ಪವಿತ್ರವಾದ ಅನ್ನವನ್ನು ಕೆಡಿಸಬಾರದು ಅನ್ನವು ಆತ್ಮಕ್ಕೆ ಸಮಾನ: ಸದಾಶಿವ ಮುತ್ಯಾ
Holy food should not be spoiled, food is equal to the soul: Sadashiva Mutya
ಅಮೋಘಸಿದ್ದೇಶ್ವರ ದತ್ಶಮಾನೋತ್ಸವ ಜಾತ್ರಾ ಮಹೋತ್ಸವ ಮಹಾಪ್ರಸಾದಕ್ಕೆ ಚಾಲನೆ ನೀಡಿದ ಸದಾಶಿವ ಮುತ್ಯಾ;
ಪಾಲಬಾವಿ 27: ಪವಿತ್ರವಾದ ಅನ್ನವನ್ನು ಕೆಡಿಸಬಾರದು, ಅನ್ನವು ಆತ್ಮಕ್ಕೆ ಸಮಾನವಾಗಿದ್ದು, ಅನ್ನವು ಪರಬ್ರಹ್ಮ ಸ್ವರೂಪಿಯಾಗಿದ್ದು, ಸಕಲ ಜೀವಕ್ಕೆ ಅನ್ನವೇ ಬ್ರಹ್ಮವಾಗಿದ್ದು, ಹಸಿದವರಿಗೆ ಅನ್ನ ನೀಡುವುದೇ ಪುಣ್ಯ ಕೆಲಸವಾಗಿದೆ.
ಹಿಡಕಲ್ಲದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಎರಡು ದಿನಗಳವರೆಗೆ ಎಲ್ಲ ಭಕ್ತರಿಗೆ ದಾಸೋಹ ಮಾಡಿಸಿರುವುದು ಭಕ್ತಿ ಪ್ರಧಾನ ಸಂಕೇತವಾಗಿದ್ದು. ಅಮೋಘಸಿದ್ದೇಶ್ವರ ಸನ್ನಿಧಾನದಲ್ಲಿ ಬಂದು ಒಳ್ಳೆಯದನ್ನು ಭಕ್ತಿಯಿಂದ ಮನದಲ್ಲಿ ಬೇಡಿಕೊಂಡಿರುವುದನ್ನು ಈಡೇರಿಸುವ ಶಕ್ತಿಯು ಶ್ರೀ ಅಮೋಘಸಿದ್ದೇಶ್ವರ ದೇವರಿಗೆ ಇದೆ ಎಂದು ಹಿಡಕಲ್ಲ ಗ್ರಾಮದ ಬಬಲಾದಿ ಶಾಖಾ ಮಠದ ಪೂಜ್ಯರಾದ ಸದಾಶಿವ ಮುತ್ಯಾ ಮಹಾರಾಜರು ದಾಸೋಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದಲ್ಲಿ ಶರಣ ಸದ್ಭಕ್ತರಾದ ಹನುಮಂತ ತಮ್ಮಣ್ಣ ಒಡೆಯರ ತೋಟದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಶಿವಯೋಗಿ ಅಮೋಘಸಿದ್ದೇಶ್ವರ ಜಾತ್ರೆಯ ದಶಮಾನೋತ್ಸವವು ಹಾಗೂ ಲಕ್ಷದೀಪೋತ್ಸವ, "ಸಿದ್ಧರಭೇಟಿ" ಮಹೋತ್ಸವದಲ್ಲಿ ದಿ.27 ರಂದು ಮುಂಜಾನೆ 11ಗಂಟೆಗೆ ದಾಸೋಹದ ಮಹಾಮನೆಯಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಮೋಘಸಿದ್ದೇಶ್ವರ ದೇವಸ್ಥಾನದ ಗದಗಿ ಪೂಜಾರಿಗಳು ಮಾಲಿಸಿದ್ದ ಒಡೆಯರ, ಬೆಂಗಳೂರು ಸಿದ್ಧಾರೂಢ ಮಠದ ಸದ್ಗುರು ಸಿದ್ಧಾರೂಢ ಸ್ವಾಮೀಜಿ, ಅಳಗವಾಡಿಯ ಆಧ್ಯಾತ್ಮಜೀವಿ ವಿಠ್ಠಲ ಹಳ್ಳೂರೆ, ನಿಂಗಪ್ಪ ಬೀಳಗಿ, ತುಕ್ಕರಾಮ ಸೂರಣ್ಣವರ, ನಾಗಪ್ಪ ನಿಡಗುಂದಿ, ದೀಲೀಪ್ ನಾಯಿಕ, ಸುಭಾಷ ಸೂರಣ್ಣವರ, ಕರೆಪ್ಪ ಸೂರಣ್ಣವರ, ಪ್ರಧಾನಗುರು ಶಂಕರ ಕ್ಯಾಸ್ತಿ, ನರೇಂದ್ರ ಮುರಗೋಜಿ, ಚನ್ನಪ್ಪ ಅಂಗಡಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಪರಗೌಡ ದರೂರ, ಮಹಾಂತೇಶ ಕುಂಚನೂರ, ಸಿದ್ದಪ್ಪ ಕಂಕಣವಾಡಿ, ಸಿದ್ದಪ್ಪ ಮಡ್ರಿ, ಬಸವರಾಜ ಜಗದಾಳ, ವಿನಾಯಕ ಕಂಕಣವಾಡಿ, ಸಚಿನ್ ಒಡೆಯರ, ಸದಾಶಿವ ಗಲಗಲಿ, ಮದುಗೊಂಡ ಹೋನಮನೆ, ಮಹೇಶ ಚೌಗಲೆ, ಮುಖ್ಯಗುರು ಬೀರ್ಪ ತಡಸಲೂರ, ಶಿಕ್ಷಕ ಧರ್ಮಣ್ಣ ಕೋಳಿ, ಲಕ್ಷ್ಮಣ ಕಂಕಣವಾಡಿ, ಮಲ್ಲಪ್ಪ ಢವಳೇಶ್ವರ, ಮಹಾದೇವ ಕಂಕಣವಾಡಿ, ವಿಠಲ ಮಗಡುಮ್ಮ ಇದ್ದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 