ಜನಸೇವೆಯ ಮೂಲಕ ಜನಸಾಮಾನ್ಯರ ಬದುಕಿಗೆ ಆಸರೆಯಾಗುವುದೇ ಮಾನವ ಧರ್ಮ

ಜನಸೇವೆಯ ಮೂಲಕ ಜನಸಾಮಾನ್ಯರ ಬದುಕಿಗೆ ಆಸರೆಯಾಗುವುದೇ ಮಾನವ ಧರ್ಮ Humanism is about supporting the lives of the common people through public service

ರಾಣೇಬೆನ್ನೂರು 25:  ಮಾನವನ ಜೀವನ ಸಾರ್ಥಕತೆಗೆ ಜನಸೇವೆಯ ಮೂಲಕ ಜನಸಾಮಾನ್ಯರ ಜೀವನ ಬದುಕಿಗೆ ಆಸರೆಯಾಗುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದು ಕೋಡಿಯಾಲ ಹೊಸಪೇಟೆ ಗ್ರಾಮದ ಪುಣ್ಯ ಮಠದ ಶ್ರೀ ಜಗದೀಶ್ವರ ಮಹಾಸ್ವಾಮಿಗಳವರು ನುಡಿದರು.  

ಅವರು, ನಗರದ ಬಿಜೆಪಿ ಕಾರ್ಯಾಲಯ, ಸಭಾಂಗಣದಲ್ಲಿ ಅರುಣ ಕುಮಾರ್ ಪೂಜಾರ ಅವರ ಅಭಿಮಾನಿ ಬಳಗವು ಆಯೋಜಿಸಿದ್ದ, ಮಾಜಿ ಶಾಸಕ ಅರುಣ್ ಕುಮಾರ ಅವರ 48ನೇ ಜನ್ಮದಿನೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  

ಹುಟ್ಟು ನಿಶ್ಚಿತ ಈ ಭರತ ಭೂಮಿಯಲ್ಲಿ ಜನ್ಮ ತಡೆದ ಪ್ರತಿಯೊಬ್ಬ ಮಾನವನ ಜೀವನ ಸಾರ್ಥಕವಾಗಬೇಕು ಅದು ಪ್ರತಿಯೊಬ್ಬರ ಕನಸಾಗಬೇಕು. ಸಾಕಾರಗೊಳ್ಳಲು ಜನರ ಪ್ರೀತಿ ವಿಶ್ವಾಸ ಮತ್ತು ಅಭಿಮಾನ ಬಹು ಅಗತ್ಯ ಈ ನಿಟ್ಟಿನಲ್ಲಿ ಅರುಣ ಕುಮಾರ ಅವರು  ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿರುವ ತಾಲೂಕಿನ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ ನೆಲೆ ನಿಂತಿರುವುದು, ಸೇರಿದ ಸಾವಿರಾರು ನಾಗರಿಕರು ಸಾಕ್ಷಿಯಾಗಿದ್ದಾರೆ ಎಂದರು. ಅಭಿಮಾನಿ ಬಳಗ ಮತ್ತು ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಅರುಣ ಕುಮಾರ ಪೂಜಾರ ಅವರು, ಸಮಾಜ ಸೇವೆಯೇ ನನ್ನ ಮುಖ್ಯ ಗುರಿಯಾಗಿದೆ. ಅಧಿಕಾರ ಇರಲಿ ಇರದೇ ಇರಲಿ ನನ್ನ ಕರ್ತವ್ಯ ನಾನು ನಿಭಾಯಿಸಲು ಎಂದಿಗೂ ಸಿದ್ದನಿದ್ದೇನೆ ಎಂದರು   

ನನ್ನ ಮೇಲೆ ತಾಲೂಕಿನ ಜನರು ಅತೀವ ಪ್ರೀತಿ ವಿಶ್ವಾಸ ಅಭಿಮಾನ ಹೊಂದಿದ್ದಾರೆ ಹುಟ್ಟು ಹಬ್ಬದ ಆಚರಣೆ ಕಳೆದ ಮೂರು ವರ್ಷದಿಂದ ನಿರಾಕರಿಸಿದ್ದೆ. ಆದರೆ ಅಭಿಮಾನಿಗಳು ನನ್ನನ್ನು ಭೇಟಿಯಾಗಿ, ಜನಸಾಮಾನ್ಯರ ಸೇವೆಯ ಮೂಲಕ ಆಚರಿಸುತ್ತೇವೆ ಎಂದು ಹೇಳಿದ್ದರಿಂದ ಅವರ ಅಭಿಮಾನಕ್ಕೆ ನಾನು ಮೂಕ ವಿಸ್ಮಿತನಾದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಅಧ್ಯಕ್ಷ ಸುಭಾಷ್ ಸಿರಿಗೇರಿ, ಬ್ಯಾಡಗಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ವರ್ತಕ ವಿ. ಪಿ. ಲಿಂಗನಗೌಡ್ರ, ಮುಖಂಡರಾದ, ಕೆ. ಶಿವಲಿಂಗಪ್ಪ, ಎಸ್‌.ಎಸ್‌. ರಾಮಲಿಂಗಣ್ಣನವರ, ಪರಮೇಶಪ್ಪ ಗೊಳಣ್ಣನವರ, ಮಂಜುನಾಥ ಓಲೇಕಾರ,  

ಪ್ರಕಾಶ ಪೂಜಾರ, ಚೋಳಪ್ಪ ಕಸವಾಳ, ಸಂತೋಷ್ ಪಾಟೀಲ್, ಜಿ.ಪಂ ಮಾಜಿ ಅಧ್ಯಕ್ಷ ಶ್ರೀಮತಿ ಮಂಗಳಗೌರಿ ಪೂಜಾರ, ಶ್ರೀಮತಿ ಭಾರತಿ ಜಂಬಿಗಿ, ಸಿದ್ದಣ್ಣ ಚಿಕ್ಕಬಿದರಿ, ಅಮೋಘ ಬದಾಮಿ, ನಿಂಗರಾಜ ಕೋಡಿಹಳ್ಳಿ, ರಮೇಶ್ ಕರಡೆಣ್ಣನವರ, ಗೀರೀಶ್ ಹುಗ್ಗಿ, ಸೇರಿದಂತೆ ಮತ್ತಿತರ ಗಣ್ಯರು ಬಿಜೆಪಿ ಮುಖಂಡರು, ಯುವಕರು, ನಗರ ಮತ್ತು ತಾಲೂಕಿನ  ಸಾವಿರಾರು ಕಾರ್ಯಕರ್ತರು, ಪಾಲ್ಗೊಂಡಿದ್ದರು.