ನೂತನ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಗೌರವ ಸನ್ಮಾನ
Honorary honors to new Minister Satish Jarkiholi
ಪಾಲಬಾವಿ 08 : ನೂತನ ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕರದಂಟು ನಾಡಿನ ಕರುಣಾಮಯಿ, ಸಾಹುಕಾರ್ ಸತೀಶ್ ಜಾರಕಿಹೊಳಿಯವರು ಲೋಕೋಪಯೋಗಿ ಇಲಾಖೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಜೂನ್. 07ರಂದು ರವಿವಾರ ಸಂಜೆ 5ಗಂಟೆಗೆ ಗೋಕಾಕದ ಹಿಲ್ ಗಾರ್ಡನ್ ನಿವಾಸದಲ್ಲಿ ಪಾಲಬಾವಿ ಗ್ರಾಮಸ್ಥರು ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾದ ಗಿರೆಪ್ಪ ಬಳಗಾರ, ಕುಮಾರ ಬಾಬಣ್ಣವರ, ಸಾಗರ ಕುರಬೆಟ್ಟಿ ನೇತ್ರತ್ವದಲ್ಲಿ ಕಾರ್ಯಕರ್ತರು ಸೇರಿಕೊಂಡು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಲು ಹೊದಿಸಿ ಫಲಪುಷ್ಪ, ಹಾಕಿ ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಿರೆಪ್ಪ ಬಳಗಾರ, ಕುಮಾರ ಬಾಬಣ್ಣವರ, ಸಾಗರ ಕುರಬೆಟ್ಟಿ, ಹೈದರ್ ಮುಜಾವರ, ಮಹಾಲಿಂಗ ಮೂಡಲಗಿ, ಸಚಿವರ ಆಪ್ತ ಸಹಾಯಕ ಬಸವರಾಜ ಸಾಯನ್ನವರ, ರಾಮಪ್ಪ ತೇಗೂರ, ಮಹಾಲಿಂಗ ಜನವಾಡ, ಬರಮಪ್ಪ ಬಡಚಿ, ಸಂದೇಶ ಹಿರೇಮಠ, ಅಲ್ಲಪ್ಪ ಕಾಡಶೆಟ್ಟಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 