ಹೋಮೊಯೋಪಥಿ ವೈದ್ಯರಾದ ಡಾ.ಎಚ್.ಎಚ್. ಸಿನ್ನೂರ ದತ್ತಿ ಕಾರ್ಯಕ್ರಮ
Homeopathic doctor Dr. H.H. Sinnur's charity program
ಲೋಕದರ್ಶನ ವರದಿ
ಧಾರವಾಡ 06 : ಹೋಮಿಯೋ ಪಥಿ ಅತ್ಯಂತ ಕಡಿಮೆ ಖರ್ಚಿನ, ಸುರಕ್ಷಿತ, ಪರಿಣಾಮಕಾರಿಯಾದ ವೈದ್ಯ ಪದ್ದತಿ. ಧೀರ್ಘಕಾಲದ ರೋಗಗಳಿಗೆ ಈ ಓಷಧಿ ರಾಮಬಾಣವಾಗಿದೆ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಡಾ. ಬಿ. ಡಿ. ಜತ್ತಿ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಹೊಸೂರ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಖ್ಯಾತ ಹೋಮೊಯೋಪಥಿ ವೈದ್ಯರಾದ ಡಾ.ಎಚ್.ಎಚ್. ಸಿನ್ನೂರ ದತ್ತಿ’ ಕಾರ್ಯಕ್ರಮದಲ್ಲಿ ‘ಹೋಮಿಯೋಪಥಿ ಪರಂಪರೆಯಿಂದ ವಿಜ್ಞಾನದ ಕಡೆಗೆ’ ಉಪನ್ಯಾಸ ಹಾಗೂ ವಿಧಿಯಾಟಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಡಾ. ಎಚ್.ಎಚ್.ಸಿನ್ನೂರ ಹೋಮಿಯೋಪಥಿ ವೃತ್ತಿಯನ್ನು ಎಂದಿಗೂ ಉಪಜೀವನದ ಉದ್ಯೊಗವೆಂದು ಭಾವಿಸದೇ ಜನಕಲ್ಯಾಣಕ್ಕಾಗಿ ಸೇವೆ ಮಾಡಿದ ಮಾನವೀಯತೆಯ ವೈದ್ಯರು.ತಮ್ಮ ಪ್ರಾಮಾಣಿಕ ಉದ್ಯೋಗದಿಂದ ಇಂದಿಗೂ ಅವರು ಜನಮಾನಸದಲ್ಲಿ ಉಳಿದಿದ್ದಾರೆ.ಈ ಹೋಮಿಯೋಪಥಿ ವೈದ್ಯ ಪದ್ಧತಿಜರ್ಮನಿಯ ವೈದ್ಯ ಸ್ಯಾಮುಯೆಲ್ ಹಾನಿಮನ್ ಅವರಿಂದ ಅಭಿವೃದ್ಧಿಸಲ್ಪಟ್ಟ ಪರ್ಯಾಯ ವೈದ್ಯ ಪದ್ದತಿ.ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವ ಮೂಲಕ ನೈಸರ್ಗಿಕವಾಗಿ ರೋಗ ಗುಣಪಡಿಸಲಾಗುತ್ತದೆ. ಈ ಪದ್ದತಿಯಲ್ಲಿ ಓಷಧಿಯನ್ನು ಸಾರಗುಂದಿಸುವ ಮೂಲಕವಾಗಿ ಸಿದ್ಧ ಗೊಳಿಸಲಾಗುತ್ತದೆ.ಆದರೆ ಧೀರ್ಷಕಾಲದ ರೋಗಗಳಿಗೆ ಪರಿಹಾರ ನೀಡಬಲ್ಲದೆಂದು ಹೇಳಿಕೊಂಡರು ಆಧುನಿಕ ವಿಜ್ಞಾನಇದನ್ನು ಒಪ್ಪಿಕೊಳ್ಳುವುದಿಲ್ಲ. ಇದರ ಬಗ್ಗೆ ಇನ್ನೂಟೀಕೆ, ಚರ್ಚೆಗಳೂ ಇವೆ.
ಈ ಪದ್ಧತಿಯಲ್ಲಿರೋಗಕ್ಕೆಓಷಧ ನೀಡುವ ಬದಲುರೋಗಿಯ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಸ್ಥಿತಿ ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ. ವಿಶ್ವದಲ್ಲಿ ಜನಪ್ರಿಯವಾದ 2 ಸ್ಥಾನದ ವೈದ್ಯ ಪದ್ಧತಿಇದಾಗಿದೆ. ಇಂದು ಐ.ಐ.ಐ.ಟಿಯಂತಹ ತಂತ್ರಜ್ಞಾನ ಸಂಸ್ಥೆಗಳಲ್ಲೂ ಇದರ ಬಗ್ಗೆ ಸಂಶೋಧನೆಗಳು ನಡೆದಿವೆ ಸಾಂಪ್ರದಾಯಕವಾಗಿ ಬಂದ ಈ ಹೋಮಿಯೋಪತಿ ಇಂದಿನ ವಿಜ್ಞಾನದ ತಳಹದಿಯ ಮೇಲೆ 250 ವರ್ಷಗಳ ಹಿಂದೆಯೆ ಬುನಾದಿ ಹಾಕಿದೆ.ಇದು ವಿಜ್ಞಾನಕ್ಕೆ ಅತೀ ಸಮಿಪವಾದದ್ದಂತು ಸತ್ಯ.ಇಂತಹ ಹೋಮಿಯೋಪಥಿ ಓಷಧಿ ಪದ್ಧತಿ ಉಳಿಸಿ, ಬೆಳಸುವದರೊಂದಿಗೆ ಚಿಕಿತ್ಸೆ ಪರಂಪರೆ ಮುಂದುವರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ಧ ಕ.ವಿ.ವ ಸಂಘದಗೌರವಉಪಾಧ್ಯಕ್ಷರಾದ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಹೋಮಿಯೋಪಥಿಓಷಧ ಸೇವನೆ ರೋಗದ ಬೇರು ಸಹಿತಕಿತ್ತು ಹಾಕಬಲ್ಲದು. ಆದರೆ ಕೆಲ ಆಹಾರ ಸೇವನೆ ನಿಷಿದ್ದ ಮಾಡಬೇಕು.ಆದರೆ ಯಾರಿಗೂ ಇಂದು ತಾಳ್ಮೆ ಇಲ್ಲದ ಭರಾಟೆಯಲ್ಲಿ ನಾವಿದ್ದೇವೆ. ಡಾ.ಎಚ್.ಎಚ್.ಸಿನ್ನೂರ ಅವರ ಸೇವೆ ನಾವು ಸ್ಮರಿಸಲೇಬೇಕು. ಸಾಧಕ ಮಹಿಳೆ ಶೋಭಾ ತೋಟದ ಅವರನ್ನು ದತ್ತಿದಾನಿಗಳು ಸನ್ಮಾನಿಸಿ ಗೌರವಿಸಿದರು. ಶೋಭಾ ತೋಟದ ಸನ್ಮಾನಕ್ಕೆ ಪ್ರತಿಕ್ರಿಯಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕ.ವಿ.ವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದಡಾ. ಪಾರ್ವತಿ ಹಾಲಭಾವಿ ಅವರು ಸಂಪಾದಿಸಿದ ‘ವಿಧಿಯಾಟ’ ಕೃತಿ ಬಿಡುಗಡೆ ಮಾಡಿದರು. ಡಾ. ಪಾರ್ವತಿ ಹಾಲಭಾವಿ ದತ್ತಿ ಆಶಯಕುರಿತು ಮಾತನಾಡಿದರು. ಸುರೇಶ ಹಾಲಭಾವಿ ವೇದಿಕೆಯಲ್ಲಿದ್ದರು. ಪ್ರೊ.ಧನವಂತ ಹಾಜವಗೋಳ ಸ್ವಾಗತಿಸಿದರು, ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಡಾ. ಎಸ್. ಬಿ.ಅಬ್ಬಿಗೇರಿಮಠ, ಡಾ. ವಿಜಯಶ್ರೀಅಂಗಡಿ, ಡಾ. ಮಹದೇವ ಹಳ್ಳಿಕೇರಿ, ಡಾ. ವಿಜಯಲಕ್ಷ್ಮೀ ನಲವಡಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಪ್ರಮೀಳಾ ಜಕ್ಕಣ್ಣವರ, ಸವಿತಾ ನಡಕಟ್ಟಿ, ಮಾಧುರಿಚಿಕ್ಕೊಡಿ, ಸುರೇಶ ಭಂಡಾರಿ ಸೇರಿದಂತೆ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 