ಗಂಗಾಧರ ಮುತ್ತಗಿ ವೆಟರ್‌ನರಿ ಸೈನ್ಸ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರಾ​‍್ಯಂಕ್

ಗಂಗಾಧರ ಮುತ್ತಗಿ ವೆಟರ್‌ನರಿ ಸೈನ್ಸ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರಾ​‍್ಯಂಕ್ Gangadhar Muthagi ranks first for the state in the Veterinary Science category

ಲೋಕದರ್ಶನ ವರದಿ 

ವಿಜಯಪುರ 11 : ಪ್ರತಿ ವರ್ಷವೂ ಒಂದಲ್ಲ ಒಂದು ರಾ​‍್ಯಂಕ್ ಮೂಲಕ ಗುರುತಿಸಿಕೊಂಡಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಈ ಬಾರಿ ವೆಟರ್‌ನರಿ ಸೈನ್ಸ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರಾ​‍್ಯಂಕ್ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಗೆ ಮತ್ತೊಂದು ಗರಿ ಮೂಡುವಂತೆ ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2025-26 ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಗಂಗಾಧರ ಮುತ್ತಗಿ ವೆಟರ್‌ನರಿ ಸೈನ್ಸನಲ್ಲಿ(ಪ್ರಾ) 0.5 ರಾ​‍್ಯಂಕ್ ಹಾಗೂ ಬಿಎಸ್‌ಸಿ ಅಗ್ರಿಯಲ್ಲಿ 3.5 ರಾ​‍್ಯಂಕ್ ಪಡೆದುಕೊಂಡಿರುವುದು ಶ್ಲಾಘನೀಯವಾಗಿದೆ. 

ಇತ್ತೀಚೆಗೆ ಪ್ರಕಟಗೊಂಡ 2025-26 ನೇ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷಗಳಿಂದಾಗಿ ಕೆಲವು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗದೇ ಉಳಿದಿದ್ದವು. ಅಂಥಹ ಸಂದರ್ಭದಲ್ಲಿ ಸ್ಪಾಟ್ ರಾ​‍್ಯಂಕಿಂಗ್‌ನ್ನು ನೀಡುವ ಪ್ರತೀತಿ ಕೆಇಎ ಅಳವಡಿಸಿಕೊಂಡಿದ್ದು ಅದರ ಆಧಾರದ ಮೇಲೆ ರಾ​‍್ಯಂಕ್ ನೀಡಲಾಗಿದ್ದು ಗಂಗಾಧರ ಮುತ್ತಗಿ 0.5 ರಾ​‍್ಯಂಕ್ ಪಡೆಯುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲನೇ ರಾ​‍್ಯಂಕ್‌ಗಿಂತಲೂ ಹೆಚ್ಚಿನ ರಾ​‍್ಯಂಕ್‌ನ್ನು ಪಡೆದುಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ.  

ಇದರಕುರಿತು ಸಂತೋಷವನ್ನು ಹಂಚಿಕೊಂಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ್ ಕೌಲಗಿ; ಕಳೆದ ಬಾರಿಯೂ ಸಹ ಅತ್ಯುತ್ತಮ ಫಲಿತಾಂಶವನ್ನು ನೀಡಿಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವಕಾಲೇಜು ಇಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದು ಸಂತಸತಂದಿದೆ. ಕಾಲೇಜು ಪ್ರಾರಂಭಗೊಂಡ ಮರು ವರ್ಷದಲ್ಲಿಯೇರಾಜ್ಯಕ್ಕೆ ​‍್ರಥಮರಾ್್ಯಂಕ್ ನೀಡಿದ್ದ ನಮ್ಮ ಸಂಸ್ಥೆ ಈ ಬಾರಿಯೂ ಸಹ ಅಂತಹದೇ ಸಾಧನೆಗೆ ಸಾಕ್ಷಿಯಾಗಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಸ​‍್ಾಟ್‌ರಾ್್ಯಂಕಿಂಗ್ ಮೂಲಕ 0.5 ರಾ​‍್ಯಂಕ್ ಪಡೆದ ಈ ವಿದ್ಯಾರ್ಥಿಯು ವೆಟರ್‌ನರಿಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ 3.5ರಾ​‍್ಯಂಕ್ ಮೂಲಕ ಬಿಎಸ್‌ಸಿ ಅಗ್ರಿಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ ಕೆಸರಿನಲ್ಲಿ ಕಮಲ ಅರಳುತ್ತದೆ.

ಬಡತನದಲ್ಲಿ ಪ್ರತಿಭೆ ಅರಳುತ್ತದೆ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾನೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಹಿನ್ನೆಲೆಯಿಂದ ಬಂದ ಗಂಗಾಧರನಲ್ಲಿ ಉತ್ತಮಜ್ಞಾನವಿದೆ. ಅದರ ಪರಿಣಾಮವೇ ಈ ರಾ​‍್ಯಂಕ್‌ಗಳು. ಮುಂದಿನ ದಿನಗಳಲ್ಲಿ ಈತ ಹೆಚ್ಚಿನ ಸಾಧನೆ ಮಾಡುವ ಮೂಲಕ ಕಲಿತಕಾಲೇಜಿಗೆ, ಹುಟ್ಟಿದ್ದ ಊರಿಗೆ ಕೀರ್ತಿತರುತ್ತಾನೆ ಎನ್ನುವ ವಿಶ್ವಾಸವಿದೆ. ಇನ್ನೂ ಹೆಚ್ಚಿನ ಸಾಧನೆಇವನಿಂದ ಬರಲಿ ಎಂದು ಹೇಳಿದರು. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರ ಮಟ್ಟಿ ಸೇರಿದಂತೆಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.