ಗುರುರಾಜ ಹೂಗಾರ್ ಜನ್ಮದಿನ ಅಂಗವಾಗಿ ಸನ್ಮಾನ ಕಾರ್ಯಕ್ರಮ

ಗುರುರಾಜ ಹೂಗಾರ್ ಜನ್ಮದಿನ ಅಂಗವಾಗಿ ಸನ್ಮಾನ ಕಾರ್ಯಕ್ರಮ Honorary program on the occasion of Gururaja Hoogar's birthday

ಲೋಕದರ್ಶನ ವರದಿ 

ಹುಬ್ಬಳ್ಳಿ 18 :  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ  ಹೋಟೆಲ್ ಲೀಲಾವತಿ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕ್ರೀಯಾಶೀಲ ಪತ್ರಕರ್ತರು,  ಸಂಜೆ ಮಾಧ್ಯಮ ಹಾಗೂ ಇಂದು ಮುಂಜಾನೆ ಎಂಬ ಸಂಜೆ ಹಾಗೂ ಮುಂಜಾನೆ ದಿನಪತ್ರಿಕೆಯ  ಸಂಪಾದಕರಾದ, ಹಿತೈಷಿಗಳು, ಆತ್ಮೀಯರಾದ ಗುರುರಾಜ ಹೂಗಾರ ಅವರ  ಹುಟ್ಟು ಹಬ್ಬದ ನಿಮಿತ್ತ    ಗುರುರಾಜ ಹೂಗಾರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ ಸಂತಸ ವ್ಯಕ್ತಪಡಿಸಿ,  ಹುಟ್ಟು ಹಬ್ಬದ  ಹಾರ್ದಿಕ ಶುಭಾಷಯ ಕೋರಿದರು. ಅಭಿನಂದನೆಗಳನ್ನು ತಿಳಿಸಿದ್ದಾರೆ.     

 ಖ್ಯಾತ ಹೋಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಅವರು ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕನ್ನಡ ರಾಜ್ಯೋತ್ಸವ  ಶುಭ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಧೀಮಂತ ಪ್ರಶಸ್ತಿ ಪುರಸ್ಕೃತರು,  ಪಂಜುರ್ಲಿ ಗ್ರುಪ್ ಆಫ್ ಹೋಟೆಲ್ ಇಂಡಸ್ಟ್ರೀಸ್ನ ಸಂಸ್ಥಾಪಕರು, ಪುಣೆ, ಹುಬ್ಬಳ್ಳಿ ಧಾರವಾಡ, ದಾವಣಗೆರೆ, ಬೆಳಗಾವಿ ನಗರಗಳಲ್ಲಿ ಹತ್ತಾರು ಹೋಟೆಲ್ ಗಳನ್ನು ಪ್ರಾರಂಭ ಮಾಡಿ ಸಾವಿರಾರು ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸಿರುವ ಹೋಟೆಲ್ ಕಾಮಿಕರ ಒಡೆಯನಾಗಿರುವ, ಆತ್ಮೀಯರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿಶಿಷ್ಟ ಶುಚಿ, ರುಚಿಯಾದ  ಆಹಾರ ತಿನಿಸುಗಳನ್ನು ತಯಾರಿಸಿ ಊಣ ಬಡಿಸಲು ಪಣ ತೊಟ್ಟಿರುವ ರಾಜೇಂದ್ರ ಶೆಟ್ಟಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ  ಶಾಲು,  ಮಾಲಾರೆ​‍್ಣ ಮಾಡಿ  ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಹುತ್ಪೂರ್ವಕವಾಗಿ ಶುಭಾಶಯ ಕೋರಿದರು.  

  ಸೋಹನ್ ಸುರೇಶ ಹೊರಕೇರಿ,  ಹಿರಿಯ ಪ್ರಾಧ್ಯಾಪಕರಾದ ಪ್ರೊ ಎಂ ಆರ್ ಪಾಟೀಲ, ಪತ್ರಕರ್ತರು, ಆತ್ಮೀಯರಾದ ಪ್ರಕಾಶ ಶೇಟ್, ಪ್ರಾದ್ಯಾಪಕ  ಪ್ರೊ ವಿ. ಎನ್ ಸನಗೌಡರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಕೇಶ್, ಪವಿತ್ರಾ, ಮಂಗಳಾ, ಹೋಟೆಲ್ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.