ಹೊಟೇಲ ಮಾಲೀಕರ ವಿವಿಧ ಬೇಡಿಕೆಗಳನ್ನು ಇಡೇರಿಸುವಂತ ಸಚಿವರಿಗೆ ಮನವಿ
Hotel owners appeal to the Minister to address various demands
ಯರಗಟ್ಟಿ 16: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೊಟೇಲ ಮಾಲೀಕರ ಸಂಘದ ವಿವಿಧ ಬೇಡಿಕೆಗಳನ್ನು ಇಡೇರಿಸುವಂತ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರ ಮುಖಾತಂರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೊಟೇಲ ಮಾಲೀಕರ ಸಂಘ
ಮನವಿ ಸಲ್ಲಿಸಿ ಸಂಘದ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಪ್ರವಾಸಿಗರ ಅನುಕೂಲ ಹಾಗೂ ಪ್ರವಾಸೋದ್ಯಮ ಬೆಳೆಯಲು ಅನುಕೂಲ ಆಗುವ ದೃಷ್ಟಿಯಿಂದ ಪ್ರವಾಸೋದ್ಯಮ ಹಾಗು ಅಬಕಾರಿ ಇಲಾಖೆಯ ಅನುಮತಿ ಪಡೆದು ಸುಮಾರು 3,050 ಹೋಟೆಲುಗಳನ್ನು ಪ್ರಾರಂಭಿಸಿ ಪ್ರವಾಸಿಗರಿಗೆ ಊಟ, ವಸತಿ, ಸಾರಿಗೆ ಸೌಕರ್ಯ ಗೈಡ್ಸ ಹಾಗೂ ಮಧ್ಯ ಪೂರೈಕೆಯ ವ್ಯವಸ್ಥೆಯನ್ನು ಮಾಡುತ್ತಾ ಇದ್ದೆವೆ.
ಬ್ಯಾಂಕುಗಳಿಂದ ಸಾಲ ಪಡೆದು ಸುವಸ್ಥಿತವಾಗಿ ಕಟ್ಟಡ ಕಟ್ಟಿ 50 ರಿಂದ 60 ಜನರಿಗೆ ನೌಕರಿ ನೀಡಿ ಆದಾಯ ತೆರಿಗೆ ಜಿ.ಎಸ್.ಟಿ ವಿದ್ಯುತ ಚ್ಯತಿ ಬಿಲ್ ಆಸ್ತಿ ತೆರಿಗೆ ವ್ಯಾಪಾರಿಕರ ಹಾಗೂ ಸಿ.ಎಲ್.07 ಸನದು ವಾರ್ಷಿಕ ಫೀ ತುಂಬಿ ನಮ್ಮ ವಾಪ್ಯಾರ ವಹಿವಾಟು ನಡೆಸುವುದು ಕಷ್ಟದಾಯಕವಾಗಿದೆ. ಇಂತಹ ಸಮಯದಲ್ಲಿ ವಾರ್ಷಿಕ ನವೀಕರಣ ಫೀ ನ್ನು ಸರಕಾರ ದ್ವಿಗುಣಗೊಳಿಸಿ ನಂತರ ನಮ್ಮ ಬೇಡಿಕೆ ವಿನಂತಿ ಪರಿಗಣಸಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯನವರು ಹಾಗು ಅಬಕಾರಿ ಸಚಿವರಾದ ತಿಮ್ಮಾಪುರ ಅವರು ವಾರ್ಷಿಕ ಫೀ ಯಲ್ಲಿ 50ಅ ಕಡಿಮೆ ಮಾಡಿ ಜೊತೆಗೆ ಲೈಸೆನ್ಸ್ 5 ವರ್ಷಗಳವರೆಗೆ ಸರಳಿಕರಣಗೊಳಿಸಿ ಕಂತಿನ ರೂಪದಲ್ಲಿ ಹಣ ಕಟ್ಟುವ ಆದೇಶವನ್ನು ಅಭಿನಂದನೆಗಳೊಂದಿಗೆ ರಾಜ್ಯಮಟ್ಟದ ಎಲ್ಲಾ ಸಿ.ಎಲ್.07 ಮಾಲೀಕರ ಪರವಾಗಿ ಸ್ವಾಗತಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಉಮೇಶ ಬಾಳಿ ಹೇಳಿದರು.
ಆದರೂ ಸಹಿತ ನಮ್ಮ ಹೋಟಲ್ ಮಾಲೀಕರು ಆರ್ಥಿಕವಾಗಿ ತೊಂದರೆಯಲ್ಲಿದ್ದು ಸರಕಾರದ ನೀತಿ ನಿಯಮಗಳನ್ನು ಸಡೀಲಗೊಳಿಸಿ ಈ ಕೆಳಗೆ ಸೂಚಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಿ ಸರಕಾರ ನಮ್ಮ ಉದ್ಯೋಗಕ್ಕೆ ಬೆಂಬಲ ನೀಡುತ್ತೀರಿ ಎಂದು ನಾವು ನಂಬಿದ್ದೇವೆ ಎಂದರು.
ಈ ವೇಳೆ ರಾಜು ಕಲಾಲ, ಭಗವಾನದಾಸ ವಾಳವೇಕರ, ರಮೆಶ ಕಳಸನ್ನವರ, ಶಿವರಾಜ ಬಸಗುಂಡಿ, ಸಂಗನಗೌಡ ದ್ಯಾಮನಗೌಡ್ರ, ಸಿದ್ದು ಸೂರ್ಯವಂಶಿ, ಜಯರಾಮ ಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ಮಧ್ಯವಹಿವಾಟಿನ ಲಾಭಾಂಶ ಶೇಕಡಾ 10ಅ ಇದ್ದು ಮೊದಲಿನ ಪದ್ಧತಿಯಂತೆ ಶೇಕಡಾ 20ಅ ಮಾಡಿಕೊಡಬೇಕು. ಮಧ್ಯದ ಸಣದುಗಳನ್ನು ಇತರೆ ವಿಭಾಗದಲ್ಲಿ ಇರುವ ರೀತಿಯಲ್ಲಿ ನಮ್ಮ ಸಿ.ಎಲ್.07 ಸಣದವನ್ನು ಸಹಿತ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಬೇಕು., ಪ್ರವಾಸಿಗರಿಗೆ ಮಧ್ಯಪೂರೈಕೆ ಮಾಡುವ ವ್ಯವಸ್ಥೆಯಿದ್ದು ಹೊರಗಿನ ಗ್ರಾಹಕರಿಗೂ ಸಹಿತ ಅನುಕೂಲವಾಗಲು ಪಾರ್ಸಲ್ ವ್ಯವಸ್ಥೆಯನ್ನು ಮಾಡಿಕೊಡಬೇಕು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 