ನೆಮ್ಮದಿಯ ಬದುಕಿಗೆ ಮಾನವ ಹಕ್ಕುಗಳು ಉಪಯುಕ್ತ: ಗುರುಬಸವರಾಜಯ್ಯ
ಲೋಕದರ್ಶನ ವರದಿ
ಹೂವಿನಹಡಗಲಿ11:. ಸಮಾಜದಲ್ಲಿನ ಶಾಂತಿ ನೆಮ್ಮದಿಯ ಬದುಕಿಗೆ ಮಾನವ ಹಕ್ಕುಗಳು ಉಪಯುಕ್ತವೆಂದು ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಹೇಳಿದರು.
ತಾಲೂಕಿನ ನಂದಿಹಳ್ಳಿಯ ಸಕರ್ಾರಿ ಪ್ರೌಢಶಾಲೆಯಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ವಿರೋಧಿ ಸಂಸ್ಥೆ ತಾಲೂಕು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಮಾನವ ಹಕ್ಕುಗಳ ಪ್ರಭಾವ ಹೆಚ್ಚಿದೆ ಎಂದರು.
ಪ್ರತಿಯೊಬ್ಬರೂ ವಿವಿಧ ರಂಗಗಳಲ್ಲಿ ಪ್ರಗತಿ ಸಾಧಿಸಲು ಹಕ್ಕು ಮತ್ತು ಸ್ವಾತಂತ್ರ್ಯಗಳು ಮನುಷ್ಯನಿಗೆ ಉಸಿರಿನಷ್ಟೇ ಅಗತ್ಯವಾಗಿವೆ ಎಂದರು. ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಅನಾಚಾರದ ಪ್ರಕರಣಗಳನ್ನು ಅಳಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮಾನವ ಹಕ್ಕುಗಳ ಪಾತ್ರ ಹಿರಿದಾಗಿದೆ ಎಂದರು.
ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ವಿರೋಧಿ ಸಂಸ್ಥೆಯ ತಾಲೂಕು ಘಟಕದ ಅಧ್ಯಕ್ಷ ಐಗೋಳ್ ಬನ್ಯೆಜ್ಜ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರ ಎನ್ನುವುದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಕೆಲವೊಂದು ಇಲಾಖೆಗಲಲ್ಲಿ ನಡೆಯುವ ಭ್ರಷ್ಟಾಚಾರವನ್ನು ನೋಡಿದರೆ ಇಲಿಗಳನ್ನು ಹಿಡಿಯಲು ಹೆಗ್ಗಣಗಳನ್ನು ಸಾಕುತ್ತಿರುವಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿ ರಂಗದಲ್ಲೂ ಶೋಷಣೆ, ದೌರ್ಜನ್ಯ ತಾಂಡವವಾಡುತ್ತಿದೆ. ಭ್ರಷ್ಟಾಚಾರ, ಲಂಚಕೋರತನ ತಡೆಯುವಲ್ಲಿ ಯುವಕರು ಜಾಗೃತರಾಗಬೇಕಿದೆ ಎಂದರು.
ಮುಖ್ಯೋಪಾಧ್ಯಾಯ ಎಂ.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಬಿ.ವೀರಣ್ಣ ಮಾತನಾಡಿದರು. ಸಂಸ್ಥೆಯ ಸಹ ಕಾರ್ಯದಶರ್ಿ ಗಡಿಗಿ ಶಿವಕುಮಾರ, ಪ್ರೌಢಶಾಲೆಯ ಶಿಕ್ಷಕರಾದ ಬಸಯ್ಯ ನರೇಗಲ್, ಬಿ.ಎಂ.ವಾಮದೇವಯ್ಯ, ಆರ್.ಟಿ.ಎಸ್.ಶ್ರೀನಿವಾಸ್, ಜಿ.ಕವಿತಾ, ಎಸ್.ಡಿ.ಎಂ.ಸಿ.ಯ ಅಧ್ಯಕ್ಷ ಬಿ.ಲಕ್ಷ್ಮಣಗೌಡ್ರು ಉಪಸ್ಥಿತರಿದ್ದರು. ಆಶಾ ಮತ್ತು ಸಂಗಡಿಗರು ಪ್ರಾಥರ್ಿಸಿದರು. ಎನ್.ಅರವಿಂದಕುಮಾರ ಸ್ವಾಗತಿಸಿದರು. ವಿ.ಬಿ.ಲಕ್ಷ್ಮಿ ನಿರ್ವಹಿಸಿದರು. ಎಂ.ರಮೇಶ್ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 