ಮಕ್ಕಳ ಬದುಕಿಗೆ ಮಾನವೀಯ ಮೌಲ್ಯ ಅವಶ್ಯ: ಸಿದ್ದರಾಮ ಶಿವಾಚಾರ್ಯ

ಮಕ್ಕಳ ಬದುಕಿಗೆ ಮಾನವೀಯ ಮೌಲ್ಯ ಅವಶ್ಯ: ಸಿದ್ದರಾಮ ಶಿವಾಚಾರ್ಯ  Human values ​​are essential for children's lives: Siddarama Shivacharya

ದೇವರಹಿಪ್ಪರಗಿ 30 : ಸಮಾಜದಲ್ಲಿ ಉತ್ತಮ ಮನುಷ್ಯನಾಗಿರಲು ಅವಶ್ಯಕತೆವಾಗಿರುವ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿದ್ದು ಪಾಲಕರು ಮಕ್ಕಳಿಗೆ ಮಾನವೀಯ ಗುಣಗಳನ್ನು ಕಲಿಸುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ಮಾಡಲು ಕಲಕೇರಿ ಹಿರೇಮಠದ ಷ.ಬ್ರ.  ಸಿದ್ದರಾಮ ಶಿವಾಚಾರ್ಯರು ಹೇಳಿದರು.

ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಮಂಗಳವಾರದಂದು ಸಿಂದಗಿ ಸಂಗಮ ಸಮಗ್ರ ಅಭಿವೃದ್ಧಿ ಕೇಂದ್ರ, ಯುವಕ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಜೈನ ಧರ್ಮಗಳ ಸ್ನೇಹಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಭಾರತ ವಿವಿಧತೆಯಲ್ಲಿ ಏಕತೆ ಸಾರುವ ಮೂಲಕ ಸಮಾಜದಲ್ಲಿ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಯಾವುದೇ ಬೇಧ ಭಾವ ಇಲ್ಲದೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿ ಬಾಳಬೇಕು ಹುಣಶ್ಯಾಳ ಪುಟ್ಟ ಗ್ರಾಮದಲ್ಲಿ ಎಲ್ಲಾ ಸಮಾಜದವರು ಸಹೋದರರಾಗಿ ಬಾಳುತ್ತಿರುವುದು ದೇಶಕ್ಕೆ ಮಾದರಿ ಎಂದು ದೀಪಾವಳಿ ಹಬ್ಬದ ಶುಭಾಶಯಗಳು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ ಅವರು ಮಾತನಾಡಿ, ಶಾಂತಿಯ ಸಂದೇಶಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಸ್ಲಾಂ ಧರ್ಮ ಗುರುಗಳಾದ ಮೈನುದ್ದೀನ್ ಮೋಮಿನ್ ಅವರು ಮಾತನಾಡಿ, ಶಾಂತಿಯುತವಾಗಿ ಬಾಳುವುದೇ ಎಲ್ಲಾ ಧರ್ಮಗಳ ಸಂದೇಶ. ಎಲ್ಲರೂ ಒಟ್ಟಾಗಿ ಬಾಳಬೇಕು ಎಂದರು.ಸಂದರ್ಭದಲ್ಲಿ ಸಿಂದಗಿ ಲೊಯೋಲ ಶಾಲೆಯ ಪ್ರಾಚಾರ್ಯ ಫಾದರ್ ವಿಶಾಲ್, ಆಡಳಿತ ನಿರ್ವಹಣಾಧಿಕಾರಿ ಫಾದರ್ ಜೀವನ ಅವರು ಮಾತನಾಡಿ ದೀಪಾವಳಿ ಹಬ್ಬವು ಬೆಳಕಿನ ಹಬ್ಬ ನಾವೆಲ್ಲರೂ ಸೇರಿ ಆಚರಿಸಿ ಜಗತ್ತಿಗೆ ಶಾಂತಿಯನ್ನು ಸಾರೋಣ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ನಾಗರಿಕರು ಪಾಲ್ಗೊಳ್ಳುವ ಮೂಲಕ ಏಕತೆಗೆ ಮಾದರಿಯಾದರು.

ಇದೇ ಸಂದರ್ಭದಲ್ಲಿ ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಹುಸೇನ ನಾಗಾವಿ, ಜೈನ ಸಮುದಾಯದ ಮುಖಂಡರಾದ ಭರತೇಶ ಪಾಕಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.