ಉಗಾರ ಸಕ್ಕರೆ ಕಾರ್ಖಾನೆ ಬಂದ್ ಆದರೆ ಬದುಕುವುದು ಹೇಗೆ? ಆತ್ಮಹತ್ಯೆ ಎಚ್ಚರಿಕೆ

ಉಗಾರ ಸಕ್ಕರೆ ಕಾರ್ಖಾನೆ ಬಂದ್ ಆದರೆ ಬದುಕುವುದು ಹೇಗೆ? ಆತ್ಮಹತ್ಯೆ ಎಚ್ಚರಿಕೆ  How will we survive if the Ugar Sugar Factory shuts down? Threat of suicide


ಕಾಗವಾಡ 10: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಗಾರ ಸಕ್ಕರೆ ಕಾರ್ಖಾನೆ ಬಂದ್ಗೆ ಆದೇಶಿಸಿರುವ ಹಿನ್ನೆಲೆಯಲ್ಲಿ, ಕಾರ್ಖಾನೆ ಬಂದ್ ಮಾಡಬಾರದು ಎಂದು ಆಗ್ರಹಿಸಿ ಸ್ಥಳೀಯರು ಹಾಗೂ ರೈತರು ಪ್ರತಿಭಟನೆ ನಡೆಸಿದರು.  

ಹೈಕೋರ್ಟ್‌ ಸೂಚನೆಯಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ ಹಾಗೂ ತಂಡ ಬುಧವಾರ ಕಾರ್ಖಾನೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಕಾರ್ಖಾನೆ ಬಂದ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.  

ಕಾರ್ಖಾನೆಯನ್ನು ಅವಲಂಬಿಸಿ ಸಾವಿರಾರು ಕುಟುಂಬಗಳು ಹಾಗೂ ರೈತರು ಜೀವನ ನಡೆಸುತ್ತಿದ್ದಾರೆ. ಕಾರ್ಖಾನೆ ಬಂದ್ ಮಾಡಿದರೆ ಜೀವನ ನಡೆಸುವುದು ಕಷ್ಟವಾಗಲಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಸ್ಥಳೀಯ ಮಹಿಳೆಯರು ಎಚ್ಚರಿಸಿದರು.  

ಅಧಿಕಾರಿಗಳು, ಹೈಕೋರ್ಟ್‌ ಆದೇಶದಂತೆ ಪರೀಶೀಲನೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಬಳಿಕ ಕಾರ್ಖಾನೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.  

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸತೀಶ್ ಜಗತಾಪ್, ಸದಸ್ಯ ಮಹಾದೇವ ವಡಗಾವೆ, ಪ್ರತಾಪ್ ಜತ್ರಾಟೆ, ಯೋಗೇಶ್ ಕಾಮೇರಿ ಸೇರಿದಂತೆ ನೂರಾರು ಸ್ಥಳೀಯರು ಹಾಗೂ ರೈತರು ಉಪಸ್ಥಿತರಿದ್ದರು.