ಗುತ್ತಿಗೆ ಆಧಾರ ಕಾರ್ಮಿಕರ ನೇಮಕ ದಲಿತರ ಕಡೆಗನನೆ: ಬ್ಯಾಹಟ್ಟಿ

ಗುತ್ತಿಗೆ ಆಧಾರ ಕಾರ್ಮಿಕರ ನೇಮಕ ದಲಿತರ ಕಡೆಗನನೆ: ಬ್ಯಾಹಟ್ಟಿ Hiring contract workers is a disregard for Dalits: Byahatti

ಗುತ್ತಿಗೆ ಆಧಾರ ಕಾರ್ಮಿಕರ ನೇಮಕ ದಲಿತರ ಕಡೆಗನನೆ: ಬ್ಯಾಹಟ್ಟಿ

ಶಿಗ್ಗಾವಿ 10: ಡಾ.ಬಿ.ಆರ್‌. ಅಂಬೇಡ್ಕರ ಸಂಕೀರ್ಣ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ದಲಿತ ಕಾರ್ಮಿಕರನ್ನು ನೇಮಕ ಮಾಡದೆ ಕಡೆಗಣಿಸಿದ್ದಾರೆ ಎಂದು ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ ಹೇಳಿದರು.  ಪಟ್ಟಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಮೂರ್ತಿ ಹಾಗೂ ಸಂಕೀರ್ಣ ಕಚೇರಿಯಲ್ಲಿ ಸ್ವಚ್ಛತೆಯ ಕೊರತೆ ಇರುವುದರಿಂದ ದಿ. 25 ಮಾರ್ಚ್‌ 2025 ರಂದು ನಡೆದ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡ ಕುಂದು ಕೊರತೆಯ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸದರಿ ಕಟ್ಟಡವು ಸ್ವಚ್ಛತೆ ಇಲ್ಲದೆ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರಿನ ಕಟ್ಟಡಕ್ಕೆ ಕಳಂಕ ಬರುವುದರಿಂದ ಸಭೆಯಲ್ಲಿ 27 ಮಾರ್ಚ ರಂದು ಆರೋಪ ಮಾಡಿದಾಗ ಸ್ವತಃ ಜಿಲ್ಲಾಧಿಕಾರಿಗಳೇ ಸದರಿ ಸ್ಥಳಕ್ಕೆ ಆಗಮಿಸಿ ಕಟ್ಟಡವನ್ನು ವೀಕ್ಷಿಸಿದಾಗ ಆರೋಪ ಕಂಡು ಬಂದಿದ್ದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತರಾಟೆಯನ್ನು ತೆಗೆದುಕೊಂಡು ಸ್ವಚ್ಛತೆಗಾಗಿ 4 ಜನ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ತಹಶೀಲ್ದಾರರಿಗೆ ಸೂಚಿಸಿದ್ದರ ಆದೇಶದ ಮೇಲೆ 4 ಜನ ಕಾರ್ಮಿಕರನ್ನು ನೇಮಕ ಮಾಡಲು ಟೆಂಡರನ್ನು ಕರೆದಿದ್ದು, ಟೆಂಡರ ಸಹ ಪತ್ರಿಕಾ ಪ್ರಕಟಣೆಯಿಲ್ಲದೆ ಕಾನೂನು ಬಾಹಿರವಾಗಿದೆ ಮತ್ತು ಕಾನೂನು ಬಾಹಿರ ಟೆಂಡರನ್ನು ಪಡೆದ ಗುತ್ತಿಗೆದಾರ ಒಂದೇ ಸಮುದಾಯದ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುತ್ತಾರೆ ಆದರೆ ದಲಿತ ಕಾರ್ಮಿಕರನ್ನು ನೇಮಕವನ್ನು ಮಾಡದೆ ಕಡೆಗಣಿಸಿ ಸಾಮಾಜಿಕ ನ್ಯಾಯಕ್ಕೆ ದಕ್ಕೆ ಉಂಟಾಗಿದ್ದು ಆದಷ್ಟು ಬೇಗ ಈ ಲೋಪದೋಷವನ್ನು ಸರಿಪಡಿಸಿ, ಕನಿಷ್ಠ ಪಕ್ಷ ಇಬ್ಬರು ಪರಿಶಿಷ್ಟ ಜಾತಿ, ಪಂಗಡ ಕಾರ್ಮಿಕರನ್ನು ನೇಮಕ ಮಾಡುವ ಮುಖಾಂತರ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.  ಈ ಸಂದರ್ಭದಲ್ಲಿ ಸಮಾಜದ ಸದಸ್ಯರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.