ಹಿರಾಶುಗರ ಕಾರಖಾನೆಯ 2024-25ನೇ ಹಂಗಾಮಿನ ಪೂರ್ತಿ ಕಬ್ಬಿನ ಬಿಲ್ಲ ಪಾವತಿ : ಚೇಅರಮನ್ ಕಲ್ಲಟ್ಟಿ

Hira Sugar Factory to pay sugarcane bill for entire 2024-25 season: Chairman Kallatti

ಹಿರಾಶುಗರ ಕಾರಖಾನೆಯ 2024-25ನೇ ಹಂಗಾಮಿನ ಪೂರ್ತಿ ಕಬ್ಬಿನ ಬಿಲ್ಲ ಪಾವತಿ : ಚೇಅರಮನ್ ಕಲ್ಲಟ್ಟಿ   

ಸಂಕೇಶ್ವರ : ಪ್ರಸಕ್ತ 2024-25ನೇ ಹಂಗಾಮಿನ ಮುಕ್ತಾಯದ ವರೆಗೆ ಹಿರಾಶುಗರ ಕಾರಖಾನೆ 5ಲಕ್ಷ 20,000 ಟನ್ ಕಬ್ಬು ನುರಿಸಲಾಗಿದ್ದು,  ಕಬ್ಬು ಪೂರೈಸಿದ ಪೂರ್ತಿ ಕಬ್ಬಿನ ಬಿಲ್ಲು ಹಾಗೂ ಕಬ್ಬು ಕಟಾವು ಹಾಗೂ ಸಾರಿಗೆ ಬಿಲ್ಲುಗಳನ್ನು ದಿ. 16ರಂದು ಅವರವರ ಬ್ಯಾಂಕ ಖಾತೆಗಳಿಗೆ ಜಮಾ ಮಾಡಿರುವದಾಗಿ ಕಾರಖಾನೆಯ ಚೇಅರಮನ್ ಬಸವರಾಜ ಕಲ್ಲಟ್ಟಿ ಅವರು ಅವರು ತಿಳಿಸಿದರು.  

ಹಿರಾಶುಗರ ಕಾರಖಾನೆಯ ಮಾರ್ಗದರ್ಶಕ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅರಭಾಂವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತ್ರತ್ವ ಹಾಗೂ ಮಾರ್ಗದರ್ಶನದಲ್ಲಿ ಮುಂಬರುವ 2025-26ನೇ ಹಂಗಾಮಿನಲ್ಲಿ ಕೈಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಕೊಂಡು ಸಮಯಕ್ಕೆ ಸರಿಯಾಗಿ ರೈತರ ಕಬ್ಬನ್ನು ನುರಿಸಿ ಬಿಲ್ಲು ಪಾವತಿಸಲಾಗುವದೆಂದು ತಿಳಿಸಿದರು ಅಲ್ಲದೆ ರೈತ ಬಾಂಧವರು ತಾವು ಬೆಳೆಯುವ ಕಬ್ಬನ್ನು ತಮ್ಮದೇ ಆದ ಹಿರಾಶುಗರ ಕಾರಖಾನೆಗೆ ಪೂರೈಸಿ ಸಹಕರಿಸುವಂತೆ ರೈತ ಬಾಂಧವರಲ್ಲಿ ಕೋರಿದರು.  

ಕಾರಖಾನೆಯ ಆಡಳಿತ ಮಂಡಳಿ ವೈಸ್ ಚೇಅರಮನ್ನ ಅಶೋಕ ಪಟ್ಟಣಶೆಟ್ಟಿ, ಸಂಚಾಲಕರಾದ  ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶ್ರೀಮತಿ ಶಾರದಾ ಪಾಟೀಲ, ಭಾರತಿ ಹಂಜಿ ಹಾಗೂ ಕಾರಖಾನೆಯ ವ್ಯವಸ್ಥಾಪಕ ನಿರ್ದೆಶಕ ಸಾತಪ್ಪ ಕರ್ಕಿನಾಯಿಕ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.