ಬುಕ್ಕ ಸಾಗರ ಗ್ರಾ.ಪಂ ಅಧ್ಯಕ್ಷರಾಗಿ ಹುಲುಗಪ್ಪ ಆಯ್ಕೆ
Hulugappa elected as Bukka Sagar Gram Panchayat President
ಕಂಪ್ಲಿ 23: ತಾಲೂಕು ಸಮೀಪದ ಬುಕ್ಕಸಾಗರಗ್ರಾಪಂಯ ನೂತನಅಧ್ಯಕ್ಷರಾಗಿಗೊಂಚೆಗೇರಿ ಹುಲುಗಪ್ಪಅವಿರೋಧವಾಗಿಆಯ್ಕೆಗೊಂಡರು.ಹಿಂದಿನ ಅಧ್ಯಕ್ಷ ವಿ.ಕೆ ಹನುಮಂತಪ್ಪಅವರ ನಿಧನದ ಹಿನ್ನಲೆತೆರವಾಗಿದ್ದಅಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿ(ತಹಶೀಲ್ದಾರ) ಶೃತಿ ಮಲ್ಲಪ್ಪಗೌಡ್ರು ಇವರ ನೇತೃತ್ವದಲ್ಲಿ ಬುಧವಾರ ಇಲ್ಲಿನ ಗ್ರಾಪಂ ಕಛೇರಿಯಲ್ಲಿ ಚುನಾವಣೆ ನಡೆಯಿತು.
ಇಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಗೊಂಚೆಗೇರಿ ಹುಲುಗಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಪರಿಣಾಮ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ನೂತನ ಅಧ್ಯಕ್ಷ ಹುಲುಗ್ಪಇವರು ಮಾಲಾರ್ಪಣೆ ಸ್ವೀಕರಿಸಿದ ನಂತರ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದಾಗಿಅಧ್ಯಕ್ಷ ಸ್ಥಾನಕ್ಕೆ ನಮ್ಮನ್ನುಆಯ್ಕೆ ಮಾಡುವ ಮೂಲಕ ಮತ್ತಷ್ಟು ಜವಾಬ್ದಾರಿವಹಿಸಿದ್ದು, ಎಲ್ಲರ ಪ್ರೀತಿ, ವಿಶ್ವಾಸದೊಂದಿಗೆ ಗ್ರಾಪಂಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಡಿಒಟಿ.ಎ.ರಾಜೇಶ್ವರಿ, ಉಪಾಧ್ಯಕ್ಷೆರಮಾದೇವಿ, ಸದಸ್ಯರಾದ ಗಾಯತ್ರಿ, ಗಾಳೆಮ್ಮ ಕುರುಬರ, ವೆಂಕಟೇಶ ಬಸಾಪೂರ, ದ್ಯಾವಮ್ಮವಡ್ರು, ಜಡೆಯ್ಯಸ್ವಾಮಿಎಸ್ ಎಂ, ರಮೇಶಕುಮಾರ, ರಮಾದೇವಿ, ಡಿ.ಜಿ.ಚನ್ನಬಸಮ್ಮ, ಹನುಮಕ್ಕ, ಲಕ್ಷ್ಮಿ ಹರಿಜನ, ಬಿ.ಶಶಿಧರ, ಶೇಕ್ಷಾವಲಿ, ಶೈನಾಜ್ ಬೇಗಂ, ರೇವಣ್ಣ, ವಾಣಿ, ಎ.ಶಂಕ್ರ್ಪ, ವರಲಕ್ಷ್ಮಿ, ಜಿ.ಮಲ್ಲೇಶ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 