ಹಿರೇಬೆಣಕಲ್ ಶಿಲಾಯುಗದ ನೆಲೆ: ಪ್ರವಾಸೋದ್ಯಮದ ಹೊಸ ಹುಮ್ಮಸ್ಸು, ಆದರೆ ಮೂಲಭೂತ ಸೌಕರ್ಯಗಳ ಕೊರತೆ
Hirebenakal Stone Age site: New impetus for tourism, but lack of infrastructure
ಗಂಗಾವತಿ 29: ಇತ್ತೀಚೆಗೆ ಹಿರೇಬಣಕಲ್ ಶಿಲಾಯುಗದ ನೆಲೆಯು ಹೆಚ್ಚು ಜನಪ್ರಿಯವಾಗುತ್ತಿದೆ. ರಾಜ್ಯದ ಮೂಲೆಮೂಲೆಗಳಿಂದ ಮತ್ತು ದೇಶ-ವಿದೇಶಗಳಿಂದ ಸಹಸ್ರಾರು ಜನರು ಈ ಐತಿಹಾಸಿಕ ಸ್ಥಳವನ್ನು ನೋಡಲು ಬರುತ್ತಿದ್ದಾರೆ. ಆದರೆ ನೆಲೆಗೆ ಹೋಗುವ ಮಾರ್ಗ ಮತ್ತು ಅಲ್ಲಿ ಇರುವ ಮೂಲಭೂತ ಸೌಕರ್ಯಗಳ ಕೊರತೆಯು ದೊಡ್ಡ ಸವಾಲಾಗಿ ಪರಿಣಮಿಸಿದೆ. ನೆಲೆಗೆ ಹೋಗುವ ಹಿರೇಬೆಣಕಲ್ ಗ್ರಾಮದ ರಸ್ತೆ ತುಂಬಾ ಹದಗೆಟ್ಟಿದ್ದು ಕೊಳಚೆ ನೀರು ರಸ್ತೆಗಳಲ್ಲಿ ಹರಿದಾಡುತ್ತಿವೆೆ. ನೆಲೆಗೆ ತಿರುವು ತೆಗೆದುಕೊಳ್ಳುವ ಪ್ರಮುಖ ಸೇತುವೆ ಶಿಥಿಲಾವಸ್ಥೆಗೊಂಡು ಯಾವುದೇ ಸಮಯದಲ್ಲಿ ಬೀಳುವ ಅಪಾಯದಲ್ಲಿದೆ. ದೊಡ್ಡ ವಾಹನ ತಂದ ಪ್ರವಾಸಿಗರು ತಮ್ಮ ವಾಹನಗಳನ್ನು ಸುಮಾರು 500 ಮೀಟರ್ ದೂರದಲ್ಲಿ ನಿಲ್ಲಿಸಿ ನೆಲೆಯ ಕೆಳಭಾಗ ತಲುಪಬೇಕಿದೆ . ಸಣ್ಣ ವಾಹನಗಳು ಕಾರು ಬೈಕ್ಗಳು ಮಾತ್ರ ನೆಲೆಯ ಕೆಳಭಾಗದತನ ಹೋಗುತ್ತವೆ. ನೆಲೆಯ ಬಳಿ ವಾಹನ ನಿಲ್ಲಿಸಲು ಸ್ಥಳವಿಲ್ಲದೇ ರಸ್ತೆಯಲ್ಲಿ ವಾಹನ ನಿಲ್ಲಿಸಬೇಕಾಗುತ್ತಿದೆ. ಇದರಿಂದ ಸ್ಥಳೀಯ ರೈತರೊಂದಿಗೆ ವಾಗ್ವಾದಗಳ ಸನ್ನಿವೇಶಗಳು ಉಂಟಾಗಿವೆ.ನೆಲೆಗೆ ಚಾರಣ ಮಾಡುವಾಗ ದಾರಿಯಲ್ಲಿರುವ ದೊಡ್ಡ ಗುಂಡುಗಳಿಂದಾಗಿ, ನಡೆಯುವಾಗ ಕಾಲು ಜಾರುವ ಅಪಾಯ ಹೆಚ್ಚಿದೆ. ಚಾರಣದ ನಂತರ ಕಾಲುನೋವು ಸರ್ವೇ ಸಾಮಾನ್ಯವಾಗಿದೆ. ಈ ದಾರಿಯನ್ನು ಸಮತಟ್ಟಾಗಿ ಮಾಡಿ ಸಹಜವಾಗಿ ನಡೆಯಲು ಅನುಕೂಲವಾಗುವಂತೆ ಮಾಡಬೇಕಾಗಿದೆ.
ನೆಲೆಯ ಗಮ್ಯ ಸ್ಥಳದಲ್ಲಿ ಪೂರ್ವ ದಿಕ್ಕಿನಲ್ಲಿರುವ ಕೆರೆಗೆ ಸುತ್ತಮುತ್ತಲಿನ ದನ-ಕುರಿಗಳು ಶೀಲಾಕೋಣೆೆಗಳಿರುವ ಕಾಲುದಾರಿಯಲ್ಲಯೇ ಹೋಗಿ ನೀರು ಕುಡಿಯುತ್ತಿವೆ. ದನಗಳ ಸಂಖ್ಯೆ ಹೆಚ್ಚಾದಾಗ, ಶಿಲಾ ಕೋಣೆಗಳಿಗೆ ಹಾನಿಯಾಗುವ ಅಪಾಯ ಇದೆ, ನೆಲೆಗೆ ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲದೆೆ ತುಂಬಾ ಅಪಾಯದಲ್ಲಿದೆ.
ನೆಲೆಗೆ ಹೋಗುವ ಚಾರಣ ಮಾರ್ಗವನ್ನು ಸುಗಮಗೊಳಿಸುವುದು, ಕ್ಯಾಮೆರಾ ಅಳವಡಿಕೆ, ವಾಚಿಂಗ್ ಟವರ್, ಪ್ರವಾಸಿಗರಿಗೆ ವಾಷಿಂಗ್ ರೂಮ್, ಬಾತ್ರೂಮ್ ಮತ್ತು ವಾಹನ ನಿಲ್ದಾಣ ಸೌಲಭ್ಯಗಳನ್ನು ಒದಗಿಸಲು ಆರು ತಿಂಗಳ ಹಿಂದೆ 80 ಲಕ್ಷ ರೂಪಾಯಿಗಳ ಟೆಂಡರ್ ಕರೆ ನೀಡಲಾಗಿತ್ತು. ಆದರೆ ಈ ಕೆಲಸಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳು ತ್ವರಿತವಾಗಿ ನೆಲೆಗೆ ಭೇಟಿ ನೀಡಿ, ಕುಂದು-ಕೊರತೆಗಳನ್ನು ನೇರವಾಗಿ ಗಮನಿಸಬೇಕು ಎಂದು ಚಾರಣ ಬಳಗದ ಮುಖಂಡ ಪರಸಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಗುಡ್ಲಾನೂರ್ ಕೋರಿದ್ದಾರೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಎಲ್ಲಾ ಅಗತ್ಯ ಕಾರ್ಯಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ವಿನಂತಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 