ಚಂಡೀಗಢ, ಆ 22 ಭಾರತದ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ 'ಭಾರತ ರತ್ನ' ಗೌರವ ನೀಡಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
"ಮೂರು ಬಾರಿ ಒಲಿಂಪಿಕ್ಸ್ ಹಾಕಿ ಚಿನ್ನದ ಪದಕ ವಿಜೇತ ಬಲ್ಬೀರ್ ಸಿಂಗ್ ಅವರ ಕ್ರೀಡಾ ಸಾಧನೆ ಪರಿಗಣಿಸಿ 'ಭಾರತ ರತ್ನ' ಗೌರವ ನೀಡಬೇಕೆಂದು ಪ್ರಧಾನ ಮಂತ್ರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ" ಎಂದು ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಜತೆಗೆ, ಟ್ವೀಟರ್ನಲ್ಲಿ ಪತ್ರವನ್ನೂ ಟ್ಯಾಗ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಲ್ಬೀರ್ ಸಿಂಗ್ ಅವರು ಕಳೆದ ತಿಂಗಳು ಪೋಸ್ಟ್ ಇನ್ಸ್ಟಿಟ್ಯೂಟ್ ಆಫ್ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆ (ಪಿಜಿಐಎಂಇಆರ್) ಭೇಟಿ ನೀಡಿ ಬಲ್ಬೀರ್ ಸಿಂಗ್ ಅವರಿಗೆ ಮಹಾರಾಜ ರಂಜೀತ್ ಕ್ರೀಡಾ ಪ್ರಶಸ್ತಿ ಸಮಪರ್ಿಸಿದ್ದರು. ಜೆತೆಗೆ, ಅವರ ಚಿಕಿತ್ಸೆಗೆ ಐದು ಲಕ್ಷ ರೂ. ಮೊತ್ತವನ್ನು ಬಿಡುಗಡೆ ಮಾಡಿದ್ದರು.
ಬಲ್ಬೀರ್ ಸಿಂಗ್ (94) ಅವರು ಲಂಡನ್ (1948), ಹೆಲ್ಸಿಂಕಿ (1952) ಹಾಗೂ ಮೆಲ್ಬೋರ್ನ್ (1956) ಒಟ್ಟು ಮೂರು ಒಲಿಪಿಕ್ಸ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಮೆಲ್ಬೋರ್ನನ್ಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದ ಭಾರತ ತಂಡವನ್ನು ಬಲ್ಬೀರ್ ಸಿಂಗ್ ಅವರೇ ಮುನ್ನಡೆಸಿದ್ದರು. 1975ರಲ್ಲಿ ಭಾರತ ಹಾಕಿ ವಿಶ್ವಕಪ್ ಗೆದ್ದ ಭಾರತ ತಂಡದ ವ್ಯವಸ್ಥಾಪಕರಾಗಿದ್ದರು.