ಡೋಣಿ ನದಿ ಹೂಳು ತಗೆಯುವಲ್ಲಿ ಭಾರಿ ಗೋಲ್‌ಮಾಲ್- ಶಾಶ್ವತ ಪರಿಹಾರಕ್ಕಾಗಿ ಆಗ್ರಹ
Huge loss due to silting of Doni River - Demand for permanent solution
ಲೋಕದರ್ಶನ ವರದಿ
ವಿಜಯಪೂರ : ಡೋಣಿ ನದಿಯನ್ನು ಸರಿಯಾಗಿ ಮೂಲ ನಕಾಶೆಯಂತೆ ಭೂ-ಮಾಪನ ಮಾಡಿಸಿ, ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ ನಿರ್ಮಿಸಿ, ಅಕ್ಕಪಕ್ಕದಲ್ಲಿ ದೊಡ್ಡ ಬೇರುಗಳ ಮರ ಅಥವಾ ಬೀದಿರುಗಳನ್ನು ನೆಟ್ಟು ಯೋಜನೆ ಪೂರ್ಣಗೊಳಿಸಬೇಕು, ಡೋಣಿ ನದಿಯಿಂದ ನಷ್ಟಗೊಂಡ ಸಮಸ್ತ ರೈತರಿಗೆ ಪರಿಹಾರ ನೀಡಬೇಕು ಮತ್ತು ಸಾರವಾಡ ಗ್ರಾಮ ಮುಳಗಡೆ ಆಗುವ ಸಂಭವವಿರುತ್ತದೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳಾದರೆ ಜೀವ ಹೋದರೆ ಜಿಲ್ಲಾಡಳಿತವೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಕನಾಟಕ ರಾಜ್ಯ ರೈತ ಸಂಘ ಹಾಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ಡೋಣಿ ನದಿಗೆ ಅಂದಾಜು 10 ಕೋಟಿ ವೆಚ್ಚದಲ್ಲಿ 5 ಕಡೆ ಹೂಳು ತೆಗೆಯುತ್ತಿರುವುದು ಕೇವಲ ತಾತ್ಕಾಲಿಕವಾಗಿ ಕಾಮಗಾರಿ ಹೆಸರಲ್ಲಿ ಬಿಲ್ ಎತ್ತುವ ಕೆಲಸ ನಡೆದಿದೆ, ಸಾರವಾಡದ ಸಮೀಪ ಅನೇಕ ರೈತರ ಜಮೀನುಗಳಲ್ಲಿ ರೈತರಿಗೆ ತಿಳಿಸದೇ ಮನಸ್ಸೋ ಇಚ್ಚೆ ಅವರ ಜಮೀನುಗಳಲ್ಲಿ ಮುಳ್ಳು ಕಂಠಿ ಕಡಿದು, ದೊಡ್ಡ ದೊಡ್ಡ ತೆಗ್ಗು ತಗೆಯುತ್ತಿದ್ದು, ಡೋಣಿ ತನ್ನ ದಿಕ್ಕನ್ನು ಬಿಟ್ಟು ಬೇರೆಡೆ ಹರಿಯುವುದರಿಂದ ರೈತರು ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿದ್ದಾರೆ ಅಂತಹ ರೈತರು ಬದುಕು ನಡೆಸುವುದಾದರೂ ಹೇಗೆ ಎಂದರು.
ಕೂಡಲೇ ಡೋಣಿ ನದಿಯ ಸರಕಾರಿ ಮೂಲ ನಕಾಶೆಯನ್ನು ನೋಡಿ ಅದರಂತೆ ಅಕ್ಕಪಕ್ಕದ ರೈತರೊಂದಿಗೆ ಸಭೆ ಮಾಡಿ ಹದ್ದಬಸ್ತ ಮಾಡಿ, ಜಂಗಲ ಕಟಿಂಗ್ ಮಾಡಿ, ನಂತರದಲ್ಲಿ ಕಲ್ಲಿನಿಂದ ತಡೆಗೊಡೆ ನೀರ್ಮಿಸಬೇಕು, ಮತ್ತು ನ್ಯಾಶನಲ್ ಬಂಬು ಮಿಷನ್ ಅಡಿಯಲ್ಲಿ ಡೋಣಿಯ 2 ಬದಿಗಳಲ್ಲಿ ಬೀದಿರನ್ನು ಹಚ್ಚುವುದರಿಂದ ಈ ಯೋಜನೆ ಶಾಶ್ವತವಾಗಿ ಮತ್ತು ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ನೀರು ನುಗ್ಗದೇ ತಡೆಯಬಹುದಾಗಿದೆ ಎಂದರು
ಈ ವೇಳೆ ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಟಗಿ ಅವರು ಮಾತನಾಡುತ್ತಾ ಕೆಲವೊಂದು ಕಡೆ ಕೇವಲ 10 ಪೂಟ್ ಡೋಣಿ ಹರೆದರೆ ಮತ್ತೊಂದು ಕಡೆ 300 ಪೂಟ್ ಡೋಣಿ ಹರಿಯುತ್ತಿದೆ, ಇದರಿಂದ ರೈತರು ಪ್ರತಿವರ್ಷ ಒಳ್ಳೆಯ ಭೂಮಿ ಇದ್ದರೂ ಕೂಡಾ ಬಿತ್ತನೆ ಮಾಡದೇ ನಷ್ಟ ಅನುಭವಿಸುತ್ತಿದ್ದಾರೆ, ಅದೇ ರೀತಿ ಸಾರವಾಡ ಗ್ರಾಮದಲ್ಲಿ ನೀರು ನುಗ್ಗಿ ಮುಳಗಡೆಯಾಗಿ ಸಾವುನೋವುಗಳು ಕೂಡಾ ಸಂಭವಿಸಿವೆ, ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂದಪಟ್ಟ ಅಧಿಕಾರಿಗಳು ರೈತರೊಡನೆ ತುರ್ತು ಸಭೆ ಮಾಡಿ ಇತ್ಯರ್ಥಗೊಳಿಸಿ ಮಳೆಗಾಲ ಪ್ರಾರಂಭವಾಗುವದರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಈ ಕುರಿತು ಹಲವಾರು ಭಾರಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ನ್ಯಾಯ ಸಿಕ್ಕಿಲ್ಲ, ಆದ್ದರಿಂದ ಈ ಕಾಮಗಾರಿಯನ್ನು ನಿಲ್ಲಿಸಿ ಅವರ ಬಿಲ್‌ನ್ನು ತೆಡೆಹಿಡೆಯಬೇಕು, ನೋಂದ ರೈತರಿಗೆ ಪರಿಹಾರ ಕಲ್ಪಿಸಿ ಜೀವನಕ್ಕೆ ದಾರಿಮಾಡಿಕೊಡಬೇಕು. ಇಲ್ಲವಾದರೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡೋಣಿ ನದಿ ರೈತರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದರು. ಈ ವೇಳೆ ರಾಮಪ್ಪ ಚಿಕ್ಕರೆಡ್ಡಿ,್ಪ ರೋಹನ ಬಾಲರೆಡ್ಡಿ, ರಂಗಪ್ಪ ನಾಟಿಕಾರ, ಸಿದ್ದಲಿಂಗಪ್ಪ ಕಟ್ಟಿಮನಿ, ಸುಹಾಸ ಯಾಳವಾರ ಸೇರಿದಂತೆ ಇನ್ನಿತರು ಇದ್ದರು,
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 