ಹುಲಕುಂಟೆರಾಯ ತೊಗಲುಗೊಂಬೆ ಕಲಾ ತಂಡ(ರಿ) ಬಳ್ಳಾರಿ
Hulakunteraya Puppet Art Troupe(s) Bellary
ಲೋಕದರ್ಶನ ವರದಿ
ಬಳ್ಳಾರಿ 12 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಹಳ್ಳಿ ಸಂಸ್ಕೃತಿ ಸಂಭ್ರಮ ಎನ್ನುವ ಕಾರ್ಯಕ್ರಮವನ್ನು ಸಂಡೂರು (ತಾ) ಬಳ್ಳಾರಿ (ಜಿ) ಎಂ ಲಕ್ಕಲಹಳ್ಳಿಯ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ತಾಲೂಕು ಪಂಚಾಯಿತಿಯ ಸದಸ್ಯರಾದ ಶ್ರೀ ಟಿ.ಶೇಖರ್ಪ ನವರು ಮಾತನಾಡುತ್ತಾ ಕಲೆ ಎನ್ನುವ ಸಾಗರದಲ್ಲಿ ಕಲಾವಿದನೆ ನಾಯಕ ಎಂದು ಶೇಖರ್ಪ ನುಡಿದರು,
ನಮ್ಮ ಹಳ್ಳಿಯಲ್ಲಿ ತೊಗಲುಗೊಂಬೆ ಮತ್ತು ಬಯಲಾಟಕ್ಕೆ ಬುನಾದಿ ಹಾಕಿದವರು ತೊಗಲುಗೊಂಬೆ ಹುಲೆಪ್ಪನವರು ಗ್ರಾಮೀಣ ಪ್ರದೇಶದಲ್ಲಿ ಕಲೆ ಉಳಿಯಲು ಸಾಕಷ್ಟು ಶ್ರಮಿಸಿದರು ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಬೇಕು ಈ ಸಂಸ್ಥೆಯು ಎಲ್ಲಾ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ನಾಗರಾಜ ರವರು ಹೇಳಿದರು
ಗಡಿಭಾಗದ ಅನೇಕ ಗ್ರಾಮಗಳು ಮೂಲೆಗುಂಪುಗಳಾಗುತ್ತಿದ್ದಾವೆ, ಇಂತಹ ಹಳ್ಳಿಗಳನ್ನ ಗುರುತಿಸಿ ಕಾರ್ಯಕ್ರಮಗಳನ್ನು ನೀಡಬೇಕು ಜಾನಪದ ಹಳ್ಳಿಯಿಂದಲೇ ಹುಟ್ಟಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎನ್ ಮಂಜುನಾಥ ಇವರು ಹೇಳಿದರು ಊರಿನ ಯಜಮಾನರಾದ ಬಿ ಎರಿಸ್ವಾಮಿ, ಗೋಪುರ ಲಕ್ಷ್ಮಣ, ಶಿಳ್ಳೆ ಓಬಣ್ಣ, ದೊಡ್ಡ ಹನುಮಂತಪ್ಪ, ಅಂಗಡಿ ಎರಿ್ರಸ್ವಾಮಿ, ಭೀಮಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಪರಮೇಶ್ವರ್ಪ, ಓ.ಹನುಮಂತಪ್ಪ, ಪಿ ಹನುಮಂತಪ್ಪ, ದೇವರ ಗಂಗಾರೆಡ್ಡಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ ಹಾಗೂ ನೃತ್ಯ ಗುರುಗಳಾದ ಜಿಲಾನ್ ನಾಷ ಉಪಸ್ಥಿತರಿದ್ದರು.
ನಂತರ ಜಾನಪದ ಗಾಯನವನ್ನು ಹನುಮಯ್ಯ ಮತ್ತು ತಂಡ ತಿಮ್ಮಲಾಪುರ, ಸಮೂಹ ನೃತ್ಯ ಕುಮಾರಿ ಜಾನ್ಹವಿ ಮತ್ತು ತಂಡ ಬಳ್ಳಾರಿ ತೊಗಲುಗೊಂಬೆ ಪ್ರದರ್ಶನವನ್ನು ಲಕ್ಷ್ಮಿದೇವಿ ಮತ್ತು ತಂಡ ಬೊಮ್ಮಸಂದ್ರ ಇವರು ನೆರವೇರಿಸಿಕೊಟ್ಟರು, ಸ್ವಾಗತ ಮತ್ತು ಪ್ರಸ್ತಾವಿಕ ನುಡಿಗಳನ್ನ ಕೆ ಹೊನ್ನೂರ ಸ್ವಾಮಿ, ಪ್ರಾರ್ಥನೆ ಹನುಮಯ್ಯ ಮತ್ತು ತಂಡ, ವಂದನಾರೆ್ಣ ಲಕ್ಷೀದೇವಿ, ವಿಷ್ಣು ಹಡಪದ ನಿರೂಪಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 