ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ: ಬಾಬು ಸಾಹುಕಾರ

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ: ಬಾಬು ಸಾಹುಕಾರ Honesty is essential for the growth of the cooperative sector: Babu Sahukara

ಇಂಡಿ  17: ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ಧ್ಯೇಯದ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾದ ಪರಿಶ್ರಮ ಅಗತ್ಯವಾಗಿದೆ’ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ಹೇಳಿದರು.ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಸನ್ 2024-25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ   ಸುನಂದಾ ವಾಲಿಕಾರ  ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿ ಸುನಂದಾ ವಾಲಿಕಾರ ಅವರು‘ ಪಡೆದ ಸಾಲವನ್ನು ಸದ್ವಿನಿಯೋಗ ಮಾಡಿಕೊಂಡು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕು’ ಎಂದರು. 

ಈ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಧರೇಪ್ಪ ಮೇತ್ರಿ ಅವರು ಸಹಕಾರಿ ಸಂಘ ಬೆಳೆಯಬೇಕಾದರೆ ರೈತರ ಪಾತ್ರ ಮುಖ್ಯವಾಗಿದೆ ರೈತರು ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ತುಂಬಬೇಕು.ನಮ್ಮ ತಡವಲಗಾ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘ 2024-25 ನೇ ಸಾಲಿನಲ್ಲಿ 32 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಳಸಿದ್ದಪ್ಪ ಬ್ಯಾಳಿ ಅಶೋಕ ರಾ ಮಿರ್ಜಿ ಕಮಲಾಕರ ಮೇತ್ರಿ ಮಡಿವಾಳಪ್ಪ ಆಳೂರ ರಮೇಶ ಹೊಸಮನಿ ರವಿ ಹೊಸಮನಿ ಹಾಗೂ ಪಿಕೆಪಿಎಸ್ ಸದಸ್ಯರಾದ ಮಂಜುನಾಥ ಮದರಿ ಬಸವರಾಜ ಕಟ್ಟಿ ಯಶವಂತ ರೂಗಿ ಬೀಮು ಮೇಲಿನಕೇರಿ ರಾಜು ಕ್ಷೇತ್ರಿ ನಾಗಪ್ಪ ಮುತ್ತಗಿ ಹಾಗೂ ಡಿಸಿಸಿ ಬ್ಯಾಂಕ್ ತಾಂಬಾ ಕ್ಷೇತ್ರಾಧೀಕಾರಿ ಪ್ರೇಮನಗೌಡ ಬಿರಾದಾರ ಪಿಕೆಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ರಫೀಕ್ ತಾಂಬೂಳಿ ಹಾಗೂ ಸಿಬ್ಬಂದಿಗಳಾದ ಅರವಿಂದ  ರೂಗಿ ವಿರೇಶ್ ಹಿರೇಮಠ ಅಂಬರೀಶ್ ತಾರಾಪೂರ ಪ್ರಕಾಶ್ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.