ಹೊನ್ನಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

ಹೊನ್ನಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ Honnavar Taluk Guarantee Scheme Implementation Committee Meeting

ಹೊನ್ನಾವರ 22 : ತಾಲೂಕು ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು,  ಹೊನ್ನಾವರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆಯಿತು. ಸಭೆಯಲ್ಲಿ  ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಣ್ಣಪ್ಪ ಎಮ್ ನಾಯ್ಕ ಮಾತನಾಡಿ  ಮಳೆಗಾಲದಲ್ಲಿ ಸಮರ​‍್ಕ ವಿದ್ಯುತ್ ಪೂರೈಕೆ ಹಾಗೂ ಅಪಘಾತಗಳು ಸಂಭವಿಸದ ರೀತಿ ಕೆಲಸ ನಿರ್ವಹಿಸಲು ವಿದ್ಯುತ್ ಅಧಿಕಾರಿಗಳಿಗೆ ಸೂಚಿಸಿದರು.   

 ಬಾಕಿ ಇರುವ ಪಲಾನುಭವಿಗಳ  ಕೆವೈಸಿ, ಏನ್ ಪಿಸಿಐ ಪೂರ್ಣ ಗೊಳಿಸಲು ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಆಹಾರ ದಾಸ್ತಾನು ಕೊಠಡಿ, ರೇಷನ್, ಸೀಮೆಎಣ್ಣೆ ವಿತರಣೆ ಕುರಿತು ಮಾಹಿತಿ ಪಡೆದು ಸಮರ​‍್ಕ ವಿತರಣೆಗೆ ಸೂಚಿಸಿದರು. ಸರಕಾರದ ಗ್ಯಾರಂಟಿ ಯೋಜನೆಗಳು ಬಡ ಜನರ ಉತ್ಸಾಹ ಹೆಚ್ಚಿಸಿದೆ ಎಂದರು. ಆಹಾರ, ಸಾರಿಗೆ, ವಿದ್ಯುತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಉಪಸ್ಥಿರಿದ್ದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಕಾರ್ಯಕ್ರಮಗಳ ಪ್ರಗತಿ ವರದಿ ನೀಡಿದರು.  

ಸಭೆಯಲ್ಲಿ ಗ್ಯಾರಂಟಿ ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪುಟ್ಟೇ ಗೌಡ, ಸಮಿತಿ ಸದಸ್ಯರುಗಳಾದ ಗಣಪತಿ ಹಳ್ಳೆರ್, ಕೃಷ್ಣ ಮಾರಿಮನೆ, ಮಾರುತಿ ಮೊಗೇರ್, ಜೈನಾಭಿ ಸಾಬ್, ಗಣಪತಿ ಗೌಡ, ಆದರ್ಶ್‌ ನಾಯ್ಕ, ನಾರಾಯಣ ಭಟ್, ಮಂಜು ನಾಯ್ಕ, ವಿಭಾ ಗಾವಂಕರ, ಮಾದೇವ ಗೌಡ, ಜಗದೀಶ್ ನಾಯ್ಕ, ಅಭಿಷೇಕ್ ತಾಂಡೇಲ್, ಗುರುರಾಜ್ ನಾಯ್ಕ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ವ್ಯವಸಸ್ಥಾಪಕ ರಾಮ ಭಟ್ ಸ್ವಾಗತಿಸಿ ವಂದಿಸಿದರು..