ತುಮಕೂರು,ನ 09 : ಸಂವಿಧಾನದ ಪೀಠ ಸುದೀರ್ಘ ವಿಚಾರಣೆ ಮಾ ಡಿ,ದಾಖಲೆ ನೋಡಿ ಇತಿಹಾಸ ಸಂಸ್ಕೃತಿ ಗಮನಿಸಿ ತೀಪು ನೀಡಿದೆ.ಬಹಳ ದಿನಗಳ ಸಮಸ್ಯೆಯಾಗಿದ್ದು ಅಂತಿಮವಾಗಿ ವಿವಾದಕ್ಕೆ ತೆರೆ ಎಳೆದಿರುವುದು ಶ್ಲಾಘ ನೀಯ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸೋಲು ಗೆಲುವಿನ ಪ್ರಶ್ನೆ ಅಲ್ಲ,ವಿವಾದ ತೀರ್ಮಾನಾಗಿರುವುದು ಸಂತೋಷದ ಸಂಗತಿ.ನಾವು ನ್ಯಾಯ ಲಯದ ತೀರ್ಪನ್ನು ಗೌರವಿಸುತ್ತೇವೆ.ಅದು ಪರ ವಿರೋಧ ವಿಚಾರವಲ್ಲ.ನ್ಯಾಯಾ ಲಯ ಎಲ್ಲವನ್ನು ಗಮನಿಸಿ ಸಂವಿಧಾನದ ಪೂರ್ಣ ಪೀಠ ಇದನ್ನು ಒಪ್ಪಿ ತೀರ್ಮಾನ ಕೊಟ್ಟಿದೆ ಎಂದರು. ಸುಪ್ರೀಂ ಕೋರ್ಟ್ ತೀರ್ಪುಗೆ ಅಪಸ್ವರ ಬರದಂತೆ ಎಲ್ಲವನ್ನು ಸಮಾನವಾಗಿ ಸ್ವೀಕ ರಿಸಿ,ಗೌರವಿಸಿ ಶಾಂತಿ ಸಮಧಾನದಿಂದ ಇರಬೇಕು.ಎಲ್ಲಾ ಧರ್ಮಕ್ಕೂ ಜಾತಿಗೂ ಅವಕಾಶ ನೀಡಿರುವುದು ಭಾರತ.ನಮ್ಮ ದೇಶಕ್ಕೆ,ವಿಶ್ವಕ್ಕೆ ಶಾಂತಿ ಬಯಸುತ್ತದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲಾರು ಎತ್ತಿ ಹಿಡಿಯೋಣ, ಸ್ವಾಗತಿಸೋಣ. ಸೌಹಾರ್ದತೆಯಿಂದ ಜೀವನ ನಡೆಸೋಣ. ಇವರು ಪೂಜೆ ಮಾಡ್ತಾರೆ. ಅವರು ಪ್ರಾರ್ಥನೆ ಮಾಡುತ್ತಾರೆ ಅಷ್ಟೆ ಎಂದು ತಿಳಿಸಿದರು.