ಹೋತನಹಳ್ಳಿ ವಸತಿ ಶಾಲೆ ಜ್ಞಾನ ಕೇಂದ್ರವಾಗಿ ಕಾರ್ಯ ನಿರ್ವಹಣೆ:ಎ.ಸಿ.ವಾಲಿ

ಹೋತನಹಳ್ಳಿ ವಸತಿ ಶಾಲೆ ಜ್ಞಾನ ಕೇಂದ್ರವಾಗಿ ಕಾರ್ಯ ನಿರ್ವಹಣೆ:ಎ.ಸಿ.ವಾಲಿ Hotanahalli Residential School to function as a knowledge center: A.C. Vali

ಶಿಗ್ಗಾವಿ 20: ವಿದ್ಯಾರ್ಥಿಗಳು ಅಕ್ಷರ ಜ್ಞಾನ ಪಡೆಯುವ ಜತೆಗೆ ನಮ್ಮ ಸನಾತನ ಧರ್ಮ, ಸಂಸ್ಕೃತಿ, ಸಂಸ್ಕಾರಗಳ ಅರಿವು ಪಡೆದುಕೊಳ್ಳಬೇಕು. ಇವುಗಳಿಗೆ ಹೋತನಹಳ್ಳಿ ದೇವರಾಜ ಅರಸು ವಸತಿ ಶಾಲೆ ಜ್ಞಾನ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಎ.ಸಿ.ವಾಲಿ ಮಹಾರಾಜರು ಅಭಿಪ್ರಾಯಿಸಿದರು.   

ತಾಲೂಕಿನ ಹೋತನಹಳ್ಳಿ ಗ್ರಾಮದ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಜಾತಿ, ಮತ ಪಂಥಗಳೆಂಬ ಗೋಡೆಗಳಿಂದ ಹೊರಬಂದು ಮಾನವೀಯ ಧರ್ಮದ ಮೌಲ್ಯಗಳನ್ನು ಅರಿಯಬೇಕಿದೆ. ಶಿಕ್ಷಕರು. ಕರ್ತವ್ಯದ ಶಿಕ್ಷಣದ ಜತೆಗೆ ಬದುಕಿಗೆ ಬೇಕಿರುವ ಸಂಸ್ಕೃತಿ, ಸಂಸ್ಕಾರದ ಪಾಠ ಮಾಡಬೇಕು. ಹೋತನಹಳ್ಳಿ ವಸತಿ ಶಾಲೆಯಂತೆ ಎಲ್ಲ ಶಾಲೆಗಳಾಗಬೇಕು" ಎಂದು ಆಸೆ ವ್ಯಕ್ತಪಡಿಸಿದರು.   

ಶಿಗ್ಗಾವಿ ವಿರಕ್ತಮಠದ ಸಂಗನಬಸವ ಶ್ರೀಗಳು ಮಾತನಾಡಿ ಮೆಟ್ರಿಕ್ ಪೂರ್ವಶಿಕ್ಷಣ ತಜ್ಞರಿಂದ ಪಠ್ಯಗಳ ಪಾಠದ ಜತೆಗೆ ನೀತಿಪಾಠ' ತಿಳಿಸಿಕೊಡಲು ನಿಲಯದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿದ್ದೇವೆ. ನಿಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುತ್ತಿದೆ. ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ ವಸತಿ ಶಾಲೆಯೊಳಗೆ ಗೋಡೆ ಬರಹಗಳೇ ವಿದ್ಯಾರ್ಥಿಗಳಿಗೆ ಶಿಕ್ಷಕರಂತೆ ಮಾಡುತ್ತಿವೆ. ಇಂತಹ ಕಲಿಕೆ ವಾತಾವರಣ ಸೃಷ್ಟಿಸಿದ ನಿಲಯದ ಮೇಲ್ವಿಚಾರಕ ರಮೇಶ ಹರಿಜನ ನೇತೃತ್ವದ ಕಾಳಜಿ ಕಳಕಳಿ ಸಿಬ್ಬಂದಿಗಳ ಶೈಕ್ಷಣಿಕ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು. ಉಪನ್ಯಾಸಕ ಶಶಿಕಾಂತ ರಾಠೋಡ ಮಾತನಾಡಿ ಗ್ರಾಮಸ್ಥರ ಸಹಕಾರದಿಂದ ಮೇಲ್ವಿಚಾರಕರು ವಸತಿ ನಿಲಯದಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ನಿಲಯದ ವಿದ್ಯಾರ್ಥಿಗಳಿಗೆ ಈ ವಿಫುಲ ಅವಕಾಶವನ್ನು ತಮ್ಮ ಉನ್ನತ ವ್ಯಾಸಂಗಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ಗಂಗಾಧರ ಭಂಗಿ, ಬಸವರಾಜ ಶಿಗ್ಗಾವಿ, ಸಿ.ಡಿ.ಯತ್ತಿನಹಳ್ಳಿ, ಶಂಭು ಕೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಇಂಧೂದರ ಮುತ್ತಳ್ಳಿ, ರವಿ ಕಡಕೋಳ, ಮಾಂತೇಶ ನಾಯ್ಕೋಡಿ ಸೇರಿದಂತೆ ವಸತಿ ನಿಲಯದ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.