಗಿದೆ.
ನಾಡಿನ ಹೆಸರಾಂತ ಸತ್ಪುರುಷರ ಆಶೀರ್ವಾದ,ಮಾರ್ಗದರ್ಶನದಿಂದನಾನು ಭಕ್ತರಇಚ್ಚೆಯಂತೆಆಧ್ಯಾತ್ಮಿಕ ಸೇವೆಗೈಯುತ್ತಿರುವೆಎಂದು ವಿನಮ್ರರಾಗಿ ನುಡಿಯುತ್ತಾರೆ.
ಕಾರ್ಯಕ್ರಮ: ದಿ.1ರಂದು ಶ್ರೀ ಸಿದ್ಧಲಿಂಗ ಯತಿರಾಜರ, ಶ್ರೀ ಶಾಂಭವಿಮಾತೆಯ, ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ನಂತರ ‘ಸ್ವಾಂಸ್ಕೃತಿಕ ಸಿರಿ’ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರನ್ನು ಶೃಂಗಾರ ರಥದಲ್ಲಿ ಸಹಸ್ರ ಪೂರ್ಣ ಕುಂಭದೊಂದಿಗೆ ಮಹಾತ್ಮರ ಭವ್ಯ ಸ್ವಾಗತ ಮೆರವಣಿಗೆ ಹಾಗೂ ಶ್ರೀ ಸಿದ್ಧಲಿಂಗ ಯತಿರಾಜರ ತೊಟ್ಟಿಲೋತ್ಸವ ಜರುಗಲಿದ್ದು, ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ನಂತರ ಸನ್ಮಾನ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಲಿದೆ.
ದಿ.2ರಂದು ತತ್ವಾಮೃತ ಕಾರ್ಯಕ್ರಮದಲ್ಲಿ ಮಹಾತ್ಮರ ಪ್ರವಚನ ಸುಧೆ,ಪೂಜ್ಯರ ತುಲಾಭಾರ ಸೇವೆ ನಂತರ “ಕನ್ನಡ ಕೋಗಿಲೆ” ಖ್ಯಾತಿಯ ಕುಮಾರಿ ಮಹನ್ಯಾ ಗುರು ಪಾಟೀಲ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಸಂಜೆ 6 ಗಂಟೆಗೆ ತತ್ವಾಮೃತ ಕಾರ್ಯಕ್ರಮ ಹಾಗೂ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಜಿಯವರ ತೂಗುಯ್ಯಾಲೆ ಶೃಂಗಾರ ಕೀರೀಟ ಮಹಾಪೂಜೆ ಜರುಗಲಿದೆ.
ದಿ.3ರಂದು ಮುಂಜಾನೆ 10 ಗಂಟೆಗೆ ತತ್ವಾಮೃತ ಕಾರ್ಯಕ್ರಮ ಹಾಗೂ ಪೂಜ್ಯ ಶ್ರೀ ನಿಜಗುಣ ದೇವ ಮಹಾಸ್ವಾಮಿಜಿಯವರಿಗೆ ಕೀರೀಟ ಧಾರಣೆ ಮತ್ತು ತುಲಾಭಾರ ಸೇವೆ ಜರುಗಲಿದೆ. ಸಂಜೆ 4 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಭವ್ಯ ರಥೋತ್ಸವ ರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 