ಹಿಂದುಗಳು ಸಂಘಟಿತರಾಗಬೇಕು ಇಲ್ಲವಾದಲ್ಲಿ ಉಳಿಗಾಲವಿಲ್ಲ ಎಂದು: ಡಾ, ಪ್ರವೀಣಭಾಯಿ
Hindus must organize or they will not survive: Dr. Praveenbhai
ಜಮಖಂಡಿ 19 : ಹಿಂದುಗಳು ಸಂಘಟಿತರಾಗಬೇಕು ಇಲ್ಲವಾದಲ್ಲಿ ಉಳಿಗಾಲವಿಲ್ಲ ಎಂದು ವಿಶ್ವಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಮುಖಂಡ ಡಾ, ಪ್ರವೀಣಭಾಯಿ ತೊಗಾಡಿಯಾ ಹೇಳಿದರು.
ನಗರದ ಎಸ್‌ಆರ್‌ಎ ಕ್ಲಬ್‌ನಲ್ಲಿ ಏರಿ್ಡಸಿದ್ದ ಹಿಂದು ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದದಲ್ಲಿ ಮಾತನಾಡಿದ ಅವರು, ಹಿಂದುಗಳ ಸಂಘಟನೆಗಾಗಿ ದೇಶ ಸುತ್ತುತ್ತಿದೆವೆ. ಐದು ನಿಯಮಗಳನ್ನು ಪ್ರತಿಯೊಬ್ಬ ಹಿಂದುಗಳು ಪಾಲಿಸಬೇಕು, ಹಿಂದುಗಳಿಂದ ಖರೀದಿ, ಹಿಂದುಗಳಿಗೆ ನೌಕರಿ, ಎರಡಕ್ಕೂ ಹೆಚ್ಚು ಮಕ್ಕಳನ್ನು ಪಡೆಯುವದು, ಹಿಂದು ಪರ ಕಾನೂನು ತರುವದು, ಹಿಂದುಗಳು ಸುರಕ್ಷಿತ, ಸಮೃದ್ಧ, ಸನ್ಮಾನದಿಂದ ಬದುಕಲು ಯೋಜನೆ ರೂಪಿಸುವದು ನಮ್ಮ ಉದ್ದೇಶವಾಗಿದೆ ಎಂದರು.
ಹಿಂದುಗಳು ಅಲ್ಪಸಂಖ್ಯಾತರಾದರೇ ಉಳಿಗಾಲವಿಲ್ಲ ವಿಶ್ವದಲ್ಲಿ ನೇಪಾಳ ಮತ್ತು ಭಾರತ ಎರಡೇ ದೇಶಗಳು ಹಿಂದು ಬಾಹುಳ್ಯ ಹೊಂದಿವೆ. ಹಿಂದುಗಳ ನಾಡಾಗಿದ್ದ ಅಫಘಾನಿಸ್ಥಾನ, ಪಾಕಿಸ್ಥಾನಗಳಲ್ಲಿ ಹಿಂದುಗಳೇ ಇಲ್ಲದಂತಾಗಿದೆ. ಕಾಶ್ಮೀರದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದರಿಂದ ತಮ್ಮ ಸ್ಥಳವನ್ನು ಬಿಟ್ಟು ಓಡಿ ಹೋಗಬೇಕಾಯಿತು. 15 ಲಕ್ಷ ಸೇನೆ ಇದ್ದರೂ ಹಿಂದುಗಳ ರಕ್ಷಣೆ ಮಾಡಲು ಸಾಧ್ಯವಾಗದಿರುವದು ದುರಂತವಾಗಿದೆ. ವಿಶ್ವದ 800 ಕೋಟಿ ಜನಸಂಖ್ಯೆಯಲ್ಲಿ ಹಿಂದುಗಳು ಸಂಖ್ಯೆ ಕೇವಲ 110ಕೋಟಿ, 1947ರಲ್ಲಿ ದೇಶದ 86ಶೇ ಹಿಂದು ಜನಸಂಖ್ಯೆ ಶೇ.78 ಕುಸಿತವಾಗಿದೆ. ಶೇ.6 ರಷ್ಟಿದ್ದ ಮುಸ್ಲಿಂರು ಶೇ.15ರಷ್ಟಿದ್ದಾರೆ. ಇನ್ನು 75 ವರ್ಷಗಳಲ್ಲಿ 110 ಕೋಟಿಯಿಂದ 50 ಕೋಟಿಗೆ ಹಿಂದುಗಳ ಜನಸಂಖ್ಯೆ ತಲುಪಲಿದೆ. ಮುಸಲ್ಮಾನರು 60 ಕೋಟಿಯಷ್ಟಾಗುತ್ತಾರೆ ಅಗ ಆಡಳಿತ, ಸೇನೆ, ಅಧಿಕಾರ ಎಲ್ಲವೂ ಅವರ ಬಳಿಯಲ್ಲಿರುತ್ತದೆ. ಆಗ ಹಿಂದುಗಳಿಗೆ ಉಳಿಗಾಲವಿಲ್ಲ ಅದಕ್ಕಾಗಿ ಹಿಂದೂ ಸಮಾಜ ಸಂಘಟಿತರಾಗದೇ ಬೇರೆ ಮಾರ್ಗವಿಲ್ಲ ಎಂದರು.
ಹಿಂದುಗಳನ್ನು ಸಂಘಟಿಸಿ ಹಿಂದೂಪರ ಕಾನೂನು ತರುವದು, ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ತರುವದು, 2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಪಡೆದರೆ ಎಲ್ಲಾ ಸರ್ಕಾರಿ ಸೌಲಭ್ಯ ಹಾಗೂ ಮತದಾನದ ಹಕ್ಕನ್ನು ಕಿತ್ತುಕೊಳ್ಳುವದು, ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲದಂತಹ ಕಠಣ ಕಾನೂನು ಜಾರಿಯಾಗಬೇಕು ಎಂಬುದು ತಮ್ಮ ಹೋರಾಟದ ಮುಖ್ಯ ಉದ್ದೇಶವಾಗಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಹಾಕಬೇಕು, ದೇಶವನ್ನು ಹಿಂದೂ ರಾಷ್ಟ್ರವಾಗಿ ಮಾರಿ್ಡಸಬೇಕು, ರಾಮಮಂದಿರ ಹೋರಾಟದಲ್ಲಿ ಜಯ ಗಳಿಸಿದ್ದೇವೆ ಅದರಂತೆ ಹಿಂದುಗಳಿಗೆ ಬೆಂಬಲಿಸುವದು, ಸಹಕಾರ ನೀಡುವದು ಮತ್ತು ತರಬೇತಿ ನೀಡುವ ಕೆಲಸವಾಗಬೇಕಿದೆ. ದೇಶದಲ್ಲಿ ತ್ರಿಶೂಲ ದೀಕ್ಷೆಯಂಥಹ ಕಾರ್ಯಕ್ರಮ ಮಾಡಿದ್ದೇನೆ, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸುವ ಕೆಲಸ ಮಾಡುತ್ತಿದ್ದೇನೆ. ಪ್ರತಿ ಕೇರಿಗಳಲ್ಲಿ ಶನಿವಾರ ಹನುಮಾನ ಚಾಲೀಸಾದ ಸಾಮೂಹಿಕ ಪಾರಾಯಣದ ಸಂಕಲ್ಪಮಾಡಬೇಕು.
ಇದರಿಂದ ಸಮಾಜ ಜಾಗೃತವಾಗಲಿದೆ. ಹಿಂದುಗಳ ಜಾಗೃತಿಗಾಗಿ ಕಾರ್ಯಕರ್ತರು ಪ್ರಯತ್ನಿಸಬೇಕು, ಹಿಂದು ಸೇವಾ ಅಭಿಯಾನ ಹೆಲ್ಪಲೈನ್ ಸ್ಥಾಪಿಸಬೇಕು.ಮಹಾಕುಂಭದಲ್ಲಿ 1.25ಕೋಟಿ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ ಎಂದ ಅವರು, ಸಂಕಲ್ಪದಿಂದ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ಇದಕ್ಕಾಗಿ ದೇಶದಲ್ಲಿ ಉಪಾಯ ಪೂರ್ವಕ ಕೆಲಸಮಾಡಬೇಕಾಗಿದೆ ಎಂದರು.ವೇದಿಕೆಯಲ್ಲಿ ವಿಎಚ್‌ಪಿ ರಾಜ್ಯ ಮುಖಂಡ ರಮೇಶ ಕುಲಕರ್ಣಿ, ಹುಲ್ಯಾಳದ ದುಂಡಯ್ಯ ಸ್ವಾಮಿಗಳು, ಉದಯ ಮಂಕಣಿ, ಸುರೇಶ ಮೀಸಿ, ನಿತಿನ ಮಹಬಳಶೆಟ್ಟಿ ಉಮೇಶ ಆಲಮೇಲಕರ ಇದ್ದರು. ರಾಯಬಾ ಜಾಧವ ಸ್ವಾಗತಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 