ಹೊಳಗುಂದಿ : ವೀರಭದ್ರೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ
Holagundi: Fire Festival of Veerabhadreshwara Swamy
ಲೋಕದರ್ಶನ ವರದಿ
ಹೂವಿನಹಡಗಲಿ 03: ಪ್ರತಿವರ್ಷ ದಂತೆ ಹಂಪಿ ಹುಣ್ಣಿಮೆ ನಿಮಿತ್ತ ತಾಲ್ಲೂಕಿನ ಹೊಳಗುಂದಿಯಲ್ಲಿ ಗುರುವಾರ ಬೆಳಿಗ್ಗೆ 12 ಗಂಟೆಗೆ ವೀರಭದ್ರೇಶ್ವರ ಸ್ವಾಮಿಯ ಅಗ್ನಿ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.ದೇಗುಲದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಗಿತ್ತು.ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಮಾಳ, ನಂದಿಕೋಲು, ಮಂಗಳ ವಾದ್ಯಗಳ ಭವ್ಯ ಮೆರವಣಿಗೆಯ ಮೂಲಕ ಬಾವಿಹಳ್ಳಿ ಯಲ್ಲಿ ಗಂಗೆ ಪೂಜೆ ನಂತರ ದೇಗುಲದ ಬಳಿ ಕರೆತರಲಾಯಿತು. ಇದೇ ವೇಳೆ ಪುರವಂತರು ಸ್ವಾಮಿಯ ಮಹಿಮೆಯನ್ನು ವಡಪುಗಳನ್ನು ಹೇಳುತ್ತಾ ಕಲಾ ಪ್ರದರ್ಶನ ನೀಡಿದರು. ಹರಕೆ ಹೊತ್ತ ಭಕ್ತರು ಶಸ್ತ್ರ ಹಾಕಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.ವೀರಭದ್ರೇಶ್ವರ ದೇವಾಲಯ ಬಳಿ ಅಣಿಗೊಳಿಸಿದ್ದ ಅಗ್ನಿಕುಂಡಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸುತ್ತಿದ್ದಂತೆ ಸ್ವಾಮಿಯ ಪಲ್ಲಕ್ಕಿ ಹೊತ್ತ ಭಕ್ತರು ಅಗ್ನಿ ಕುಂಡದಲ್ಲಿ ನಡೆದರು. ನಂತರ ಹರಕೆ ಹೊತ್ತ ಭಕ್ತರು ನಿಗಿನಿಗಿ ಕೆಂಡ ತುಳಿದು ಭಕ್ತಿಯನ್ನು ಸಮರ್ಿಸಿದರು. ಅಗ್ನಿ ಹಾಯುವ ಕಾರ್ಯಕ್ರಮ ನೋಡಲು ಜನರು ಆಗಮಿಸಿದ್ದರು. ನಂತರ ಅನ್ನಸಂತರೆ್ಣ ಏರಿ್ಡಸಿದ್ದರು. ದೇವಸ್ಥಾನ ಸಮಿತಿ ಅದ್ಯಕ್ಷ ಮುದೇಗೌಡ್ರ ಪ್ರಕಾಶ್ (ಮೋದಿ) ಸೇರಿದಂತೆ ಸರ್ವ ಸದಸ್ಯರು, ಸ್ಥಳೀಯ ಮುಖಂಡರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 