ಶರಣಸಂಗಮ ವೇದಿಕೆಯಿಂದ ಮಾನವೀಯತೆಯ ಬಸವ ಪಂಚಮಿ ಆಚರಣೆ
Humanitarian Basava Panchami celebration by the Sharanasangama Vedike
ಸವದತ್ತಿ 17 : ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶರಣಸಂಗಮ ವೇದಿಕೆ ವತಿಯಿಂದ ವಿಶಿಷ್ಟ ಹಾಗೂ ಮಾನವೀಯ ರೀತಿಯಲ್ಲಿ ಬಸವ ಪಂಚಮಿಯನ್ನು ಆಚರಿಸಲಾಯಿತು. ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಹಾಗೂ ಅವರ ಸಹಾಯಕರಿಗೆ ಬಾದಾಮಿ ಹಾಲು ಮತ್ತು ಬಿಸ್ಕಿಟ್ ವಿತರಿಸುವ ಮೂಲಕ ಶರಣಸಂಗಮ ವೇದಿಕೆ ಸಮಾಜಮುಖಿ ಕಳಕಳಿ ಮೆರೆದಿತು. ಕಾರ್ಯಕ್ರಮದ ಆರಂಭದಲ್ಲಿ ಬಸವ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಯು. ರಜಪೂತ ಅವರನ್ನು ಶರಣಸಂಗಮ ವತಿಯಿಂದ ವಚನ ಪುಸ್ತಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣಸಂಗಮದ ಕಾರ್ಯದರ್ಶಿ ರಾಜಶೇಖರ ನಿಡವಣಿ ಮಾತನಾಡಿ, ಬಸವ ಪಂಚಮಿಯ ಮಹತ್ವ ಹಾಗೂ ಶರಣರ ಆಶಯಗಳನ್ನು ವಿವರಿಸಿದರು. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ರೋಗಿಗಳಿಗೆ ಹಾಲು ಮತ್ತು ಬಿಸ್ಕಿಟ್ ವಿತರಿಸುತ್ತಿರುವುದಾಗಿ ತಿಳಿಸಿದ ಅವರು, ಮೂಢನಂಬಿಕೆಯಿಂದ ಹಾಲನ್ನು ವ್ಯರ್ಥ ಮಾಡುವುದಕ್ಕಿಂತ ಸಂಕಷ್ಟದಲ್ಲಿರುವ ಬಡವರು ಹಾಗೂ ರೋಗಿಗಳಿಗೆ ನೀಡುವುದು ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು. ಬಳಿಕ ಮಾತನಾಡಿದ ಬಸವರಾಜ ಪುಟ್ಟಿ, ಹಬ್ಬ-ಹರಿದಿನಗಳು ಕೇವಲ ಮನೆಯವರಿಗೆ ಮಾತ್ರ ಸೀಮಿತವಾಗಬಾರದು. ಸಮಾಜದ ಸಂಕಷ್ಟದಲ್ಲಿರುವವರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವುದೇ ನಿಜವಾದ ಮಾನವ ಧರ್ಮ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣಸಂಗಮದ ಅಧ್ಯಕ್ಷ ಬಸವರಾಜ ಕಪ್ಪಣ್ಣವರ, ಎನ್.ಬಿ. ಬೆಂಡಿಗೇರಿ, ಹಣಮಂತ ಮೇಟಿ, ಮಲ್ಲಿಕಾರ್ಜುನ ಕಬ್ಬಿಣ, ಮಾರುತಿ ಮೇಟಿ, ಗೀರೀಶ ಮುನವಳ್ಳಿ, ಶಂಕರ ಹಿಟ್ಟಣಳ್ಳಿ, ಜಿ.ಎಸ್. ತೋಟಗಿ, ರಮೇಶ ಜಾದವ, ಬಿ.ಎಸ್. ಪಾಟೀಲ, ಎಚ್.ಕೆ. ಯಡೋಳ್ಳಿ, ಐ.ಎಸ್. ಪಾಟೀಲ, ಬಸಮ್ಮ ಹುಡೇದ, ರತ್ನಾಕ್ಕ ಕಾದ್ರೊಳ್ಳಿ ಸೇರಿದಂತೆ ಶರಣಸಂಗಮದ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 