ಹೊಬರ್ಟ್ ಇಂಟರ್ ನ್ಯಾಷನಲ್: ಫೈನಲ್ ಪ್ರವೇಶಿಸಿದ ಸಾನಿಯಾ-ಕಿಚ್ನಾಕ್ ಜೋಡಿ
ಹೊಬರ್ಟ್, ಜ 17 : ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಇಲ್ಲಿ ನಡೆಯುತ್ತಿರುವ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸಾನಿಯಾ ಹಾಗೂ ನದಿಯಾ ಜೋಡಿಯು 7-6, 6-2 ಅಂತರದಲ್ಲಿ ನೇರ ಸೆಟ್ ಗಳಲ್ಲಿ ಮರಿಯಾ ಬೌಸ್ಕೊವಾ ಹಾಗೂ ತಮರಾ ಝಿಡಾನ್ಸೆಕ್ ಜೋಡಿಯ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.ಒಂದು ಗಂಟೆ ಹಾಗೂ 33 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯ ಮೊದಲನೇ ಸೆಟ್ ನಲ್ಲಿ ಸಾನಿಯಾ ಹಾಗೂ ಕಿಚ್ನಾಕ್ ಜೋಡಿ ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು. ನಂತರ, ಪುಟಿದೆದ್ದ ಸಾನಿಯಾ ಮಿರ್ಜಾ ಜೋಡಿ ಮೊದಲನೇ ಸೆಟ್ ಗೆಲುವು ಪಡೆಯಿತು.ಗೆಲುವಿನ ಲಯವನ್ನು ಮುಂದುವರಿಸಿದ ಸಾನಿಯಾ ಹಾಗೂ ಕಿಚ್ನಾಕ್ ಜೋಡಿಯು ಎದುರಾಳಿ ಜೋಡಿಗೆ ಪಾಯಿಂಟ್ ಕಲೆಹಾಕಲು ಅವಕಾಶ ನೀಡಲೇ ಇಲ್ಲ. ಸುಲಭವಾಗಿ ಎರಡನೇ ಸೆಟ್ ಗೆದ್ದು ಪಂದ್ಯವನ್ನು ತನ್ನದಾಗಿಸಿಕೊಂಡಿತು. ಈ ಜೋಡಿ ಗುರುವಾರ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅಮೆರಿಕದ ವನಿಯಾ ಕಿಂಗ್ ಹಾಗೂ ಕ್ರಿಸ್ಟಿನಾ ಮೆಕ್ ಹಲೆ ಜೋಡಿಯ ವಿರುದ್ಧ 6-2, 4-6, 10-4 ಅಂತರದಲ್ಲಿ ಗೆಲುವು ಸಾಧಿಸಿತ್ತು.33ರ ಪ್ರಾಯದ ಸಾನಿಯಾ ಮಿರ್ಜಾ ಅವರು 2017ರ ಅಕ್ಟೋಬರ್ ನಲ್ಲಿ ಚೀನಾ ಓಪನ್ ಆಡಿದ್ದರು. ಇದಾದ ಬಳಿಕ ಮೊದಲ ಟೂರ್ನಿ ಇದಾಗಿದೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 