ಸೋಮಯ್ಯ ವಿನಯ ಮಂದಿರ ಪ್ರೌಢ ಶಾಲೆಯ ಬಾಲಕಿಯರಿಂದ ಐತಿಹಾಸಿಕ ಸಾಧನೆ
Historic achievement by girls of Somaiya Vinaya Mandir High School
ಸೋಮಯ್ಯ ವಿನಯ ಮಂದಿರ ಪ್ರೌಢ ಶಾಲೆಯ ಬಾಲಕಿಯರಿಂದ ಐತಿಹಾಸಿಕ ಸಾಧನೆ
ಸೈದಾಪುರ 08: ಕೆಂಗೇರಿಮಡ್ಡಿಯ ಸರ್ಕಾರಿ ಉರ್ದು ಪ್ರೌಢ ಶಾಲೆಯ ಮೈದಾನದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ, ಸಮೀರವಾಡಿಯ ಸೋಮಯ್ಯ ವಿನಯ ಮಂದಿರ ಪ್ರೌಢ ಶಾಲೆಯ ಬಾಲಕಿಯರ ಕಬಡ್ಡಿ ತಂಡ ಐತಿಹಾಸಿಕ ಜಯ ಸಾಧಿಸಿದೆ.
ಶಾಲೆಯ 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಶಾಲೆಯ ಕೀರ್ತಿಯನ್ನು ಮತ್ತಷ್ಟು ಎತ್ತರಿಸಿದೆ. ಉತ್ಸಾಹಭರಿತ ಆಟ, ಶಿಸ್ತುಬದ್ಧ ತಂತ್ರ ಮತ್ತು ತಂಡದ ಒಗ್ಗಟ್ಟಿನಿಂದ ಎದುರಾಳಿ ತಂಡಗಳನ್ನು ಮಣಿಸಿದ ಈ ಕಬಡ್ಡಿ ತಂಡವು, ಅಂತಿಮ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ವಿಜೇತರಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ಫಲಕವನ್ನು ವಿಶೇಷ ಅತಿಥಿಗಳಿಂದ ಪ್ರದಾನ ಮಾಡಲಾಯಿತು.
ಸತತವಾಗಿ 12 ವರ್ಷಗಳ ಕಾಲ ಮಹಾಲಿಂಗಪೂರ ವಲ ಯದಲ್ಲಿ ಬಾಲಕಿಯರ ಕಬಡ್ಡಿಯಲ್ಲಿ ಚಾಂಪಿಯನ್ ಅಗಿದ ಕೆಸರಗೊಪ್ಪದ ಪ್ರೌಢ ಶಾಲೆಯ ಬಾಲಕಿಯರನ್ನು 14 -04 ಅಂಕಗಳೊಂದಿಗೆ ಸೊಲಿಸಿ ವಿಜಯಶಾಲಿಗಳಾಗಿದ್ದಾರೆ.ಜಯಗಳಿಸಿದ ಬಾಲಕಿಯರಿಗೆ ಟ್ರೋಪಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿದರು. ಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಈ ಸಾಧನೆಯನ್ನು ಮೆಚ್ಚಿ, “ಇದು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು. ಈ ಐತಿಹಾಸಿಕ ಕ್ಷಣವನ್ನು ತಂಡದ ಆಟಗಾರ್ತಿಯರು, ಶಿಕ್ಷಕರು ಹಾಗೂ ಅತಿಥಿಗಳು ವೇದಿಕೆಯ ಮೇಲೆ ಸೇರಿ ಸಂಭ್ರಮಿಸಿದರು.ಈ ಗೆಲುವಿನ ಹಿನ್ನಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಮಹಾತೇಶ ಪುರವಂತ ಹಾಗೂ ಬಸವರಾಜ ಕುರಾಡೆ, ಜೊತೆಗೆ ಟೀಮ್ ಮ್ಯಾನೇಜರ್‌ಗಳಾದ ನಿಂಗಪ್ಪ ರಾಠೋಡ ಮತ್ತು ಸಂತೋಷ ಮುಗಳಿ ಇವರ ಮಾರ್ಗದರ್ಶನ ಹಾಗೂ ಅಪ್ರತಿಮ ಬೆಂಬಲ ಪ್ರಮುಖ ಪಾತ್ರವಹಿಸಿದೆ.ಜಯಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ. ದೈಹಿಕ ಶಿಕ್ಷಕ ಬಸವರಾಜ ಕುರಾಡೆ ಮತ್ತು ಮಹಾಂತೇಶ ಪುರವಂತ ತರಬೇತಿ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 