ಶಿಕ್ಷಕರನ್ನು ಸನ್ಮಾನಿಸುವುದು ರಾಷ್ಟ್ರಕ್ಕೆ ಕೊಡುಗೆ ಕೊಟ್ಟಂತೆ: ಪ್ರತಿಭಾ ಮೇಲಗಿರಿ
Honoring teachers is like contributing to the nation: Pratibha Melagiri
ಶಿಕ್ಷಕರನ್ನು ಸನ್ಮಾನಿಸುವುದು ರಾಷ್ಟ್ರಕ್ಕೆ ಕೊಡುಗೆ ಕೊಟ್ಟಂತೆ: ಪ್ರತಿಭಾ ಮೇಲಗಿರಿ
ಬ್ಯಾಡಗಿ 16 : ಶಿಕ್ಷಕರು ತಮ್ಮ ವಿದ್ಯೆಯನ್ನು ಮಕ್ಕಳಿಗೆ ಧಾರೆ ಎರೆದು ಅವರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಅಂತಹ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು, ರಾಷ್ಟ್ರಕ್ಕೆ ಕೊಡುಗೆ ನೀಡಿದಂತೆ ಎಂದು ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷ ಪ್ರತಿಭಾ ಮೇಲಗಿರಿ ಅಭಿಪ್ರಾಯಪಟ್ಟರು.
ಪಟ್ಟಣದ ನೆಹರು ನಗರದ ನವ ಚೈತನ್ಯ ಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಾ ಬಂದಿರುವ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಮ್ಮ ತಾಲೂಕಿನ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಇಂಡಿಯಾ ಇನ್ನರ್ ವ್ಹೀಲ್ ಅಸೋಸಿಯೇಷನರವರ ಟೀಚರ್ಸ್ ಅಪ್ರೀಸಿಯೇಶನ್ ಪ್ರಮಾಣ ಪತ್ರ ನೀಡಿ ಮಾತನಾಡಿದರು.ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ್ ಮಾತನಾಡಿ ಜೀವನ ಜೀವನದಲ್ಲಿ ಶಿಕ್ಷಣವು ಎಷ್ಟು ಮುಖ್ಯವೋ ಅದನ್ನು ಕಲಿಸುವ ಶಿಕ್ಷಕರು ಸಹ ಅಷ್ಟೇ ಮಹತ್ವ ಪಡೆದಿದ್ದಾರೆ ಅವರನ್ನು ತಂದೆ-ತಾಯಿಯಂತೆ ಪಾಠ ಕಲಿಸಿದ ಗುರುಗಳನ್ನು ಸಹ ಗೌರವ ಮತ್ತು ಪೂಜ್ಯ ಭಾವನೆಯಿಂದ ನಾವು ಕಾಣಬೇಕು ಎಂದು ಹೇಳಿದರು.
ತಾಲೂಕಿನ ಶಿಕ್ಷಕರಾದ ಚಿನ್ನಿಕಟ್ಟೆ ಶಾಲೆಯ ಶ್ರೀದೇವಿ ಮಾಳಪ್ಪನವರ್. ಮೋಟೆಬೆನ್ನೂರಿನ ಬಸವರಾಜ ಗೋಣಿಕೆರೆ. ಬಿಸಲಳ್ಳಿಯ ಶಂಕರ್ ಲಮಾಣಿ. ಕದರಮಂಡಲಗಿಯ ಬಸಮ್ಮ ಎಂ ಬಿ. ಹಳೆ ಶಿಡೆನೂರಿನ ಫರಿದಾಬಾನು. ಬಡಮಲ್ಲಿಯ ಎಚ್ ಟಿ ಭಜಂತ್ರಿ. ಬ್ಯಾಡಗಿಯ ಮೊಮ್ಮದ್ ರಫಿಕ್ ಮಲ್ಲೂರ್. ಸಿದ್ದಾಪುರ ಶಾಲೆಯ ಬಿಎಮ್ ಪಾಟೀಲ ಇವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ಬಿನ ಅಧ್ಯಕ್ಷ ಪ್ರತಿಭಾ ಮೇಲಗಿರಿ, ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ, ಸಂಧ್ಯಾರಾಣಿ ದೇಶಪಾಂಡೆ, ವಿಜಯಾ ಪಾಟೀಲ, ಸುಶೀಲ ದೊಡ್ಡಮನಿ, ಹೇಮಲತಾ ಕಬ್ಬೂರ, ಪಾರ್ವತಿ ಲೋಕೇಶ, ಸುಧಾ ಮಾಳೆನಹಳ್ಳಿ, ಛಾಯಾ ತಂಬಾಕದ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 