ರೈತರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ರಾಜುಗೌಡ
Honest efforts to fulfill farmers' demands: MLA Rajugowda
ತಾಳಿಕೋಟಿ 15: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಅಂತಿಮ ಹಂತದ ಎಫ್‌ಐಸಿ ಕಾಮಗಾರಿ ಪೂರ್ತಿಗೊಳಿಸುವಂತೆ ಒತ್ತಾಯಿಸಿ ನೀವು ನಡೆಸುತ್ತಿರುವ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಏಕೆಂದರೆ ನಾನು ಕೂಡ ಒಬ್ಬ ರೈತ ಕುಟುಂಬದಿಂದ ಬಂದವನಾಗಿದ್ದು ನನಗೆ ರೈತರ ಸಮಸ್ಯೆಗಳ ಅರಿವು ಇದೆ. ನೀವು ಧರಣಿ ಕುಳಿತುಕೊಳ್ಳುವುದಕ್ಕಿಂತ ಮೊದಲೇ ನಾನು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರೊಂದಿಗೆ ಮಾತನಾಡಿದ್ದೇನೆ ಇದಕ್ಕೆ ಅಗತ್ಯವಾದ ಡಿಪಿಆರ್ ಮಾಡಿಸಿ ಬೋರ್ಡ್ ಗೆ ಕಳಿಸಲು ತಿಳಿಸಿದ್ದಾರೆ. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ನನಗೆ ಯಾವ ಪ್ರಚಾರವೂ ಬೇಡ ನಾನು ಶಾಸಕನಲ್ಲ ನಿಮ್ಮ ಸೇವಕ ಮಾತ್ರ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ( ಕು.ಸಾಲವಾಡಗಿ) ಹೇಳಿದರು.
ತಾಲೂಕಿನ ಕೊಡಗಾನೂರ ಗ್ರಾಮದ ಹತ್ತಿರ ಬೂದಿಹಾಳ ಪೀರಾಪುರ ಏತ ನೀರಾವರಿ ಎಫ್ ಐ ಸಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ನಾಲ್ಕನೇ ದಿನದ ಅರ ಬೆತ್ತಲೆ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಹಿಂದಿನ ಅವಧಿಯಲ್ಲಿ ಏನಾಗಿದೆ ಎಂಬುದು ಕುರಿತು ಮಾತನಾಡುವುದು ಬೇಡ ಈಗ ನಾವು ಹೇಗೆ ಈ ಯೋಜನೆ ಪೂರ್ಣಗೊಳಿಸಬಹುದು ಎಂಬುದರ ಕುರಿತು ಚಿಂತಿಸಬೇಕಾಗಿದೆ ನೀವೆಲ್ಲರೂ ಸಿದ್ಧರಿದ್ದರೆ ನಾನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನೀರಾವರಿ ಸಚಿವರೊಂದಿಗೆ ನಿಮ್ಮ ಜೊತೆಯಲ್ಲಿದ್ದು ಮಾತನಾಡುತ್ತೇನೆ, ಸರ್ಕಾರದ ಮಟ್ಟದಲ್ಲಿ ಕೆಲಸವಾಗಬೇಕಾದರೆ ಕೆಲವು ಮಾರ್ಗಸೂಚಿಗಳ ನಾವು ಅನುಸರಿಸಬೇಕಾಗುತ್ತದೆ ಇದು ಕೂಡ ನಮ್ಮ ಗಮನದಲ್ಲಿರಬೇಕು. ನಿಮ್ಮ ಈ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ, ಓಟ್ಲೆಟ್ ಗಳಬಳಿ ಕೃಷಿ ಹೊಂಡ ಸ್ಥಾಪಿಸಿದರೆ ನೀರನ್ನು ಎಲ್ಲ ಹೊಲಗಳಿಗೂ ಹರಿಸಲು ಸಾಧ್ಯವಿದೆ ಎಂಬ ಸಲಹೆ ಬಂದಿದೆ. ಎಲ್ಲ ರೈತರು ಸಿದ್ಧರಿದ್ದರೆ ನಾನು ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಪ್ರಗತಿಪರ ರೈತ ಮುಖಂಡ ಎಸ್.ಎಸ್.ಪಾಟೀಲ ಅಸ್ಕಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ಯಾದಗಿರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ ರೈತರ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಶಾಸಕ ರಾಜುಗೌಡರು ಸರ್ಕಾರದ ಮಟ್ಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಹೋರಾಟದ ನೇತೃತ್ವ ವಹಿಸಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಮಾತನಾಡಿ ಕಳೆದ 3 ದಿನಗಳಿಂದ ಈ ನಮ್ಮ ಹೋರಾಟ ನಡೆಯುತ್ತಿದ್ದರು ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬಂದಿಲ್ಲ. ಅವರ ಈ ನಿರ್ಲಕ್ಷ್ಯ ಧೋರಣೆಯನ್ನು ನಾವು ವಿರೋಧಿಸುತ್ತೇವೆ. ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದಿನ ಹಂತದಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸುತ್ತೇವೆ. ಕೊನೆಗೆ ಆಮರಣಾಂತ ಉಪವಾಸವನ್ನು ನಡೆಸಲು ಹಿಂಜರಿಯುವುದಿಲ್ಲ. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಆಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ರೈತ ಮುಖಂಡರಾದ ಪ್ರಭುಗೌಡ ಬಿರಾದಾರ, ಗುರನಗೌಡ ಪಾಟೀಲ, ಮಡು ಸಾಹುಕಾರ ಬಿರಾದಾರ, ಮಲ್ಲನಗೌಡ ಪೊಲೀಸಪಾಟೀಲ, ಶಂಕರಗೌಡ ದೇಸಾಯಿ, ಶರಣಭೂಪಾಲ ದೇಶಮುಖ, ಸುರೇಶಕುಮಾರ ಇಂಗಳಗೇರಿ, ಮಲ್ಲನಗೌಡ ಪಾಟೀಲ, ರಾಜುಗೌಡ ಕೋಳೂರು, ರಾಜುಗೌಡ ಇಬ್ರಾಹಿಂಪುರ, ರಾಜುಗೌಡ ಗುಂಡಕನಾಳ, ಆನಂದಗೌಡ ಪಾಟೀಲ, ಡಾ.ಬಲವಂತರಾಯಗೌಡ ನಡಹಳ್ಳಿ, ಅಶೋಕ ಅಸ್ಕಿ,ಗುರುರಾಜ ಪಡಶೆಟ್ಟಿ, 38 ಗ್ರಾಮಗಳ ರೈತ ಪ್ರತಿನಿಧಿಗಳು ಹಾಗೂ ವಿವಿಧ ರೈತ ಸಂಘಟನೆಗಳ ಮುಖ್ಯಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 