ಸಹಕಾರಿ ಬೆಳೆವಣಿಗೆಗೆ ಪ್ರಾಮಾಣಿಕತೆ ಬಹು ಮುಖ್ಯ: ಕೆ ಶಿವಲಿಂಗಪ್ಪ
Honesty is very important for cooperative growth: K Shivalingappa
ಜಯಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ 10ನೇ ವಾರ್ಷಿಕೋತ್ಸವ
ರಾಣೇಬೆನ್ನೂರು 22: ಯಾವುದೇ ಸಹಕಾರಿ ಬೆಳವಣಿಗೆ ಆಗಬೇಕಾದರೆ ಅಲ್ಲಿರುವ ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನ ಮತ್ತು ಸಾಲ ಪಡೆದವರ, ಸಕಾಲಿಕ ಕಂತು ತುಂಬುವಿಕೆ ಇಂದ ಮಾತ್ರ ಪತ್ತಿನ ಬೆಳವಣಿಗೆ ಸಾಧ್ಯವಿದೆ ಎಂದು ಹಿರಿಯ ಸಹಕಾರಿ, ನ್ಯಾಯವಾದಿ ಕೆ. ಶಿವಲಿಂಗಪ್ಪ ಹೇಳಿದರು. ಅವರು ಸೋಮವಾರ ಇಲ್ಲಿನ ಪಂಪಾಪತಿ ಸಭಾಭವನದಲ್ಲಿ, ಸ್ಥಳೀಯ ಜಯಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ತತ್ವ ಅತ್ಯಂತ ಪರಿಣಾಮಕಾರಿಯಾಗಿ ಆರಂಭವಾಗಿರುವುದು ಉತ್ತರ ಕರ್ನಾಟಕದಿಂದಲೇ, ಅದು ಅತ್ಯಂತ ಸಮೃದ್ಧವಾಗಿ ಬೆಳೆಯುವುದು ಅವರ ಮೂಲಕ ರಾಜ್ಯದಲ್ಲಿರುವ ಎಲ್ಲ ಸಹಕಾರಿ ಮತ್ತು ಎಲ್ಲ ಸೌಹಾರ್ದ ಸಹಕಾರಿಗಳಿಗೆ ಮಾದರಿಯಾಗಿದೆ ಎಂದರು.
ಅತ್ಯಂತ ಸರಳ ಮತ್ತು ಸುಲಭವಾಗಿ ಜನಸಾಮಾನ್ಯರಿಗೆ ಬಡವರಿಗೆ ಮಧ್ಯಮ ವರ್ಗದವರಿಗೆ ತಮ್ಮ ವ್ಯಾಪಾರ ವಹಿವಾಟು ನಡೆಸಲು ಸುಲಭವಾಗಿ ಸಿಗುವುದೇ ಇಲ್ಲಿ. ವ್ಯವಹಾರಗಳು ಸಹಕಾರಿಗಳೊಂದಿಗೆ ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿರುವುದರಿಂದಲೆ ಸಹಕಾರ ಸಂಘಗಳು ಅಧಿಕ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗುತ್ತಲ್ಲಿದೆ ಎಂದರು. ಜಯಲಕ್ಷ್ಮಿ ಸಹಕಾರಿ ಸಂಘದ ಅಧ್ಯಕ್ಷ ಅರವಿಂದ ವೀ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಪ್ರಕಾಶ್ ಕೋಳಿವಾಡ ಅವರು, ಸಮಾಜದ ಮತ್ತು ಸಾರ್ವಜನಿಕ ಉದ್ಯಮದ ಬೆಳವಣಿಗೆಗೆ ಸಹಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಾಲ ಕೊಟ್ಟವರು, ಮತ್ತು ಸಾಲ ಪಡೆದವರು ಪ್ರಾಮಾಣಿಕತೆ ಮೆರೆದರೆ ಪರಿಪೂರ್ಣ ಬೆಳವಣಿಗೆ ಸಾಧ್ಯವಿದೆ ಎಂದರು. ಸಹಕಾರಿ ಸಂಘದ ಬೆಳವಣಿಗೆ ಕುರಿತು ಮಾತನಾಡಿದ ಉಪಾಧ್ಯಕ್ಷ ಮಹೇಶಪ್ಪ ಕುಸುಗೂರು ಅವರು, ತಮ್ಮ ಸಹಕಾರಿಯಲ್ಲಿ ವಿವಿಧ ಆಕರ್ಷಕ ಠೇವಣಿ ಯೋಜನೆಗಳು ಇದ್ದು, ಏಳು ವರ್ಷಕ್ಕೆ ಇಟ್ಟಿರುವ ಠೇವಣಿ ಮೊತ್ತವನ್ನು ದುಪ್ಪಟ್ಟು ಗೊಳಿಸಲಾಗುವುದು. ಅಲ್ಲದೆ ಪ್ರಸಕ್ತ 2025 ಸಾಲಿನಲ್ಲಿ ಶೇ. 7 ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ ಮತ್ತು ವಿವಿಧ ರೂಪದಲ್ಲಿ ಉಳಿತಾಯ ಯೋಜನೆ ರೂಪಿಸಲಾಗಿದೆ ಎಂದರು. ನಗರದ ವರ್ತಕ ವಾಸುದೇವ ಗುಪ್ತಾ ಅವರು, ಆರೋಗ್ಯ ರಕ್ಷಣೆಯಲ್ಲಿ ಅನುಸರಿಸಬೇಕಾದ ಕ್ರಮ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮಹೇಶಪ್ಪ ಕುಸಗೂರ, ನಿರ್ದೇಶಕರಾದ, ಚಿಕ್ಕನಗೌಡ ಪಾಟೀಲ್, ಶಂಕ್ರ್ಪ ಹೊನ್ನಾಳಿ, ಕರಬಸಪ್ಪ ಮಾಕನೂರ, ನಾಗಪ್ಪ ಸೋಮಕ್ಕಳ್ಳವರ, ನಿರ್ಮಲಾ ಹೊಸಮನಿ, ಅಕ್ಕಮಹಾದೇವಿ ಶಿಡೇನೂರ, ನಾಗರತ್ನಮ್ಮ ಪಾಟೀಲ, ಆಶಾ ಚನ್ನಗೌಡರ, ಗಿರಿಜಾ ನೇಸ್ವಿ, ಲಕ್ಷ್ಮೀಬಾಯಿ ಹಂಚಿನಮನಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಗೀತಾ ಚೈತ್ರಾ ರೂಪಾ ಸ. ಸಂಗಡಿಗರು ಪ್ರಾರ್ಥಿಸಿದರು. ಎಸ್. ಕೆ. ನೇಸ್ವಿ ಸ್ವಾಗತಿಸಿ, ರಾಮಪ್ಪ ಹಂಚಿನಮನಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ್ ಸೋಮಕ್ಕಳ್ಳವರ ನಿರೂಪಿಸಿ, ವ್ಯವಸ್ಥಾಪಕ ಉಮೇಶ್ ಪಟ್ಟಣಶೆಟ್ಟಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 