ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ

ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ   Honoring award-winning and retired teachers

  

         ಕಂಪ್ಲಿ 18:  ಕಂಪ್ಲಿಯಲ್ಲಿ ಬಿಇಒ ಕಛೇರಿಯ ಅವಶ್ಯಕತೆ ಇರುವುದರಿಂದ ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರೊಂದಿಗೆ ಕೂಲಂಕುಶವಾಗಿ ಚರ್ಚಿಸಿದ್ದು, ಸುಕ್ತಕ್ರಮದೊಂದಿಗೆ ಕಛೇರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು.ಪಟ್ಟಣದ ವೀರಶೈವ ಭವಮದಲ್ಲಿ ಶಿಕ್ಷಣ ಇಲಾಖೆ, ಬಳ್ಳಾರಿ ಪಶ್ಚಿಮ ವಲಯ ಕುರುಗೋಡು ಬಿಇಒ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕ.ರಾ.ಪ್ರಾ.ಪ್ರೌ, ಪದವೀಧರ ಶಾಲಾ ಶಿಕ್ಷಕರ ಸಂಘ, ತಾಲೂಕು ಘಟಕದಿಂದ ಹಾಗೂ ಶಾಸಕ ಗಣೇಶ ಅವರ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಅಕ್ಷರದವ್ವ ಸಾವಿತ್ರಿಬಾಯಿ ಪಲೆ ಅವರ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೊದಲಿಗೆ ಕ್ಷೇತ್ರದ ಶಾಸಕರಾದಾಗ ಅನೇಕ ಶಿಕ್ಷಣದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಂತರ ಸಾಕಷ್ಟು ಅನುದಾನಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಜೊತೆಗೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಶಿಕ್ಷಕರ ಹಾಗೂ ನೌಕರರ ಭವನದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು. ಅಧಿಕಾರ ಶಾಶ್ವತವಲ್ಲ. ಜನರ ಪ್ರೀತಿ, ವಿಶ್ವಾಸವೇ ಕೊನೆತನಕ ಉಳಿಯುತ್ತದೆ ಎಂದರು. 

         ನಂತರ ನಿವೃತ್ತ ಶಿಕ್ಷಕರಾದ ವಿರೇಶ, ಎಲೆಗಾರ ಪಾರ್ವತಿ, ಶೀಲಾವತಿ, ಸರ್ವಮಂಗಳ, ರಾಘವೇಂದ್ರ, ಹುಲಿಕುಂಟಾಚಾರ್ ಹಾಗುಇ ಶಾಂತ ಘಡ್ಡಾದ್, ನಾಗವೇಣಿ, ಎನ್‌.ಲೋಕೇಶ, ಮರಿಸ್ವಾಮಿ, ಮುದುಕಪ್ಪ, ಬಸವನಗೌಡ, ವೆಂಕಟರಮಣ, ಗಾದಿಲಿಂಗಪ್ಪ, ಹೊಸಗೇರ​‍್ಪ,  ಸಂಗನಗೌಡ, ವಿರೇಶ, ಈರಮ್ಮ, ನರಸಿಂಹಲು, ಎಸ್‌.ಚಂದ್ರ​‍್ಪ, ರೇಣುಕಾ, ಶೃತಿಕುಮಾರಿ, ರಂಗಪ್ಪ, ಮಡಿವಾಳಪ್ಪ, ಶಿವಕುಮಾರ, ಮೌನೇಶ, ಭವ್ಯಶ್ರೀ, ವಿವಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿಕಾಂತ ಬಣಕಾರ, ಅನ್ನದಾನೇಶ್ವರ, ಮೇನರೆಡ್ಡಿ, ಜಮೀನಾ, ಜಯಮ್ಮ, ಲಕ್ಕಪ್ಪ, ಶಾಬನ, ಪರಶುರಾಮ, ಸಾವಿತ್ರಿ, ರಾಜಾಭಕ್ಷಿ, ವಿರುಪಾಕ್ಷಪ್ಪ, ವಿಜಯ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಇಒ ಸಿದ್ದಲಿಂಗಮೂರ್ತಿ, ಇಒ ಆರ್‌.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ ಕೆ.ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್‌.ದೊಡ್ಡಬಸಪ್ಪ, ಮುಖಂಡರಾದ ಪಿ.ನಾಗೇಶ್ವರರಾವ್, ಲಿಂಗಪ್ಪ, ಟಿ.ಎಂ.ಬಸವರಾಜ, ರೇವಣ್ಣ, ಮಂಜುನಾಥ, ಅಂಬಿಗರ ಮಂಜುನಾಥ ಯುಗಾದಿ ಶಿವರಾಜ, ಗಾದಿಲಿಂಗಪ್ಪ, ಜಡೆಪ್ಪ, ಸುಗ್ಗೇನಹಳ್ಳಿ ರಮೇಶ, ಬಸವರಾಜ ಪಾಟೀಲ್, ಸುಜಾತ ಸೇರಿದಂತೆ ಸಿಆರ​‍್ಿಗಳು, ಶಿಕ್ಷಕರು ಉಪಸ್ಥಿತರಿದ್ದರು.