ಹೊನ್ನುರ​‍್ಪ.ಎಸ್ ಗೆ ಪಿಎಚ್‌ಡಿ ಪದವಿ

ಹೊನ್ನುರ​‍್ಪ.ಎಸ್ ಗೆ ಪಿಎಚ್‌ಡಿ ಪದವಿ Honnur P.S. receives PhD degree

ಲೋಕದರ್ಶನ ವರದಿ

ಬಳ್ಳಾರಿ 11:  ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಹೊನ್ನುರ​‍್ಪ.ಎಸ್ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ. ವಿವಿಯ  ಸಮಾಜವಿಜ್ಞಾನ ನಿಕಾಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಗೌರಿ ಮಾಣಿಕ ಮಾನಸ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆನ್ ನ್ಯೂಟ್ರೀಷಿಯನ್ ಸ್ಟೇಟಸ್ ಆಫ್ ಪ್ರೀ-ಸ್ಕೂಲ್ ಚೀಲ್ಡರ್ನ್‌ ಇನ್ ಆರ್ಬನ್ ಸ್ಮಮ್ಸ್‌ : ವಿತ್ ಸ್ಪೇಷನ್ ರೇಫೆರೇನ್ಸ್‌ ಟು ಬಳ್ಳಾರಿ ಡಿಸ್ಟೀಕ್‌” ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿಎಚ್‌ಡಿ ಪದವಿ ನೀಡಲಾಗಿದೆ ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.