ಪಟ್ಟಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ
Home Minister Dr. G. Parameshwara visits the town
ಯರಗಟ್ಟಿ 26: ಪಟ್ಟಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿದರು.ಈ ವೇಳೆ ತಾಲೂಕಿನ ಸಮಸ್ತ ನಾಗರಿಕರು ದಲಿತ ಮುಖಂಡರು, ರೈತರು ಅದ್ದೂರಿಯಾಗಿ ಸ್ವಾಗತಿಸಿದರು.ಕರ್ನಾಟಕ ರಕ್ಷಣಾ ವೇದಿಕೆ, ದಲಿತಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪತ್ರಿಕಾ ಮಾಧ್ಯಮದವರು, ನ್ಯಾಯವಾದಿಗಳ ಸಂಘ ಮಾಜಿ ಸೈನಿಕರ ಸಮನ್ವಯ ಸಮಿತಿ ಕೂಲಿ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ಪೊಲೀಸ್ ಠಾಣೆಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.ಈ ವೇಳೆ ಕರವೇ ಅಧ್ಯಕ್ಷ ರಫೀಕ ಡಿ.ಕೆ. ದಲಿತ ಮುಖಂಡ ಸಂತೋಷ ಚನ್ನಮೇತ್ರಿ, ಸುರೇಶ್ ಭಜಂತ್ರಿ, ವಿಠ್ಠಲಗೌಡ ದೇವರಡ್ಡಿ, ಅರುಣ ನೀಲಪ್ಪನ್ನವರ, ಫಾರುಕ್ ಅತ್ತಾರ, ಅಬಿದಬೇಗ ಜಮಾದಾರ, ಪೀರೋಜ ಖಾದ್ರಿ, ಮಂಜುನಾಥ ಬಾವಿಹಾಳ, ಸೋಮು ರೈನಾಪೂರ, ಮಂಜುನಾಥ ಸಿದ್ದನಗೌಡ, ಹಸೇನಸಾಬ ಹುಸೇನಾಯ್ಕರ, ಸೂರಜ ಸಂಗೋಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.26 ಯರಗಟ್ಟಿ 01ಪೋಟೋ ಶೇಷಿಕೆಹೇಳಿಕೆ: ಯರಗಟ್ಟಿ ತಾಲೂಕಿಗೆ ಈಗಾಗಲೇ ಪೊಲೀಸ್ ಠಾಣೆಯನ್ನು ಮಂಜುರಾತಿ ಮಾಡಲಾಗಿದೆ ಆದರೆ ಫೈನಾನ್ಸಿಯಲ್ ಹಂತದಲ್ಲಿದ್ದು ಡಿಸೆಂಬರ್ ತಿಂಗಳಲ್ಲಿ ನೂತನ ಪೊಲೀಸ್ ಠಾಣೆ ಪ್ರಾರಂಭ ಮಾಡುವುದಾಗಿ ಶಾಸಕ ವಿಶ್ವಾಸ ವೈದ್ಯ ಅವರ ಜೋತೆ ಮಾತನಾಡಿದ್ದೆನೆ.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 