ಅಳವಂಡಿಯಲ್ಲಿ ವೀರಗಲ್ಲು ಪತ್ತೆ ಸಂರಕ್ಷಣೆಗೆ ಇತಿಹಾಸಕಾರ ಕಲ್ಯಾಣಿ ಮನವಿ
Historian Kalyani appeals for preservation of Hero Stone found in Alavandi
ಕೊಪ್ಪಳ 05: ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಐತಿಹಾಸಿಕ ಮಹತ್ವ ಸಾರುವ ವೀರಗಲ್ಲು ಪಟ್ಟೆಯಾಗಿದ್ದು.ಇದನ್ನು ಇತಿಹಾಸಕಾರ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಗೌರವ ಅಧ್ಯಕ್ಷ ಡಾ ಸಂಗಮೇಶ ಕಲ್ಯಾಣಿ ಅವರು ಗುರುತಿಸಿದ್ದಾರೆ.ಅಳವಂಡಿ ಗ್ರಾಮವು ಕುಂತಳ ನಾಡಿನ ಅಗ್ರಹಾರವಾಗಿತ್ತು. ಯುದ್ಧದಲ್ಲಿ ವೀರ ಮರಣ ಹೊಂದಿದ ಸಾಮಂತರು ಮತ್ತು ಸ್ಥಳೀಯ ಗಾವುಂಡರ ನೆನಪಿಗಾಗಿ ವೀರಗಲ್ಲು ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.ಅಲ್ಲಿನ ಸ್ಥಳೀಯ ಇತಿಹಾಸವನ್ನು ಸಾರುವ ವೀರಗಲ್ಲು ಪ್ರಸ್ತುತ ಊರಿನ ಮಹಾದ್ವಾರದ ಹತ್ತಿರ ನಿಲ್ಲಿಸಿದ್ದಾರೆ. ಈಗಾಗಲೇ ಕೆಳಗಿನ ಭಾಗ ಮಣ್ಣಿನಲ್ಲಿ ಹೂತುಹೋಗಿರುವುದರಿಂದ ಐತಿಹಾಸಿಕ ಧಾಖಲೆಯೊಂದು ನಶಿಸಿ ಹೋಗುವ ಸಂಭವ ಇದ್ದು ಕೂಡಲೇ ಐತಿಹಾಸಿಕ ಪ್ರಾಮುಖ್ಯತೆ ಸಾರುವ ವೀರಗಲ್ಲನ್ನು ರಕ್ಷಣೆ ಮಾಡಲು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳು ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 