ಫೆ.8 ರಂದು ಬೃಹತ್ ಹಿಂದೂ ಸಮ್ಮೇಳನ : ಶನಿವಾರ ಬೈಕ್ ರ್ಯಾಲಿ

ಫೆ.8 ರಂದು ಬೃಹತ್ ಹಿಂದೂ ಸಮ್ಮೇಳನ : ಶನಿವಾರ ಬೈಕ್ ರ್ಯಾಲಿ  Huge Hindu gathering on Feb. 8: Bike rally on Saturday

ಫೆ.8 ರಂದು ಬೃಹತ್ ಹಿಂದೂ ಸಮ್ಮೇಳನ : ಶನಿವಾರ ಬೈಕ್ ರ್ಯಾಲಿ  

ರಾಣೆಬೆನ್ನೂರು :4 ಹಿಂದೂ ಸಮಾವೇಶವ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ ಅದು ಸಮಾಜದ ಏಕತೆ ಸಂಸ್ಕೃತಿಯ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತಿಕವಾಗಿದೆ ಎಂದು ಹಿಂದೂ  ಸಮ್ಮೇಳನ ಸಮಿತಿಯ ಸಂಚಾಲನಾ ಸಮಿತಿ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ಹೇಳಿದರು. ಅವರು, ಇಲ್ಲಿನ ತರಳಬಾಳು ವಾಣಿಜ್ಯ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಇದೇ ಫೆಬ್ರವರಿ 8, 2026 ರಂದು ರವಿವಾರ ಹಿಂದೂ ಸಮ್ಮೇಳನ ನಡೆಯಲಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಶಿವ ಕಾಲೇಜ್ ಆವರಣ ದಿಂದ ಬೃಹತ್ ಶೋಭಾಯಾತ್ರೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಜೆ 6 ಗಂಟೆಗೆ, ಎಪಿಎಂಸಿ ಕಚೇರಿ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಜರುಗಲಿದೆ ಎಂದರು.  

ಫೆಬ್ರುವರಿ7, ರಂದು ಶನಿವಾರ ಮುಂಜಾನೆ 19 ಗಂಟೆಗೆ, ಸಾರ್ವಜನಿಕವಾಗಿ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ.  ರವಿವಾರದಂದು ನಡೆಯುವ ಸಮಾರಂಭದಲ್ಲಿ ಅವರಗೊಳ್ಳ ಪುರವರ್ಗ ಹಿರೇಮಠದ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಹೊನ್ನಾಳಿಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾನಂದ ಸ್ವಾಮಿಗಳು, ಮತ್ತು ದೊಡ್ಡಪೇಟೆ ವಿರಕ್ತ ಮರದ  ಗುರುಬಸವ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ವರ್ತಕ ಸಂಘದ ಮಾಜಿ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡರ ಅಧ್ಯಕ್ಷತೆ ವಹಿಸುವರು. ಹಿಂದೂ ಸೇವಾ ಸಮಿತಿಯ ವಕ್ತಾರರಾದ  ಸು.ರಾಮಣ್ಣ ಭಾಗವಹಿಸುವರು. ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ಶ್ರೀಪಾದ ಕುಲಕರ್ಣಿ, ದತ್ತಾತ್ರೇಯ ನಾಡಿಗೇರ,  ಶ್ರೀಮತಿ ಅರುಣಾ ಕಬಾಡಿ, ಜಗದೀಶ್ ಪ್ರಜಾಪತ್, ಶ್ರೀ ಧರ್ ಪಾಸ್ತೆ, ಶಿವಪ್ಪ ಗುರಿಕಾರ, ಪವನ ಜನ್ನು ಪ್ರಭಾವತಿ ತಿಳುವಳ್ಳಿ ಮತ್ತಿತರರು ಇದ್ದರು.