ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ
Holige meal for villagers with Grilahakshmi Guarantee Scheme money
ತಾಂಬಾ 08: ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಹಣದಲ್ಲಿ ಗೋಗಿಹಾಳ ಗ್ರಾಮದ ಫಲಾನುಭವಿ ಬಾಬು ಅಬ್ಬಾಸರಿ ಚೌದರಿ ಅವರು ಗ್ರಾಮಸ್ಥರಿಗೆ ಹೋಳಿಗೆ ಊಟ ಬಡಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳ ಕೈ ಸೇರುವ ರೂ 2ಸಾವಿರ ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಬದಲಾಗಿ ಸರಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಈ ಕಾರ್ಯ ಕೈಗೊಂಡು ಮಾದರಿಯಾಗಿದ್ದಾರೆ.
ಹೋಳಿಗೆ, ತಪ್ಪು, ಹಾಲು, ಬದನೆಕಾಯಿ ಪಲ್ಯ, ಕಡಲೆ ಕಾಳು, ಚಪಾತಿ, ಅನ್ನ, ಸಾಂಬಾರು ಸಿದ್ದುಪಡಿಸಿದ ಗ್ರಾಮದ ಮೂರು ನೂರು ಜನರು ಸೇರಿದಂತೆ ಜನಪ್ರತಿನಿಧಿಗಳಿಗೆ ಸಿಹಿ ಊಟ ಸವಿದರು.
ಹೋಳಿಗೆ ಊಟ ಸ್ವೀಕರಿಸಿ ಮಾತನಾಡಿದ ಸಿಂದಗಿ ಶಾಸಕ ಅಶೋಕ ಮನಗೂಳಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ವಿಪಕ್ಷದವರ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಿ ಸ್ವಾವಲಂಬಿ ಕರ್ನಾಟಕ ರೂಪಿಸುವತ್ತ ಸರ್ಕಾರ.
ಹಳಸದ ಅನ್ನವಿಲ್ಲ ಅದು ಹಳಸುವ ಮುನ್ನ ಊಟಮಾಡಬೇಕು, ಬಾಡದ ಹೂವಿಲ್ಲ ಅದು ಬಾಡುವ ಮುನ್ನ ಮುಡಿಯಬೇಕು, ಕೆಡಲಾರದ ಹಣ್ಣುಗಳಿಲ್ಲ ಅವು ಕೇಡುವ ಮುನ್ನ ಸೇವಿಸಬೇಕು, ಸಾಯದ ಮನುಷ್ಯನಿಲ್ಲ ಸಾಯುವ ಮುನ್ನ ಸತ್ಯದ ಕಿರ್ತಿ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಂದಗಿ ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹಮ್ಮದ ಅತ್ತಾರ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹಂದನೂರ, ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ ಚಿಕ್ಕಗಸಿ, ಕಾಂತನಗೌಡ ಪಾಟೀಲ್, ಪರಸು ಬಿಸನಾಳ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಸಲೀಂ ಚೌಧರಿ, ಸಿದ್ದು ಹತ್ತಳ್ಳಿ, ಮಲ್ಲನಗೌಡ ಬಿರಾದಾರ್, ರಾಯಗೊಂಡ ನಾಟಿಕರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 