ಪುರಸಭೆ ಮುಂದೆ ನಿರಾಶ್ರಿತ ಮಹಿಳೆಯರು ಪ್ರತಿಭಟನೆ
Homeless women protest in front of the municipality
ಬ್ಯಾಡಗಿ 05 : ಪಟ್ಟಣದ ಸೋಮವಾರ ಪುರಸಭೆ ವತಿಯಿಂದ ಮೊದಲ ಹಂತದ ಆಶ್ರಯ ನಿವೇಶನ ಹಕ್ಕು ಪತ್ರಗಳನ್ನು ವಸತಿ ಸಚಿವ ಬಿ ಝೆಡ್ ಜಮೀರ್ ಅಹಮದ್ ಖಾನ್ ಅವರಿಂದ ಹಂಚಿಕೆ ಮಾಡಲಾಗಿತ್ತು. ನಿವೇಶನ ಪಟ್ಟ ಹಂಚಿಕೆಯಲ್ಲಿ ಅರ್ಹರನ್ನು ದೂರವಿರಿಸಿ ಅನರ್ಹರಿಗೆ ನಿವೇಶನ ಪಟ್ಟಾ ಹಂಚಿಕೆ ಮಾಡಲಾಗಿದೆ ಎಂದು ಪುರಸಭೆ ಮುಂದೆ ಆಶ್ರಯ ಮನೆಗಳಿಗೆ ಅರ್ಜಿ ಹಾಕಿ ಬಾರದೆ ಇರುವ ಮಹಿಳೆಯರು ಪುರಸಭೆಯ ಸಾಮಾನ್ಯ ಸಭೆ ನಡೆಯುವುದನ್ನು ತಿಳಿದುಕೊಂಡು ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದರು.
ಸುಮಾರು ನೂರಾರು ನಿರಾಶ್ರಿತ ಬಡ ಮಹಿಳೆಯರು ಪುರಸಭೆಯ ಮುತ್ತಿಗೆ ಹಾಕಿ ಪುರಸಭೆ ಮತ್ತು ಆಶ್ರಯ ಸಮಿತಿಯವರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆಯನ್ನು ನಡೆಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪುರಸಭೆಯ ಸದಸ್ಯರುಗಳು ಮಾನ್ಯ ಪುರಸಭೆ ಮುಖ್ಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು ಪುರಸಭೆ 23 ಸದಸ್ಯರು ನಮಗೆ ಯಾವುದೇ ಮಾಹಿತಿ ಇಲ್ಲದೆ ನಮ್ಮ ವಾರ್ಡ್ಗಳಲ್ಲಿ ನೂರಾರು ನಿರಾಶ್ರಿತರು ಇದ್ದು ನಮಗೆ ಯಾವುದೇ ತರಹದ ಸೂಚನೆಗಳಿಲ್ಲದೆ ನೀವು ಬಡವರಿಗೆ ನಿವೇಶನ ಹಂಚಿಕೆ ಮಾಡಿದ್ದೀರಿ ಆದರೆ ಅದರಲ್ಲಿ ಸೂಕ್ತ ಬಡವರಿಗೆ ಮನೆ ಹಂಚಿಕೆಯಾಗಿಲ್ಲ ಕೆಲವರು ಇದ್ದವರಿಗೆ ಮತ್ತು ಸ್ವಂತ ಮನೆ ಇದ್ದವರಿಗೂ ಮತ್ತು ಈಗಾಗಲೇ ಆಶ್ರಯ ಮನೆ ಪಡೆದವರಿಗೂ ಮತ್ತೊಂದು ಸಲ ಮನೆಯನ್ನು ನೀಡಲಾಗಿದೆ ಇದರಲ್ಲಿ ತುಂಬಾ ಗೋಲ್ಮಾಲ ಆಗಿದೆ ಎಂದು ಆರೋಪಿಸಿದರು. ಇದೇ ವೇಳೆ ಪುರಸಭೆಯ ಸದಸ್ಯ ಬಸಣ್ಣ ಚತ್ರದ ಮಾತನಾಡಿ ಮಾನ್ಯ ಪುರಸಭೆ ಮುಖ್ಯಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಏಜೆಂಟರಾಗಿ ಕೆಲಸ ಮಾಡಿದ್ದಾರೆ ಯಾರಿಗೂ ತಿಳಿಸದ ಹಾಗೆ ಮತ್ತು ಪುರಸಭೆ ಸದಸ್ಯರ ಗಮನಕ್ಕೆ ತಾರದೆ ಆಶ್ರಯ ಸಮಿತಿಯ ಅಧ್ಯಕ್ಷರ ಜೊತೆ ಕೈಜೋಡಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡದೆ ಎಲ್ಲಾ ಉಳ್ಳವರಿಗೂ ನಿವೇಶನ ನೀಡಿದ್ದಾರೆ ಎಂದು ಆರೋಪಿಸಿದರು.ನಂತರ ಸ್ಥಾಯಿ ಸಮೀತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್ ಮಾತನಾಡಿ ಸರ್ಕಾರದ ಆದೇಶದ ಪ್ರಕಾರ ನಿವೇಶನ ಹಂಚಿಕೆಯಲ್ಲಿ ಹಲವು ವರ್ಗಗಳಿಗೆ ಮೀಸಲಾತಿ ಇರುತ್ತದೆ ಅದರಲ್ಲಿ ಅಂಗವಿಕಲರ ಮೀಸಲಾತಿ ಇದ್ದು ಅಂಗವಿಕಲ ಮಹಿಳೆಗೆ ನಿವೇಶನ ದೊರೆತಿಲ್ಲ ಅವರ ಕೋಟಾ ದಡಿ ಬರುವ ನಿವೇಶನವನ್ನು ಬೇರೆಯವರಿಗೆ ಹಂಚಿದ್ದೀರಿ ಅಂಗವಕಲರಿಗೆ ಬೆಲೆ ಇಲ್ಲ ತೀರಾ ಬಡವರಾಗಿದ್ದು ಅವರಿಗೆ ಆಶ್ರಯವಿಲ್ಲದೆ ಸುಮಾರು 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ನೀಡಿರುವ ಆಶ್ರಯ ನಿವೇಶನಗಳ ಪಟ್ಟಾಗಳನ್ನು ಕೂಡಲೇ ರದ್ದು ಮಾಡಿ ಪುರಸಭೆ ಉಪಾಧ್ಯಕ್ಷ ಸುಭಾಷ್ ಮಾಳಗಿ. ನಿನ್ನೆ ನಡೆದ ಬಡವರ ನಿವೇಶನಗಳ ಪಟ್ಟಾ ವಿತರಣೆಯಲ್ಲಿ ಬಾರಿ ಗೋಲ್ಮಾಲ್ ಆಗಿದ್ದು ಇದನ್ನು ನಮ್ಮ ಯಾವ ಸದಸ್ಯರಿಗೂ ತಿಳಿಸದ ಹಾಗೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಇದರಲ್ಲಿ ಬಹಳಷ್ಟು ಫಲಾನುಭವಿಗಳು ಸಕಲವನ್ನು ಉಳ್ಳವರಿದ್ದಾರೆ ಅಂತವರಿಗೂ ಮತ್ತು 10 ಎಕರೆ ಜಮೀನು ಹೊಂದಿದವರಿಗೂ ಮತ್ತು ಈಗಾಗಲೇ ಮೊದಲ ನಿವೇಶನ ಪಡೆದುಕೊಂಡವರಿಗೂ ಮತ್ತು ಮರಣ ಹೊಂದಿ ಹತ್ತು ವರ್ಷಗಳಾಗಿದ್ದವರಿಗೂ ಅಂತವರಿಗೆ ನಿವೇಶನ ಪಟ್ಟಾ ನೀಡಿದ್ದೀರಿ ತಾವ್ ಮಾಡಿದ ಈ ಕೆಲಸ ಗೊತ್ತಿರುವುದಿಲ್ಲ ತಾವು ನೀಡಿದ 357 ನಿವೇಶನಗಳನ್ನು ಕೂಡಲೇ ಸ್ಥಗಿತಗೊಳಿಸಿ ಅವುಗಳನ್ನು ಪರೀಶೀಲಿಸಿ ಅದರಲ್ಲಿರುವ ಸೂಕ್ತರನ್ನು ಹುಡುಕಿ ಮತ್ತು ಈಗ ಪ್ರತಿಭಟನೆಯಲ್ಲಿ ಪಾಲ್ಗೊಂಡಂತ ಬಡವರಿಗೆ ನಿವೇಶನವನ್ನು ನೀಡುವ ಕೆಲಸ ಮಾಡಬೇಕು ನಾಳೆ ಸಂಜೆಯೊಳಗೆ ಸೂಕ್ತ ಮತ್ತು ತೀರಾ ಬಡವರಿರುವ ಮತ್ತು ಪಟ್ಟಣದಲ್ಲಿ ಸುಮಾರು 20 ವರ್ಷಗಳಿಂದ ಇಲ್ಲಿಯೇ ಇದ್ದು ವಾಸವಾಗಿರುವ ಸೂಕ್ತ ಬಡವರನ್ನು ಗುರುತಿಸಿ ಅಂತವರಿಗೆ ಹಕ್ಕುಪತ್ರವನ್ನು ನಿವೇಶನಗಳ ಪಟ್ಟಾವನ್ನು ನೀಡಬೇಕು ಇಲ್ಲದಿದ್ದರೆ ನಾಳೆ ಸಂಜೆ 23 ಪುರಸಭೆಯ ಸದಸ್ಯರು ಪುರಸಭೆಯ ಆಹ್ವಾನದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಆಶ್ರಯ ಸಮಿತಿಯ ಸದಸ್ಯರು ಹಾಗೂ ಅಧ್ಯಕ್ಷರು ಕೂಡಲೇ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸುವಂತೆ ನಿರಾಶ್ರಿತ ವಂಚಿತ ಮಹಿಳೆಯರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಪ್ಪ ಗೋಳ್ ಮಾತನಾಡಿ ಈಗಾಗಲೇ ಬಿಡುಗಡೆಯಾದ ನಿರಾಶ್ರಿತರ ಪಟ್ಟಿಯಲ್ಲಿ ಬಹಳಷ್ಟು ಫಲಾನುವಿಗಳು ಯಾರು ಅನರ್ಹರಿದ್ದಾರೆ ಅಂತವರ ಹೆಸರುಗಳನ್ನು ರದ್ದುಪಡಿಸಿ ಯಾರು ನಿಜವಾಗಿಯೂ ಬಡವರಿದ್ದಾರೆ ಅವರಿಗೆ ನಿವೇಶನ ನೀಡುವ ಕೆಲಸವನ್ನು ಮಾಡಲಾಗುತ್ತದೆ ಈಗಾಗಲೇ ಶಾಸಕರು ಜೊತೆ ಮಾತನಾಡಿದ್ದು ಅದರಂತೆ ಪಟ್ಟಿಯನ್ನು ಪರಿಷ್ಕರಣೆ ಮಾಡಿ ನಿಜವಾಗಿ ಯಾರು ಅನರ್ಹರಿದ್ದಾರೆ ಅವರಿಗೆ ಮನೆ ನೀಡಲು ಠರಾವು ಮಾಡಿ ಕೊಡಲಾಗುವುದೆಂದು ಹೇಳಿದರು. ಪ್ರತಿಭಟನಾ ನಿರತ ಮಹಿಳೆಯರು ಮಹಿಳೆಯರು ಬುಧವಾರ ಸಂಜೆ ವರೆಗೂ ಗಡುವು ನೀಡಿದ್ದು ಅಲ್ಲಿಯವರೆಗೂ ನ್ಯಾಯ ಸಿಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿವೇಶನ ರಹಿತರು ಬೃಹತ ಪ್ರತಿಭಟನೆ ಮಾಡುವುದಾಗಿ ಹೇಳಿ ಪ್ರತಿಭಟನೆಯನ್ನು ವಾಪಸ್ ಪಡೆದರು.
ಪ್ರತಿಭಟನೆಯ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆರಕ್ಷಕ ಸಿಬ್ಬಂದಿ ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ. ಶಿವರಾಜ್ ಅಂಗಡಿ ವಿನಯ್ ಕುಮಾರ ಹೀರೆಮಠ. ಪಕೀರಮ್ಮ ಚಲವಾದಿ. ಸರೋಜಮ್ಮ ಉಳ್ಳಾಗಡ್ಡಿ. ಗಾಯತ್ರಿ ರಾಯ್ಕರ್. ಹನುಮಂತ ಮ್ಯಾಗೇರಿ. ಶಂಕರ್ ಕುಸುಗುರ್. ಮೆಹಬೂಬ್ ಅಗಸನಹಳ್ಳಿ.ಈರಣ್ಣಾ ಬಣಕಾರ. ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 