ಭೀಕರ ಕಾರು ಅಪಘಾತ: ತುಂಡಾದ ಎಡಗೈದೊಂದಿಗೆ ಆಸ್ಪತ್ರೆಗೆ ದಾಖಲಾದ ಯುವಕ

ಭೀಕರ ಕಾರು ಅಪಘಾತ: ತುಂಡಾದ ಎಡಗೈದೊಂದಿಗೆ ಆಸ್ಪತ್ರೆಗೆ ದಾಖಲಾದ ಯುವಕ Horrific car accident: Young man admitted to hospital with severed left arm

 ಲೋಕದರ್ಶನ ವರದಿ, 

ಜಮಖಂಡಿ 19: ಜಮಖಂಡಿ ಕಡೆಯಿಂದ ಸಾವಳಗಿ ಕಡೆಗೆ ತೆರಳುತ್ತಿದ್ದ ಕಾರು ರಸ್ತೆಯ ಬದಿಯ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಓರ್ವ ಯುವಕನ ಎಡಗೈ ತುಂಡಾಗಿರುವ ಘಟನೆ ಸಂಭವಿಸಿದೆ. ಕಾರಿನಲ್ಲಿ ಮೂವರು ಸ್ನೇಹಿತರು ತೆರಳುತ್ತಿದರು. ಇವರು ರಬಕವಿ ಮೂಲದವರಾಗಿದ್ದು. ಮೂವರು ಸ್ನೇಹಿತರ ಪೈಕಿ ರೋಹನ್ ವಾಘ್ಮೋಡೆ (16) ಯುವಕನ ಎಡಗೈ ತುಂಡಾಗಿದ್ದು. ಆತನ ಸ್ನೇಹಿತರಾದ ಸಂತೋಷ ಫಕೀರ​‍್ುರ್ (16) ಮತ್ತು ಪ್ರಜ್ವಲ್ ತಲ್ವಾರ (18) ಗಾಯಗೊಂಡ ಯುವಕರು ಎಂದು ಮಾಹಿತಿ ತಿಳಿದು ಬಂದಿದೆ. 

ರೋಹನ ವಾಘ್ಮೋಡೆ ತುಂಡಾಗಿರುವ ಎಡಗೈಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಜಮಖಂಡಿ ಸರಕಾರಿ ಉಪವಿಭಾಗ ಆಸ್ಪತ್ರೆಗೆ ತಂದಿದ್ದು. ಯುವಕ ರೋಹನಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆಗೆ ರವಾನಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಕುರಿತು ಸಾವಳಗಿ ಪೋಲಿಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ನಡೆಸಿದ್ದಾರೆ. ಇನ್ನೂ ಭೀಕರ ಅಪಘಾತ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ.