ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
Honoring the awardees: Kalaburagi
ಕಲಬುರಗಿ 27 : ದಿನಾಂಕ 27.09.2025 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಸಿಂದಗಿಯ ನೆಲೆ ಪ್ರಕಾಶನ ಕೊಡಮಾಡುವ “ದೇಶೀ ಸಮ್ಮಾನ” ಪ್ರಶಸ್ತಿಗೆ ಭಾಜನರಾದ ಪ್ರೊ. ಎಚ್.ಟಿ. ಪೋತೆಯವರಿಗೆ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ “ತ್ರಿವೇಣಿ” ಪ್ರಶಸ್ತಿಗೆ ಭಾಜನರಾದ ಡಾ. ಸುಜಾತಾ ಚಲವಾದಿ ಅವರನ್ನು ಕನ್ನಡ ಅಧ್ಯಾಪಕರ ಸಂಘ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ವಿಕ್ರಮ ವಿಸಾಜಿ ಅವರು ಮಾತನಾಡುತ್ತ ಈ ಅಧ್ಯಯನ ಸಂಸ್ಥೆ ಅನ್ನ, ಅರಿವು ಮತ್ತು ಆಶ್ರಯ ಕೊಟ್ಟಿದೆ. ಇದರ ಋಣವನ್ನು ತೀರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಸಾಧಕರಿಗೆ ಸನ್ಮಾಸಿ ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ನುಡಿದರು. ಪ್ರೊ. ಎಚ್.ಟಿ. ಪೋತೆಯವರು ಆರಂಭದಲ್ಲಿ ಜಾನಪದದಲ್ಲಿ ಕೃಷಿಗೈದು ಮುಂದೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ಮಾಡುತ್ತಿದ್ದಾರೆ. ಡಾ. ಅಂಬೇಡ್ಕರ್‌ರನ್ನು ಕುರಿತು ಮಹಾಯಾನ ಕಾದಂಬರಿಯನ್ನು ಮೊದಲು ಬರೆದವರು ಎಂದು ಅಭಿಪ್ರಾಯ ವ್ಯಕಪಡಿಸಿದರು.
ಡಾ. ಸುಜಾತಾ ಚಲವಾದಿ ಅವರು ಕಥೆ, ಕಾವ್ಯ, ವೈಚಾರಿಕ ಲೇಖನ ಬರೆಯುತ್ತ ಇತ್ತೀಚಿಗೆ ಕರ್ನಾಟಕದಾದ್ಯಂತ ಚಿರುಪರಿಚಿತರಾಗಿದ್ದಾರೆ ಎಂದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುಜಾತಾ ಚಲವಾದಿ ಅವರು ಈ ಸನ್ಮಾನ ನನಗೆ ಇನ್ನೊಂದಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ತಮ್ಮ ಕಥೆಗಳಿಗೆ ತಮ್ಮ ಸುತ್ತಮುತ್ತಲಿನ ಘಟನೆಗಳೇ ಪ್ರೇರಣೆ ಎಂದರು.
ಅಧ್ಯಕ್ಷತೆ ವಹಿಸಿದ, ಸನ್ಮಾನ ಸ್ವೀಕರಿಸಿದ ಪ್ರೊ. ಎಚ್.ಟಿ. ಪೋತೆಯವರು ಮಾತನಾಡುತ್ತ ಪರಸ್ಪರ ಗೌರವಿಸುವುದು ಸಂಸ್ಥೆಯ ಹೆಮ್ಮೆಯನ್ನು ಹೆಚ್ಚಿಸುತ್ತದೆ. ಡಾ. ಸುಜಾತಾ ಚಲವಾದಿಯವರು ತುಂಬ ಬದ್ಧತೆಯನ್ನಿಟ್ಟುಕೊಂಡು ಬರಹದಲ್ಲಿ ತೊಡಗಿಸಿಕೊಂಡವರು ಎಂದು ಅಭಿಪ್ರಾಯ ವ್ಯಕ್ತಿಪಡಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಲೇಖಕರು ಹಾಗೂ ಸ್ನಾತಕ ಅಧ್ಯಯನ ಸದಸ್ಯರಾದ ಡಾ. ಶ್ರೀಶೈಲ ನಾಗರಾಳ, ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಅಮೃತಾ ಕಟಕೆ, ಡಾ. ಶರಣಪ್ಪ ಮಾಳಗಿ, ಡ. ದಸ್ತಗಿರಿಸಾಬ್ ದಿನ್ನಿ, ಇನ್ನಿತರರು ಉಪಸ್ತಿತರಿದ್ದರು.
ಅಧ್ಯಾಪಕರ ಸಂಘದ ಉಪಾಧ್ಯಕ್ಷರಾದ ಡಾ. ಪಂಡಿತ ಬಿ.ಕೆ. ಸ್ವಾಗತಿಸಿ ನಿರೂಪಿಸಿದರು, ಡಾ. ಶಿವಶರಣಪ್ಪ ಮೋತಕಪಳ್ಳಿ ವಂದಿಸಿದರು.
ಡಾ. ಸೂರ್ಯಕಾಂತ ಆತನೂರ, ಜಗಪ್ಪ ತಳವಾರ, ಮಲ್ಲಪ್ಪ ಮಾನೇಗಾರ, ಭೀಮಣ್ಣ ರಾಸಣಗಿ, ವಿಠ್ಠಲ ಮುಕರಂಬಾ, ಮರೆಪ್ಪ ಮೇತ್ರೆ, ಡಾ. ಸುವರ್ಣ ವಚ್ಚೆ, ಡಾ. ರುಕ್ಮಿಣಿ, ಡಾ. ವೀಣಾ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 