ಬೆಂಗಳೂರು, ಏ.11, ಹೊಯ್ಸಳ ನಿಮ್ಮದು. ನಿಮ್ಮ ತುರ್ತು ಪರಿಸ್ಥಿತಿಗಳಲ್ಲಿ ಉಪಯೋಗಿಸಿಕೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಲಾಕ್ಡೌನ್ ಸಂಬಂಧ ಪ್ರಶ್ನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಯುಕ್ತರು ಟ್ವಿಟರ್ನಲ್ಲಿ ಕ್ರಿಯಾಶೀಲವಾಗಿದ್ದಾರೆ.ಶುಕ್ರವಾರ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೋರ್ವನಿಗೆ ಹೊಯ್ಸಳ ಕಳಿಸಿಕೊಟ್ಟು ನೆರವಾಗಿದ್ದರು.ಇದೀಗ ಹೊಯ್ಸಳವನ್ನು ನಿಮ್ಮ ತುರ್ತು ಪರಿಸ್ಥಿತಿಗೆ ಬಳಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.ಹೊಯ್ಸಳ ಸೇವೆಗಾಗಿ 100ಕ್ಕೆ ಕರೆ ಮಾಡಿ. ಪ್ರತಿ ಕರೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ದಯವಿಟ್ಟು ಪೊಲೀಸ್ ಕಾರು ಬಳಸಿಕೊಳ್ಳಿ ಎಂದು ಆಯುಕ್ತರು ಕೋರಿದ್ದಾರೆ.