ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ: ಬಸವಜಯ ಮೃತ್ಯುಂಜಯ ಜಗದ್ಗುರುಗಳು

ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ: ಬಸವಜಯ ಮೃತ್ಯುಂಜಯ ಜಗದ್ಗುರುಗಳು Hostel for students of Panchamasali community: Basavajaya Mrityunjaya Jagadgurugalu

ಲೋಕದರ್ಶನ ವರದಿ  

ಇಂಡಿ 31:  ಇಂಡಿ ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ, ದಾಸೋಹ ಹಾಗೂ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಶಾಖಾ ಮಠ ನಿರ್ಮಿಸಲು ಸೋಮವಾರ ತೀರ್ಮಾನ ಕೈಗೊಳ್ಳಲಾಯಿತು.ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹ್ಮಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜ ಬಾಂಧವರು ರಾಜ್ಯದ ವಿವಿಧೆಡೆ ಲಿಂಗಾಯತ ಉಪಪಂಗಡಗಳಿಗೆ ತಮ್ಮ ಜಮೀನುಗಳನ್ನು ಶಿಕ್ಷಣ ಸಂಸ್ಥೆ ಕಟ್ಟಲು, ಮಠಗಳನ್ನು ಕಟ್ಟಲು ದಾನ ನೀಡಿದ್ದಾರೆ. ಈಗ ನಮ್ಮ ಸಮಾಜದಲ್ಲಿಯೂ ಬಹಳಷ್ಟು ಜನ ಆರ್ಥಿಕವಾಗಿ ಬಡವರಿದ್ದಾರೆ. ಹೀಗಾಗಿ ಪಂಚಮಸಾಲಿ ಸಮಾಜದ್ದೇ ರಾಜ್ಯಾದ್ಯಂತ ವಸತಿ ನಿಲಯ, ದಾಸೋಹ ನಿಲಯ ಮತ್ತ ಶಾಖಾಮಠ ತೆರೆದು ಸಮಾಜದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸಮಾಜ ಬಾಂಧವರು ಮುಂದಾಗಬೇಕು ಎಂದು ಕರೆ ನೀಡಿದರು.

ಇಂಡಿ ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟುವುದಾದರೆ ಒಂದು ಎಕರೆ ಜಮೀನು ದಾನ ನೀಡುವುದಾಗಿ ಸಾತಲಗಾಂವ ಗ್ರಾಮದ ರಮೇಶ ಬಿರಾದಾರ ಘೋಷಿಸಿದರು. ಅವರನ್ನು ಶ್ರೀಗಳು ಸತ್ಕರಿಸಿ ಗೌರವಿಸಿದರು.ಇಂಡಿ ನಗರದಲ್ಲಿಯೂ ಸಹ ಶಾಖಾ ಮಠ, ವಸತಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಭಕ್ತರು ಭೂದಾನ ಮಾಡಿದರೆ ಭವನಕ್ಕೆ ಅವರದ್ದೇ ಹೆಸರು ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಂಡಿ ನಗರದಲ್ಲಿ ದಾನಿಗಳಿಂದ ಅಥವಾ ನಗರಸಭೆಯಿಂದ ಜಮೀನು ಪಡೆಯಲು 6 ಜನರನ್ನು ಪಂಚಮಸಾಲಿ ಸಮಾಜ ವಸತಿ ನಿಲಯ, ಸಮುದಾಯ ಭವನ ಸ್ಥಳ ಪರೀಶೀಲನಾ ಸಮೀತಿ ರಚಿಸಿ ಸದಸ್ಯರನ್ನಾಗಿ ಭೀಮಾಶಂಕರ ಮುರಗುಂಡಿ, ಶಾಂತುಗೌಡ ಬಿರಾದಾರ, ಸೋಮಶೇಖರ ದೇವರ, ಮಂಜುನಾಥ ಕಾಮಗೊಂಡ, ನಾಗೇಶ ಹೆಗಡ್ಯಾಳ, ರವಿಗೌಡ ಪಾಟೀಲ ಅವರನ್ನು ನೇಮಕ ಮಾಡಲಾಯಿತು.ಶಿವಾನಂದ ಕಾಮಗೊಂಡ ಅವರನ್ನು ಯುವಘಟಕದ ಅಧ್ಯಕ್ಷರನ್ನಾಗಿ ನೇಮಿಸಿ, ಕಾರ್ಯಾಧ್ಯಕ್ಷರನ್ನಾಗಿ 7 ಜನರನ್ನು ಮಾಡಲು ತೀರ್ಮಾನಿಸಲಾಯಿತು. 

ವೇದಿಕೆಯಲ್ಲಿ ಸಮಾಜದ ಅಧ್ಯಕ್ಷ ವಿ.ಹೆಚ್‌. ಬಿರಾದಾರ, ಜಿಲ್ಲಾ ಯುವಘಟಕದ ಅಧ್ಯಕ್ಷ ಸೋಮು ದೇವರ, ಶಾಂತೇಶ್ವರ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಸಮಾಜದ ಪ್ರ. ಕಾರ್ಯದರ್ಶಿ ಶಿವಾನಂದ ಚಾಳೀಕಾರ ಇದ್ದರು.ಸಭೆಯಲ್ಲಿ ಶಂಕರಗೌಡ ಬಂಡಿ, ಶಿವು ದೇವರ, ದುಂಡು ಮುಜಗೊಂಡ, ಅಪ್ಪು ಹೊಸಮನಿ, ಗಿರಮಲ್ಲಗೌಡ ಬಿರಾದಾರ, ಗೀರೀಶಗೌಡ ಪಾಟೀಲ, ಪ್ರಭು ಹೊಸಮನಿ, ಶ್ರೀಶೈಲಗೌಡ ಪಾಟೀಲ, ಬಾಳು ಮುಳಜಿ, ಉಮೇಶ ಬಳಬಟ್ಟಿ, ಭೀಮಾಶಂಕರ ಆಳೂರ, ಅಣ್ಣಾರಾಯ ಬೊಮ್ಮನಳ್ಳಿ, ಸುದೀರ ಕರಿಕಟ್ಟಿ, ಈರಣ್ಣ ಡಂಗಿ, ಜಗನ್ನಾಥ ಇಂಡಿ, ಡಾ. ದೇವೆಂದ್ರ ಬರಡೋಲ, ಈರನಗೌಡ ಪಾಟೀಲ, ವೀರೇಂದ್ರ ಪಾಟೀಲ, ಅಣ್ಣಾರಾಯ ಆಳೂರ, ಅಶೋಕ ಕರೂರ ಸೇರಿದಂತೆ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಧನರಾಜ ಮುಜಗೊಂಡ ನಿರೂಪಿಸಿ ವಂದಿಸಿದರು.